ಕರ್ನಾಟಕ

karnataka

ರಜಿನಿಕಾಂತ್ ಆರೋಗ್ಯ ಸ್ಥಿರ...ಚಿಕಿತ್ಸೆ ಮುಂದುವರೆಸಿದ ವೈದ್ಯರು

ಹೈದರಾಬಾದ್​​ನ ಅಪೊಲೋ ಆಸ್ಪತ್ರೆಗೆ ದಾಖಲಾಗಿರುವ ರಜಿನಿಕಾಂತ್ ಆರೋಗ್ಯ ಸ್ಥಿರವಾಗಿದ್ದು ವೈದ್ಯರು ರಕ್ತದೊತ್ತಡ ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತಿದ್ದು ಚಿಕಿತ್ಸೆ ಮುಂದುವರೆಸಿದ್ದಾರೆ ಎನ್ನಲಾಗಿದೆ.

By

Published : Dec 26, 2020, 12:09 PM IST

Published : Dec 26, 2020, 12:09 PM IST

Rajinikanth
ರಜಿನಿಕಾಂತ್

ಹೈದರಾಬಾದ್​​: ರಕ್ತದೊತ್ತಡ ಸಮಸ್ಯೆಯಿಂದ ನಿನ್ನೆ ಹೈದರಾಬಾದ್​ನ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದ ಖ್ಯಾತ ತಮಿಳು ನಟ ರಜಿನಿಕಾಂತ್ ಆರೋಗ್ಯ ಸ್ಥಿರವಾಗಿದೆ ಎನ್ನಲಾಗಿದೆ. ಆಸ್ಪತ್ರೆ ವೈದ್ಯರು ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್​​​​​ನಲ್ಲಿ ರಜಿನಿಕಾಂತ್ ರಕ್ತದೊತ್ತಡವನ್ನು ನಿಯಂತ್ರಿಸಲು ವೈದ್ಯರು ಅವರಿಗೆ ಚಿಕಿತ್ಸೆ ಮುಂದುವರೆಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ನಟ ರಜಿನಿಕಾಂತ್ ಹೈದರಾಬಾದ್ ಅಪೊಲೋ ಆಸ್ಪತ್ರೆಗೆ ದಾಖಲು

ರಜಿನಿಕಾಂತ್ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಆಸ್ಪತ್ರೆ ಸಿಬ್ಬಂದಿಗಳು ಅಪ್​​​ಡೇಟ್ ನೀಡುತ್ತಿದ್ದು ಇಂದು ಸಂಜೆ ವೇಳೆಗೆ ಮತ್ತೊಮ್ಮೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಹೈದರಾಬಾದ್​ನಲ್ಲಿ ರಜಿನಿಕಾಂತ್ ಅಭಿನಯದ 'ಅಣ್ಣಾತೆ' ಚಿತ್ರದ ಶೂಟಿಂಗ್ ನಡೆಯುತ್ತಿದ್ದು ಕಳೆದ 10 ದಿನಗಳಿಂದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಆದರೆ ನಿನ್ನೆ ಇದ್ದಕ್ಕಿದ್ದಂತೆ ಅವರ ರಕ್ತದೊತ್ತಡದಲ್ಲಿ ಏರುಪೇರಾಗಿದ್ದು ಕೂಡಲೇ ಚಿತ್ರತಂಡ ರಜಿನಿ ಅವರನ್ನು ಅಪೊಲೋ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಭಿಮಾನಿಗಳು ಹಾಗೂ ಗಣ್ಯರು ರಜಿನಿಕಾಂತ್ ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಕಮಲ ಹಾಸನ್ ಕೂಡಾ ರಜಿನಿಕಾಂತ್ ಶೀಘ್ರ ಗುಣಮುಖರಾಗಲೆಂದು ಹಾರೈಸಿ ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details