ಕರ್ನಾಟಕ

karnataka

ETV Bharat / sitara

ಅನಂತ್​ನಾಗ್​ಗೆ 'ಪದ್ಮ ಪ್ರಶಸ್ತಿ' : ಅಭಿಯಾನಕ್ಕೆ ಕೈಜೋಡಿಸಿದ ಪವರ್​ ಸ್ಟಾರ್​

ಕನ್ನಡ ಚಿತ್ರರಂಗದ ಎವರ್ ಗ್ರೀನ್ ನಟನಾಗಿರೋ ಅನಂತ್ ನಾಗ್ ಅವರಿಗೆ 'ಪದ್ಮ ಪ್ರಶಸ್ತಿ' ನೀಡಬೇಕೆಂಬುದಕ್ಕೆ ನನ್ನ ಬೆಂಬಲ ಕೂಡಾ ಇದೆ ಎಂದು ನಟ ಪುನೀತ್ ರಾಜ್​ಕುಮಾರ್​ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

By

Published : Jul 15, 2021, 7:03 PM IST

Ananth nag and puneeth  Rajkumar
ಹಿರಿಯ ನಟ ಅನಂತ್​ನಾಗ್​​ ಹಾಗೂ ಪುನೀತ್​ ರಾಜ್​ಕುಮಾರ್

ಕನ್ನಡ ಚಿತ್ರರಂಗದ ಹಿರಿಯ ಹಾಗೂ ಜನಪ್ರಿಯ ನಟ ಅನಂತ್ ನಾಗ್‌ಗೆ 'ಪದ್ಮ ಪ್ರಶಸ್ತಿ' ನೀಡಬೇಕು ಎಂಬ ಅಭಿಯಾನ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಈ ಅಭಿಯಾನಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೈ ಜೋಡಿಸಿದ್ದಾರೆ.

ಭಾರತ ಸರ್ಕಾರ ನೀಡಲಾಗುವ ಅತ್ಯಂತ ಗೌರವವಾನ್ವಿತ ನಾಗರಿಕ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿಗೆ, ಹೆಸರು ಸೂಚಿಸುವಂತೆ ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರ ಪೀಪಲ್ಸ್ ಪದ್ಮ ಹೆಸರಿನಡಿಯಲ್ಲಿ ಕರೆ ನೀಡಿದೆ. ಈ ಸಾಲಿನ ಪದ್ಮ ಪ್ರಶಸ್ತಿಗಾಗಿ ಕರ್ನಾಟಕದಿಂದ ಹಿರಿಯ ನಟ ಅನಂತ್ ನಾಗ್ ಹೆಸರು ಹೆಚ್ಚು ಕೇಳಿ ಬಂದಿತ್ತು. ಇದರ ಜೊತೆಗೆ ನಟ ರಕ್ಷಿತ್ ಶೆಟ್ಟಿ, ನಟ ಮತ್ತು ನಿರ್ದೇಶಕ ರಿಷಭ್ ಶೆಟ್ಟಿ ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದರು.

ನಾನು ಅನಂತ್ ನಾಗ್ ಅವರ ದೊಡ್ಡ ಅಭಿಮಾನಿ. ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ಹೀಗಾಗಿ ಕನ್ನಡ ಚಿತ್ರರಂಗದ ಎವರ್ ಗ್ರೀನ್ ನಟನಾಗಿರೋ ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕೆಂಬುದಕ್ಕೆ ನನ್ನ ಬೆಂಬಲ ಕೂಡಾ ಇದೆ ಎಂದು ನಟ ಪುನೀತ್ ರಾಜ್​ಕುಮಾರ್​ ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ 4 ದಶಕಗಳನ್ನ ಪೂರೈಸಿದ ಅನಂತ್ ನಾಗ್, ಬರೋಬ್ಬರಿ 300ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ ಭಾಷೆಯ ಸಿನಿಮಾಗಳಲ್ಲಿ ಅವರು ಅಭಿನಯಿಸಿರೋದು ವಿಶೇಷ. ಹೀಗಾಗಿ ಸಿನಿಮಾ ಕ್ಷೇತ್ರ ಮಾತ್ರವಲ್ಲದೇ ಸಾರ್ವಜನಿಕ ವಲಯದಲ್ಲೂ ಅಭಿಯಾನ ಶುರುವಾಗಿದೆ.

ಓದಿ:ಕೂಡಲೇ ನಟ ದರ್ಶನ್ ವಿರುದ್ಧ ಎಫ್ಐಆರ್ ದಾಖಲಿಸಿ: ಪೊಲೀಸ್​ ಆಯುಕ್ತರಿಗೆ ವಕೀಲರ ಒತ್ತಾಯ

ABOUT THE AUTHOR

...view details