ಟಗರು ಚಿತ್ರದ ನಂತರ ನಿರ್ದೇಶಕ ಸುಕ್ಕ ಸೂರಿ ಹಾಗೂ ಡಾಲಿ ಧನಂಜಯ್ ಕಾಂಬಿನೇಷನ್ನಲ್ಲಿ ಮೂಡಿ ಬರ್ತಿರುವ ಡಿಫರೆಂಟ್ ಟೈಟಲ್ನ "ಪಾಪ್ ಕಾರ್ನ್ ಮಂಕಿ ಟೈಗರ್" ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಮೈಸೂರಿನ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಚಿತ್ರತಂಡ ಕುಂಬಳಕಾಯಿ ಒಡೆದಿದೆ.
ಈ ಸಿನಿಮಾದಲ್ಲಿ ಡಾಲಿ ಧನಂಜಯ್, ನಿವೇದಿತ ಪ್ರಮುಖ ತಾರಾಗಣದಲ್ಲಿ ಇದ್ದಾರೆ. ನವ ನಟಿಯರಾದ ಅಮೃತ ಮತ್ತು ಸಪ್ತಮಿ ಕಾಣಿಸಿಕೊಂಡಿದ್ದು, ಮೊದಲಿಗೆ ಈ ಚಿತ್ರ ಟಗರು ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಬ್ಯಾನರ್ನಲ್ಲಿ ಸೆಟ್ಟೇರಿತ್ತು. ಅದರೆ ಸುಕ್ಕಾ ಸೂರಿ ಹಾಗೂ ಕೆ.ಪಿ.ಶ್ರೀಕಾಂತ್ ನಡುವೆ ಈ ಚಿತ್ರದಲ್ಲಿ ಹೊಂದಾಣಿಕೆ ಕಾಣದ ಹಿನ್ನೆಲೆಯಲ್ಲಿ ಕೆ.ಪಿ.ಶ್ರೀಕಾಂತ್ "ಪಾಪ್ ಕಾರ್ನ್ ಮಂಕಿ ಟೈಗರ್" ಚಿತ್ರದಿಂದ ಹೊರಬಂದಿದ್ರು.
" ಪಾಪ್ ಕಾರ್ನ್ ಮಂಕಿ ಟೈಗರ್" ಶೂಟಿಂಗ್ ಕಂಪ್ಲೀಟ್ ನಂತರ ಈ ಚಿತ್ರವನ್ನು ನಿರ್ದೇಶಕ ಸೂರಿ ಅವರ ಮ್ಯಾನೇಜರ್ ಸುದೀಂದ್ರ ಚಿತ್ರಕ್ಕೆ ಇನ್ವೆಸ್ಟ್ ಮಾಡಿದ್ದು, ಕೊನೆಗೂ ಬರೋಬ್ಬರಿ ಎರಡು ವರ್ಷಗಳ ನಂತರ ಸೂರಿ ಚಿತ್ರದ ಶೂಟಿಂಗ್ ಮುಗಿಸುವಲ್ಲಿ ಸಕ್ಸಸ್ ಆಗಿದ್ದಾರೆ.
ಸುಮಾರು 70 ದಿನಗಳ ಕಾಲ ಬೆಂಗಳೂರು, ಹುಬ್ಬಳ್ಳಿ, ಶಿವಮೊಗ್ಗ, ಮುಂಬೈ ಮುಂತಾದ ಭಾಗಗಳಲ್ಲಿ ಚಿತ್ರೀಕರಣ ನಡೆಸಿರುವ ಚಿತ್ರತಂಡ, ಮೈಸೂರಿನಲ್ಲಿ ಶೂಟಿಂಗ್ ಕಂಪ್ಲೀಟ್ ಮಾಡಿದೆ. ವಿಭಿನ್ನ ಚಿತ್ರಕಥೆ ರಚಿಸುವ ಸೂರಿ, ‘ಕೆಂಡ ಸಂಪಿಗೆ’, ‘ದುನಿಯಾ’, ‘ಕಡ್ಡಿಪುಡಿ’ ‘ಜಂಗ್ಲಿ’ ಟಗರು ಚಿತ್ರಗಳಂತಹ ರಿವರ್ಸ್ ಸ್ಕ್ರೀನ್ ಪ್ಲೇ ಚಿತ್ರಗಳ ನಿರ್ದೇಶಿಸಿದ್ದು, "ಪಾಪ್ ಕಾರ್ನ್ ಮಂಕಿ ಟೈಗರ್"ನಲ್ಲಿ ಯಾವ ಪ್ರಯೋಗ ಮಾಡಿದ್ದಾರೆ ಎಂಬ ಕುತೂಹಲ ಸಿನಿರಸಿಕರಲ್ಲಿ ಮನೆ ಮಾಡಿದೆ.