ಕರ್ನಾಟಕ

karnataka

ETV Bharat / sitara

ಸ್ಟುಡಿಯೋಗೆ ಹೊಸ ರೂಪ ನೀಡಿದ ರವಿ ಬಸ್ರೂರ್​: ಕೆಜಿಎಫ್​​​-2 ಕ್ಕೆ ಭರ್ಜರಿ ಟ್ಯೂನ್ ಕಂಪೋಸ್​​

ಕೆಜಿಎಫ್​​​​ಗೆ ಸಂಗೀತ ಸಂಯೋಜಿಸಿದ್ದ ಸಂಗೀತ ನಿರ್ದೇಶಕ ರವಿ ಬಸ್ರೂರು ತಮ್ಮ ಸ್ಟುಡಿಯೋಗೆ ಹೊಸ ರೂಪ ನೀಡಿದ್ದಾರೆ. ಇತ್ತೀಚೆಗೆ ಕೆಜಿಎಫ್ ತಂಡ ಹೊಸ ಸ್ಟುಡಿಯೋಗೆ ಭೇಟಿ ನೀಡಿದ್ದು ಬಸ್ರೂರು ಇನ್ನೂ ಹೆಚ್ಚಿನ ಹುಮ್ಮಸ್ಸಿನಿಂದ ಕೆಜಿಎಫ್​​​-2ಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರಂತೆ.

By

Published : Apr 21, 2019, 11:28 AM IST

ರವಿ ಬಸ್ರೂರ್​​​ ಸ್ಟುಡಿಯೋ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್​ ಸಿನಿಮಾ ಕಳೆದ ವರ್ಷ ವಿಶ್ವಾದ್ಯಂತ ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿತ್ತು. ಅಷ್ಟೇ ಅಲ್ಲ ಸಾಕಷ್ಟು ದಾಖಲೆ ಸೃಷ್ಟಿಸಿ ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್​​ವುಡ್​​ನತ್ತ ತಿರುಗಿ ನೋಡುವಂತೆ ಮಾಡಿತ್ತು.

ಪ್ರಶಾಂತ್ ನೀಲ್ , ರವಿ ಬಸ್ರೂರು
ಸ್ಟುಡಿಯೋ ಗೋಡೆ ಮೇಲೆ ವಾದ್ಯಗಳ ಡಿಸೈನ್​​

ಮತ್ತೆ ಕೆಜಿಎಫ್​​ ಭಾಗ 2 ರ ಮೂಲಕ ಕಮಾಲ್ ಮಾಡಲು ಹೊರಟಿದ್ದು ಮೊದಲ ಭಾಗ ನೋಡಿದ ಎಲ್ಲರೂ ಎರಡನೇ ಭಾಗಕ್ಕಾಗಿ ಕಾಯುವಂತಾಗಿದೆ. ಚಾಪ್ಟರ್ 2ನ್ನು ಭರ್ಜರಿಯಾಗಿ ತೆರೆಗೆ ತರಲು ಪ್ರಶಾಂತ್ ನೀಲ್ ಹಾಗೂ ತಂಡ ಸಕಲ ಸಿದ್ಧತೆ ನಡೆಸಿದೆ. ಇನ್ನು ರಾಕಿಂಗ್ ಸ್ಟಾರ್ ಯಶ್ ಮಂಡ್ಯದಲ್ಲಿ ಸುಮಲತಾ ಅಂಬರೀಶ್​​​​​ ಪರ ಪ್ರಚಾರದಲ್ಲಿ ಬ್ಯುಸಿಯಾಗಿದ್ದರಿಂದ ಪ್ರಶಾಂತ್ ನೀಲ್ ಹಾಗೂ ಸಂಗೀತ ನಿರ್ದೇಶಕ ರವಿ ಬಸ್ರೂರ್ ಕೆಜಿಎಫ್​ ಚಾಪ್ಟರ್- 2 ಹಾಡುಗಳ ಸಂಯೋಜನೆಯಲ್ಲಿ ತೊಡಗಿದ್ದರು.

ಸ್ಟುಡಿಯೋಗೆ ಭೇಟಿ ನೀಡಿದ್ದ ಕೆಜಿಎಫ್​ ತಂಡ
ಬಸ್ರೂರ್​​​ ಸ್ಟುಡಿಯೋ ಹೊಸ ರೂಪ

ಈ ಗ್ಯಾಪ್​​ನಲ್ಲಿ ಸಂಗೀತ ನಿರ್ದೇಶಕ ರವಿ ಬಸ್ರೂರು ತಮ್ಮ ಮ್ಯೂಸಿಕ್​ ಸ್ಟುಡಿಯೋವನ್ನು ಮಿರಮಿರ ಹೊಳೆಯುವ ಹಾಗೆ ಮಾಡಿದ್ದಾರೆ. ಅಂದರೆ ಬಸ್ರೂರು ತಮ್ಮ ಸ್ಟುಡಿಯೋವನ್ನು ರೀಡಿಸೈನ್ ಮಾಡಿಸಿದ್ದಾರೆ. ಕೆಂಪು ಹಾಗೂ ಬಿಳಿ ಕಾಂಬಿನೇಷನ್​ನಲ್ಲಿ ಸ್ಟುಡಿಯೋ ಡಿಸೈನ್ ಮಾಡಿಸಿದ್ದಾರೆ. ಸ್ಟುಡಿಯೋ ತುಂಬೆಲ್ಲಾ ವಾದ್ಯಗಳ ಚಿತ್ರವನ್ನೂ ಬಿಡಿಸಿದ್ದಾರೆ. ಕೆಜಿಎಫ್ ಹಾಡುಗಳನ್ನು ಕಂಪೋಸ್ ಮಾಡಿದ್ದ ಸ್ಟುಡಿಯೋ ಈಗ ಹೊಸ ರೂಪ ಪಡೆದಿದ್ದು ಹೊಸ ಉತ್ಸಾಹದೊಂದಿಗೆ ಬಸ್ರೂರ್ ಟ್ಯೂನ್ ಕಂಪೋಸ್ ಮಾಡೋಕೆ ರೆಡಿಯಾಗಿದ್ದಾರೆ.

ರವಿ ಬಸ್ರೂರ್​​​ ಸ್ಟುಡಿಯೋ

ಬಸ್ರೂರ್ ಅವರ ಹೊಸ ಸ್ಟುಡಿಯೋಗೆ ರಾಕಿ ಭಾಯ್ ಸೇರಿದಂತೆ ಇಡೀ ಟೀಂ ಭೇಟಿ ನೀಡಿದ್ದು ಸ್ಟುಡಿಯೋ ಹೊಸ ರೂಪಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಜಿಎಫ್ ತಂಡದ ಸ್ಟುಡಿಯೋ ಭೇಟಿಯಿಂದ ಬಸ್ರೂರ್​​ ಅವರಲ್ಲಿ ಮತ್ತಷ್ಟು ಹುಮ್ಮಸ್ಸು ಹೆಚ್ಚಾಗಿದೆಯಂತೆ.

For All Latest Updates

TAGGED:

ABOUT THE AUTHOR

...view details