ಕನ್ನಡ ಸಿನಿ ರಂಗದತ್ತ ಪ್ರಪಂಚವೇ ಒಮ್ಮೆ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಅಂದ್ರೆ ಅದು ಪ್ರಶಾಂತ್ ನೀಲ್ ನಿರ್ದೇಶನದ, ಯಶ್ ನಟಿಸಿರುವ ಕೆಜಿಎಫ್ ಸಿನಿಮಾ. ಈ ಸಿನಿಮಾ ಹಲವು ಭಾಷೆಗಳಲ್ಲಿ ರಿಲೀಸ್ ಆಗಿ ಹತ್ತಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಅಲ್ಲದೆ ಈ ಚಿತ್ರದಿಂದ ಯಶ್ ಹೆಸರು ಕೂಡ ಪ್ರಪಂಚದಾದ್ಯಂತ ಪಸರಿಸಿದೆ.
ಕೆಜಿಎಫ್ ಕುತೂಹಲ... ಪ್ರಶಾಂತ್ ನೀಲ್ರ ಈ ಫೋಟೋ ಅರ್ಥವೇನು?
ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ವೊಂದನ್ನು ಹಾಕುವ ಮೂಲಕ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ 3 ಸಿನಿಮಾ ಬಗ್ಗೆ ಸುಳಿವು ನೀಡಿದ್ದಾರೆ.
ಇನ್ನು ಕೆಜಿಎಫ್ ಚಾಪ್ಟರ್ 2 ರಿಲೀಸ್ಗೆ ರೆಡಿಯಾಗುತ್ತಿದ್ದು, ಇತ್ತೀಚೆಗಷ್ಟೆ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ. ಕೇವಲ ಪೋಸ್ಟರ್ನಿಂದಲೇ ಚಾಪ್ಟರ್ 2 ಸಿನಿಮಾ ಬಗ್ಗೆ ತುಂಬಾನೇ ಕುತೂಹಲ ಮೂಡಿದೆ. ಈ ನಡುವೆ ಪ್ರಶಾಂತ್ ನೀಲ್ ಮತ್ತೊಂಸು ಸುದ್ದಿ ನೀಡಿದ್ದು, ಕೆಜಿಎಫ್ 3 ಸಿನಿಮಾದ ಸುಳಿವು ನೀಡಿದ್ದಾರೆ. ಅಲ್ಲದೆ ತಮ್ಮ ಪೋಸ್ಟ್ನಿಂದ ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟಿದ್ದಾರೆ.
ಹೌದು, ಪ್ರಶಾಂತ್ ನೀಲ್ ತಮ್ಮ ಮಗನಿಗೆ 3 ಆಕಾರದ ಹೇರ್ ಕಟಿಂಗ್ ಮಾಡಿಸಿ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಇನ್ನು ಈ ಬಗ್ಗೆ ಬರೆದಿರುವ ಪ್ರಶಾಂತ್ ನೀಲ್,' ಈ ಫೋಸ್ಟ್ ಶೇರ್ ಮಾಡಿದ ನಂತ್ರ ಎಲ್ಲರಲ್ಲೂ ಕಾಡುವ ಪ್ರಶ್ನೆ ಅಂದ್ರೆ ಕೆಜಿಎಫ್ 3 ಸಿದ್ಧವಾಗುತ್ತಿದೆಯಾ ಎಂದು. ಗೆಳೆಯರೇ ಇದಕ್ಕೆ ಉತ್ತರ ಕೊಡುವವರೆಂದರೆ ಅದು ಪ್ರಶಾಂತ್ ನೀಲ್ ಒಬ್ರೆ' ಎಂದು ಅಭಿಮಾನಿಗಳ ಬುದ್ಧಿಗೆ ಕೆಲಸ ಕೊಟ್ಟಿದ್ದಾರೆ. ಹಾಗೂ ಕೆಜಿಎಫ್ 3 ಬಗ್ಗೆ ಕುತೂಹಲದ ಬೀಜ ಬಿತ್ತಿದ್ದಾರೆ.