ಕರ್ನಾಟಕ

karnataka

ಮುನ್ಸೂಚನೆ ಇಲ್ಲದೇ ಪ್ರೇಕ್ಷಕರ ಮೇಲೆ ಹಾರಿದ ರಣ್​ವೀರ್​​... ಹಲವರಿಗೆ ಗಾಯ, ನೆಟಿಜನ್ಸ್ ಕೆಂಗಣ್ಣು​​

ಲ್ಯಾಕ್ಮೆ ಫ್ಯಾಷನ್ ವೀಕ್​​ ಫಿನಾಲೆಯಲ್ಲಿ ರಣ್​ವೀರ್​ ಸಿಂಗ್​ ಸ್ಟೈಲಾಗಿ ರ‍್ಯಾಂಪ್​​​ ವಾಕ್ ಮಾಡಿದ್ದಾರೆ. ಇಷ್ಟೇ ಮಾಡಿದ್ದರೆ ಏನೂ ಆಗುತ್ತಿರಲಿಲ್ಲ. ಅತ್ಯುತ್ಸಾಹದಲ್ಲಿ ತಮ್ಮ ಚಿತ್ರದ ಹಾಡನ್ನು ಹಾಡುತ್ತಾ ರಣ್​ವೀರ್​ ಮುನ್ಸೂಚನೆ ಇಲ್ಲದೆ ಮುಂದಿದ್ದ ಪ್ರೇಕ್ಷಕರ ಮೇಲೆ ಹಾರಿದ್ದಾರೆ.

By

Published : Feb 6, 2019, 7:39 PM IST

Published : Feb 6, 2019, 7:39 PM IST

ರಣ್​ವೀರ್​ ಸಿಂಗ್​

ಸಿಂಬಾ ಚಿತ್ರದ ಭರ್ಜರಿ ಸಕ್ಸಸ್​ ಅಲೆಯಲ್ಲಿರುವ ರಣ್​​​ವೀರ್​ ಸಿಂಗ್​​ ತಮ್ಮ ಮುಂಬರುವ ಸಿನಿಮಾ ಗಲ್ಲಿ ಬಾಯ್​ ಪ್ರಮೋಷನ್​​ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಬಾಲಿವುಡ್​​ನ ಈ ಬಿಂದಾಸ್​ ನಟ ವಿಚಿತ್ರ ವಿಚಾರಕ್ಕೆ ಸುದ್ದಿಯಾಗಿದ್ದಾರೆ.

ಲ್ಯಾಕ್ಮೆ ಫ್ಯಾಷನ್ ವೀಕ್​​ ಫಿನಾಲೆಯಲ್ಲಿ ರಣ್​ವೀರ್​ ಸಿಂಗ್​ ಸ್ಟೈಲಾಗಿ ರ‍್ಯಾಂಪ್​​​ ವಾಕ್ ಮಾಡಿದ್ದಾರೆ. ಇಷ್ಟೇ ಮಾಡಿದ್ದರೆ ಏನೂ ಆಗುತ್ತಿರಲಿಲ್ಲ. ಅತ್ಯುತ್ಸಾಹದಲ್ಲಿ ತಮ್ಮ ಚಿತ್ರದ ಹಾಡನ್ನು ಹಾಡುತ್ತಾ ರಣ್​ವೀರ್​ ಮುನ್ಸೂಚನೆ ಇಲ್ಲದೆ ಮುಂದಿದ್ದ ಪ್ರೇಕ್ಷಕರ ಮೇಲೆ ಹಾರಿದ್ದಾರೆ.

ರಣ್​ವೀರ್​ ಅವರ ಅನಿರೀಕ್ಷಿತ ನಡೆಗೆ ನೆರೆದಿದ್ದ ಪ್ರೇಕ್ಷಕರು ಬೆಚ್ಚಿಬಿದ್ದಿದ್ದಾರೆ. ಸೂಚನೆ ಇಲ್ಲದೆ ಹಾರಿದ ಪರಿಣಾಮ ಕೆಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಪತ್ರಿಕೆಯೊಂದು ಈ ವಿಚಾರವನ್ನು ವರದಿ ಮಾಡಿದ್ದು, ಇದನ್ನು ಆಧರಿಸಿ ನೆಟಿಜನ್ಸ್​ ರಣ್​ವೀರ್​ ಅನಿರೀಕ್ಷಿತ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ABOUT THE AUTHOR

...view details