ಕಳೆದ ಎರಡೂವರೆ ವರ್ಷಗಳಿಂದ ಅಭಿಮಾನಿಗಳ ಕುತೂಹಲ ಹೆಚ್ಚಿಸಿರುವ 'ಪೊಗರು' ಚಿತ್ರ ಕೊನೆಗೂ ಮಾತಿನ ಮನೆ ಸೇರಿದೆ. ಎರಡು ವರ್ಷಗಳಿಂದ ಧ್ರುವ ಸರ್ಜಾ ಅಭಿನಯದ ಯಾವುದೇ ಚಿತ್ರ ರಿಲಿಸ್ ಆಗದೆ ಭರ್ಜರಿ ಹೈದನ ಅಭಿಮಾನಿಗಳಿಗೆ ನಿರಾಸೆಯಾಗಿತ್ತು.
ಕೊನೆಗೂ ಮಾತಿನ ಮನೆ ಸೇರಿದ 'ಪೊಗರು' - ಪೊಗರು ಚಿತ್ರದ ಡಬ್ಬಿಂಗ್
ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದ ಡಬ್ಬಿಂಗ್ ಶುರುವಾಗಿದೆ. ಸಿನಿಮಾದಲ್ಲಿ ತಮ್ಮ ಪಾತ್ರಕ್ಕೆ ರಾಘವೇಂದ್ರ ರಾಜ್ಕುಮಾರ್ ವಾಯ್ಸ್ ಡಬ್ ಮಾಡಿದ್ದಾರೆ.
ಆದ್ರೆ ಈ ವರ್ಷದ ಅಂತ್ಯದಲ್ಲಿ 'ಪೊಗರು' ಚಿತ್ರ ಖಂಡಿತಾ ರಿಲೀಸ್ ಮಾಡುತ್ತೇವೆ ಅಂತ ಪ್ರಾಮೀಸ್ ಮಾಡಿದ್ದ ಚಿತ್ರತಂಡ ಮತ್ತೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿ ಚಿತ್ರವನ್ನು ಮುಂದಿನ ವರ್ಷ ರಿಲೀಸ್ ಮಾಡುವುದಾಗಿ ಹೇಳಿತ್ತು.
ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಸದ್ಯ ಸಿಹಿ ಸುದ್ದಿ ಸಿಕ್ಕಿದ್ದು, ಏನಾದರು ಮಾಡಿ ಚಿತ್ರವನ್ನು ಜನವರಿಯಲ್ಲಿ ರಿಲೀಸ್ ಮಾಡಲೇಬೇಕು ಎಂದು ಪಣ ತೊಟ್ಟಿರುವ ನಿರ್ದೇಶಕ ನಂದ ಕಿಶೋರ್, ಸಿನಿಮಾ ಡಬ್ಬಿಂಗ್ ಶುರು ಮಾಡಿದ್ದಾರೆ. ಚಿತ್ರತಂಡ ಡಬ್ಬಿಂಗ್ನಲ್ಲಿ ಬ್ಯುಸಿಯಾಗಿದ್ದು, ರಾಘಣ್ಣ ಪೊಗರು ಚಿತ್ರಕ್ಕೆ ಡಬ್ಬಿಂಗ್ ಮಾಡಿದ್ದಾರೆ. ಬಹುತೇಕ ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಡಬ್ಬಿಂಗ್ ಮುಗಿಸಿ ಸಾಂಗ್ ಶೂಟ್ ಮಾಡಲು ಪ್ಲಾನ್ ಮಾಡಿದೆ. ಮದುವೆಯಾಗಿ ರಿಲ್ಯಾಕ್ಸ್ ಮೂಡ್ನಲ್ಲಿರುವ ಆಕ್ಷನ್ ಪ್ರಿನ್ಸ್ ಮುಂದಿನ ವರ್ಷ ತೆರೆ ಮೇಲೆ ಅಬ್ಬರಿಸೋದು ಗ್ಯಾರಂಟಿ ಎನ್ನುತ್ತಾರೆ ಅಭಿಮಾನಿಗಳು.