ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಬಹುನಿರೀಕ್ಷಿತ ಚಿತ್ರ "ಪೊಗರು" ಬಿಡುಗಡೆಗು ಮುನ್ನವೇ ಸಖತ್ ಸದ್ದು ಮಾಡುತ್ತಿದೆ. ಈಗಗಲೇ ಚಿತ್ರದ ಪೋಸ್ಟರ್ಗಳು, ಟೀಸರ್ಗಳು ಸಾಕಷ್ಟು ಜನಪ್ರಿಯತೆ ಪಡೆದಿವೆ. ಅಲ್ಲದೆ ಕರಾಬು ಹಾಡು ಕೂಡ ಯೂಟ್ಯೂಬ್ನಲ್ಲಿ ಧೂಳೆಬ್ಬಿಸಿದೆ. ಇದೀಗ ಮತ್ತೊಂದು ವಿಶಿಷ್ಟ ಸಾಧನೆಗೆ ಪೊಗರು ಮುಂದಾಗಿದೆ.
ನಂದ ಕಿಶೋರ್ ಆ್ಯಕ್ಷನ್ ಕಟ್ ಹೇಳುತ್ತಿರುವ ಪೊಗರು ಸಿನಿಮಾದ ಹಿಂದಿ ಹಕ್ಕುಗಳನ್ನು ಬಾಲಿವುಡ್ ನಿರ್ಮಾಪಕ ಆರ್.ಕೆ.ದುಗ್ಗಲ್ 7.2 ಕೋಟಿ ರೂ.ಗೆ ಕೊಂಡುಕೊಂಡಿದ್ದಾರಂತೆ. ಈ ಮೂಲಕ ಕೇವಲ ನಾಲ್ಕು ಸಿನಿಮಾಗಳಲ್ಲಿ ನಟಿಸಿದ ಧ್ರುವ ಸರ್ಜಾರ ಚಿತ್ರ ಈ ಬೆಲೆಗೆ ಮಾರಾಟವಾಗಿರುವುದು ಗಾಂಧಿನಗರದ ಜನರ ಹುಬ್ಬೇರುವಂತೆ ಮಾಡಿದೆ.