ತುಪ್ಪದ ಹುಡುಗಿ ಎಂದೇ ಖ್ಯಾತಿ ಪಡೆದಿರುವ ರಾಗಿಣಿ ದ್ವಿವೇದಿ ಮೊನ್ನೆ ತಾನೇ ಪೌರ ಕಾರ್ಮಿಕರನ್ನು ಅವರ ಮನೆಗೆ ಕರೆದು ಕುಡಿಯಲು ಟೀ ಕೊಟ್ಟು ಅವರ ಕಷ್ಟ ಸುಖಗಳನ್ನು ಆಲಿಸಿದ್ದರು.
ಇದೀಗ ಅವರು ಮತ್ತೊಂದು ಕೆಲಸಕ್ಕೆ ಮುಂದಾಗಿದ್ದಾರೆ. ಅದೇನೆಂದರೆ ಪೊಲೀಸ್ ಇಲಾಖೆ ಸಿಬ್ಬಂದಿಗೆ ಅಗತ್ಯ ವಸ್ತುಗಳನ್ನು ಪ್ಯಾಕ್ ಮಾಡಿ ತಾವೇ ಖುದ್ದಾಗಿ ಯಲಹಂಕ ಪೊಲೀಸ್ ಸ್ಟೇಷನ್ಗೆ ತಂದು ನೀಡಿದ್ದಾರೆ.
ಪೊಲೀಸ್ ಇಲಾಖೆಗೆ ಸಹಾಯ ಮಾಡಿದ ರಾಗಿಣಿ ರಾಗಿಣಿ ದ್ವಿವೇದಿ ಅವರಿಗೆ ಪೊಲೀಸ್ ಇಲಾಖೆ ಕಷ್ಟ ಪಟ್ಟು ಮಾಡುತ್ತಿರುವ ಕೆಲಸದ ಬಗ್ಗೆ ಮೆಚ್ಚುಗೆ ಇದೆ. ಹಾಗೆಯೇ ಆಸ್ಪತ್ರೆಯಲ್ಲಿ ಈ ಸಂದಿಗ್ಧ ಸ್ಥಿತಿಯಲ್ಲಿ ‘ಕೋರೋನಾ ವೈರಸ್’ ಹೋಗಲಾಡಿಸಲು ಶ್ರಮ ಪಡುತ್ತಿರುವ ವೈದ್ಯರು ಹಾಗೂ ದಾದಿಯರಿಗೂ ತಮ್ಮ ಸಲಾಂ ಹೇಳಿದ್ದಾರೆ.
ರಾಗಿಣಿ ದ್ವಿವೇದಿ ಯಲಹಂಕ ಪೊಲೀಸ್ ಇಲಾಖೆಯ ಅನುಮತಿ ಪಡೆದು ಮುಖಗವಸು ಹಾಕಿಕೊಂಡು ಅಗತ್ಯ ವಸ್ತುಗಳನ್ನು ಪ್ಯಾಕ್ ಮಾಡಿ ಪೊಲೀಸ್ ಸ್ಟೇಷನ್ಗೆ ತಲುಪಿಸಿದ್ದಾರೆ.