ಕರ್ನಾಟಕ

karnataka

ETV Bharat / sitara

ಹೊಂಬಾಳೆ ಫಿಲಂಸ್​ಗೆ ಸಿನಿಮಾ ಮಾಡ್ತಾರಾ ಸಿಂಪಲ್​ ಸ್ಟಾರ್ ರಕ್ಷಿತ್ ಶೆಟ್ಟಿ? - Simple star Rakshit Shetty

ಸಿಂಪಲ್​ ಸ್ಟಾರ್ ರಕ್ಷಿತ್ ಶೆಟ್ಟಿ ​ಹುಟ್ಟುಹಬ್ಬಕ್ಕೆ ವಿಜಯ್ ಕಿರಗಂದೂರು ವಿಶ್ ಮಾಡಿರುವುದು ಮುಂದೊಂದು ದಿನ ಅವರಿಬ್ಬರೂ ಒಂದು ಹೊಸ ಪ್ರಾಜೆಕ್ಟ್​ಗೆ ಕೈಜೋಡಿಸಲಿದ್ದಾರೆ ಮತ್ತು ಹೊಂಬಾಳೆ ಫಿಲಂಸ್​ಗೆ ರಕ್ಷಿತ್ ಸಿನಿಮಾ ಮಾಡಿಕೊಡಲಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದೆ.

Rakshit Shetty
ಹೊಂಬಾಳೆ ಫಿಲಂಸ್​ಗೆ ಸಿನಿಮಾ ಮಾಡ್ತಾರಾ ಸಿಂಪಲ್​ ಸ್ಟಾರ್ ರಕ್ಷಿತ್ ಶೆಟ್ಟಿ?

By

Published : Jun 7, 2021, 9:27 AM IST

ಸಿಂಪಲ್​ ಸ್ಟಾರ್ ರಕ್ಷಿತ್ ಶೆಟ್ಟಿ ಜೂನ್​ 6ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ 777 ಚಾರ್ಲಿ ಚಿತ್ರದ ಟೀಸರ್ ಮತ್ತು ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿವೆ. ರಕ್ಷಿತ್ ಹುಟ್ಟುಹಬ್ಬಕ್ಕೆ ಶುಭಕೋರಿ ಈ ಗಿಫ್ಟ್​ಗಳನ್ನು ಎರಡೂ ಚಿತ್ರತಂಡಗಳು ಕೊಟ್ಟಿವೆ. ಇನ್ನು ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ರಕ್ಷಿತ್​ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಇಲ್ಲಿ ಗಮನಸೆಳೆಯುವ ಒಂದು ಅಂಶವೆಂದರೆ, ಹೊಂಬಾಳೆ ಫಿಲಂಸ್​ನ ವಿಜಯ್ ಕುಮಾರ್ ಕಿರಗಂದೂರು ರಕ್ಷಿತ್ ಬರ್ತ್​ ಡೇಗೆ ಸೋಷಿಯಲ್ ಮೀಡಿಯಾ ಮೂಲಕ ವಿಶ್ ಮಾಡಿದ್ದಾರೆ. ಬಹಳ ದಿನಗಳಿಂದ ಹೊಂಬಾಳೆ ಫಿಲಂಸ್​ಗೆ ರಕ್ಷಿತ್ ಒಂದು ಸಿನಿಮಾ ಮಾಡಿಕೊಡಲಿದ್ದಾರೆ ಎಂಬ ಸುದ್ದಿಯೊಂದು ಕೇಳಿಬರುತ್ತಲೇ ಇತ್ತು. ಆದರೆ, ಹೊಂಬಾಳೆ ಫಿಲಂಸ್ ಆಗಲೀ, ರಕ್ಷಿತ್ ಶೆಟ್ಟಿ ಆಗಲೀ ಈ ಕುರಿತು ಸ್ಪಷ್ಟನೆ ನೀಡಿರಲಿಲ್ಲ. ಇದೀಗ ಸಿಂಪಲ್​ ಸ್ಟಾರ್ ​ಹುಟ್ಟುಹಬ್ಬಕ್ಕೆ ವಿಜಯ್ ಕಿರಗಂದೂರು ವಿಶ್ ಮಾಡಿರುವುದು ಮುಂದೊಂದು ದಿನ ಅವರಿಬ್ಬರೂ ಒಂದು ಹೊಸ ಪ್ರಾಜೆಕ್ಟ್​ಗೆ ಕೈಜೋಡಿಸಲಿದ್ದಾರೆ ಮತ್ತು ಹೊಂಬಾಳೆ ಫಿಲಂಸ್​ಗೆ ರಕ್ಷಿತ್ ಸಿನಿಮಾ ಮಾಡಿಕೊಡಲಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದೆ.

ಆದರೆ, ಈ ಸಿನಿಮಾ ಯಾವಾಗ ಆಗಬಹುದು? ಈ ವರ್ಷವಂತೂ ಡೌಟ್. ಏಕೆಂದರೆ, ಸದ್ಯಕ್ಕೆ ವಿಜಯ್​ ಕಿರಗಂದೂರು ಮತ್ತು ರಕ್ಷಿತ್ ಇಬ್ಬರ ಕೈಯಲ್ಲೂ ಒಂದಿಷ್ಟು ಚಿತ್ರಗಳಿವೆ. ಅವೆಲ್ಲವನ್ನೂ ಮುಗಿಸಿ ಮುಂದಿನ ವರ್ಷ ಇಬ್ಬರೂ ಒಂದು ಚಿತ್ರಕ್ಕೆ ಕೈಜೋಡಿಸಿದರೆ ಆಶ್ಚರ್ಯವಿಲ್ಲ. ಬಹುಶಃ ಮುಂದಿನ ವರ್ಷ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ ಹೊಂಬಾಳೆ ಫಿಲಂಸ್ ವತಿಯಿಂದ ಹೊಸ ಚಿತ್ರದ ಘೋಷಣೆ ಅಥವಾ ಪೋಸ್ಟರ್ ಬಿಡುಗಡೆಯಾಗಬಹುದು ಎಂದು ಹೇಳಲಾಗುತ್ತಿದೆ. ಹೊಂಬಾಳೆ ಫಿಲಂಸ್ ಮತ್ತು ರಕ್ಷಿತ್ ಇಬ್ಬರೂ ಇದುವರೆಗೂ ಕೆಲವೇ ಜನರ ಜೊತೆಗೆ ಗುರುತಿಸಿಕೊಂಡಿದ್ದಾರೆ ಮತ್ತು ತಮ್ಮದೇ ತಂಡಗಳ ಜೊತೆಗೆ ಕೆಲಸ ಮಾಡುತ್ತಾ ಬಂದಿದ್ದಾರೆ. ಈಗ ರಕ್ಷಿತ್ ಮತ್ತು ವಿಜಯ್​ ಒಟ್ಟಿಗೆ ಚಿತ್ರ ಮಾಡಿದರೆ, ಕನ್ನಡ ಚಿತ್ರರಂಗದ ಮಟ್ಟಿಗೆ ಇದು ಹೊಸ ಬೆಳವಣಿಗೆ ಎಂದರೆ ತಪ್ಪಿಲ್ಲ.

ಇದನ್ನೂ ಓದಿ:ಡಾ. ರಾಜ್​​​ಕುಮಾರ್​​ ಜೊತೆ ನಾಯಕಿಯಾಗಿ ಅಭಿನಯಿಸಿದ್ದ ನಟಿ‌ ಸುರೇಖಾ ವಿಧಿವಶ

ABOUT THE AUTHOR

...view details