ಕರ್ನಾಟಕ

karnataka

ETV Bharat / sitara

ವಿಜಯದಶಮಿಯಂದು ''ಪ್ರೇಮಂ ಪೂಜ್ಯಂ'' ಟ್ರೈಲರ್​ ರಿಲೀಸ್​​ - actor prem

ಇದೇ ವಿಜಯದಶಮಿ ಹಬ್ಬಕ್ಕೆ ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ ಪ್ರೇಮಂ ಪೂಜ್ಯಂ ಚಿತ್ರದ ಟ್ರೈಲರ್ ಬಿಡುಗಡೆ ಆಗಲಿದೆ.

'' Preham Poojyam '' Trailer will be Released on vijayadashami
ವಿಜಯದಶಮಿಯಂದು ''ಪ್ರೇಮಂ ಪೂಜ್ಯಂ'' ಟ್ರೈಲರ್​ ರಿಲೀಸ್​​

By

Published : Oct 13, 2021, 7:40 PM IST

ನಟ ಪ್ರೇಮ್ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳ ಮೂಲಕ ತನ್ನದೇ ಸ್ಟಾರ್ ಡಮ್ ಹೊಂದಿರುವ ನಟ. ತಮ್ಮ 25ನೇ ಸಿನಿಮಾ ಆದ ಪ್ರೇಮಂ ಪೂಜ್ಯಂ ಚಿತ್ರದ ಮೂಲಕ ಮತ್ತೆ ಸದ್ದು ಮಾಡಲಿದ್ದಾರೆ ಪ್ರೇಮ್​​. ಪೋಸ್ಟರ್ ಹಾಗೂ ಟೀಸರ್​ನಿಂದ ಕನ್ನಡ ಚಿತ್ರರಂಗ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿರುವ ಬಹು ನಿರೀಕ್ಷಿತ ಚಿತ್ರವಿದು.

ಈಗಾಗಲೇ ಸಣ್ಣ ಟೀಸರ್ ನಿಂದಲೇ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿರೋ ಪ್ರೇಮಂ ಪೂಜ್ಯಂ ಚಿತ್ರದ ಆಫಿಶಿಯಲ್ ಟ್ರೈಲರ್ ಬಿಡುಗಡೆ ಮಾಡೋದಕ್ಕೆ ನಿರ್ದೇಶಕ ರಾಘವೇಂದ್ರ ಬಿ.ಎಸ್ ತಂಡ ಸಜ್ಜಾಗಿದೆ‌. ಇದೇ ವಿಜಯದಶಮಿ ಹಬ್ಬಕ್ಕೆ ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ ಪ್ರೇಮಂ ಪೂಜ್ಯಂ ಚಿತ್ರದ ಟ್ರೈಲರ್ ಬಿಡುಗಡೆ ಆಗಲಿದೆ.

ಈಗಾಗಲೇ ಚಿತ್ರತಂಡ ಲವ್ ಆ್ಯಂಡ್​ ಫ್ರೆಂಡ್​ಶಿಪ್ ಪದಗಳಿಂದ ಕೂಡಿರುವ ಪೋಸ್ಟರ್ ರಿವೀಲ್ ಮಾಡಿದ್ದು, ಈ ಪೋಸ್ಟರ್​ನಲ್ಲಿ ನೆನಪಿರಲಿ ಪ್ರೇಮ್ ಹಾಗು ಮಾಸ್ಟರ್ ಆನಂದ್ ಗಮನ ಸೆಳೆಯುತ್ತಾರೆ.

ವಿಜಯದಶಮಿಯಂದು ''ಪ್ರೇಮಂ ಪೂಜ್ಯಂ'' ಟ್ರೈಲರ್​ ರಿಲೀಸ್​​

ಚಿತ್ರದ ಹೆಸರೇ ಹೇಳುವಂತೆ, ಪ್ರೇಮಂ ಪೂಜ್ಯಂ ರೊಮ್ಯಾಂಟಿಕ್‌ ಲವ್‌ ಸ್ಟೋರಿ ಹೊಂದಿರುವ ಹೊಸತನದ ಕತೆ. ಈ ಚಿತ್ರದಲ್ಲಿ ಪ್ರೀತಿಯ ಆರಾಧಕನಾಗಿ ಲವ್ಲೀ ಸ್ಟಾರ್‌ ಪ್ರೇಮ್‌ ಕಾಣಿಸಿಕೊಂಡರೆ, ಯುವನಾಯಕಿ ಬೃಂದಾ ಆಚಾರ್ಯ ಪ್ರೇಮ್​ಗೆ ಜೋಡಿಯಾಗಿದ್ದಾರೆ. ಇನ್ನು ಪ್ರೇಮ್ ಹಾಗೂ ಬೃಂದಾ ಅಲ್ಲದೇ ಈ ಚಿತ್ರದಲ್ಲಿ, ಐಂದ್ರಿತಾ ರೇ, ಸುಮನ್, ಮಾಸ್ಟರ್ ಆನಂದ್, ಸಾಧು ಕೋಕಿಲಾ, ಅನು ಪ್ರಭಾಕರ್ ತಪಸ್ವಿನಿ, ಹಿರಿಯ ನಿರ್ದೇಶಕ ಟಿ.ಎಸ್ ನಾಗಾಭರಣ ಸೇರಿದಂತೆ ದೊಡ್ಡ ತಾರ ಬಳಗ ಈ ಚಿತ್ರದಲ್ಲಿದೆ.

ಈ ಚಿತ್ರದ ಬಹುಮುಖ್ಯ ಹೈಲೆಟ್ಸ್ ಅಂದರೆ, ಮುನ್ನಾರ್‌ನಿಂದ ಡಾರ್ಜಿಲಿಂಗ್‌ವರೆಗೆ ಭಾರತದ ಹತ್ತಾರು ಬ್ಯೂಟಿಫುಲ್ ಲೊಕೇಶನ್​ಗಳಲ್ಲಿ ಈ ಚಿತ್ರವನ್ನು ಚಿತ್ರೀಕರಣ ಮಾಡಲಾಗಿದೆ. ಅಷ್ಟೇ ಅಲ್ಲ, ರವಿಚಂದ್ರನ್ ಅವರ ಪ್ರೇಮ ಲೋಕದಂತೆಯೇ, ಪ್ರೇಮಂ ಪೂಜ್ಯಂ ಚಿತ್ರ 12 ವಿಭಿನ್ನ ಬಗೆಯ ಹಾಡುಗಳನ್ನು ಒಳಗೊಂಡಿದೆ.

ವಿಜಯದಶಮಿಯಂದು ''ಪ್ರೇಮಂ ಪೂಜ್ಯಂ'' ಟ್ರೈಲರ್​ ರಿಲೀಸ್​​

ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ರಾಘವೇಂದ್ರ ಬಿ.ಎಸ್ ಪ್ರೇಮಂ ಪೂಜ್ಯಂ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ಮೂಲಕ ರಾಘವೇಂದ್ರ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡ್ತಾ ಇದ್ದಾರೆ.

ಕೆಡಂಬಾಡಿ ಕ್ರಿಯೇಷನ್ಸ್‌ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಪ್ರೇಮಂ ಪೂಜ್ಯಂ ಚಿತ್ರವನ್ನು ಡಾ. ರಕ್ಷಿತ್‌ ಕೆಡಂಬಾಡಿ, ಡಾ. ರಾಜಕುಮಾರ್‌ ಜಾನಕಿರಾಮನ್‌, ಮನೋಜ್‌ ಕೃಷ್ಣನ್‌ ಅವರು ಬಹು ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. ಜೊತೆಗೆ ಮಾಧವ್‌ ಕ್ರೀನಿ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ನವೀನ್‌ ಕುಮಾರ್‌ ಛಾಯಾಗ್ರಹಣ, ಹರೀಶ್‌ ಕೊಮ್ಮೆ ಸಂಕಲನವಿದೆ. ಈ ಸಿನಿಮಾವನ್ನು ನಿರ್ದೇಶನ ಹಾಗು ನಿರ್ಮಾಣ ಮಾಡಿರೋದು ಡಾಕ್ಟರ್ಸ್ ಹಾಗೂ ಎಂಜಿನಿಯರ್ಸ್ ಅನ್ನೋದು ಚಿತ್ರದ ವಿಶೇಷತೆ. ಇಷ್ಟೆಲ್ಲ ವಿಶೇಷತೆ ಇರುವ ಪ್ರೇಮಂ ಪೂಜ್ಯಂ ಸಿನಿಮಾ ನೆನಪಿರಲಿ ಪ್ರೇಮ್​ಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಡುವ ಲಕ್ಷಣಗಳು ಕಾಣ್ತಿದೆ..

ABOUT THE AUTHOR

...view details