ಕರ್ನಾಟಕ

karnataka

ಆಗಸ್ಟ್​ 7 ರಿಂದ ಪಿಐಬಿ ವತಿಯಿಂದ ದೇಶಭಕ್ತಿ ಸಿನಿಮಾಗಳ ಚಿತ್ರೋತ್ಸವ

ಈ ಬಾರಿಯ ಸ್ವಾತಂತ್ಯ್ರ ದಿನೋತ್ಸವದ ಅಂಗವಾಗಿ ಕೇಂದ್ರ ಸರ್ಕಾರದ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ವತಿಯಿಂದ ಆಗಸ್ಟ್ 7-21 ವರೆಗೆ ದೇಶಭಕ್ತಿ ಸಿನಿಮಾ ಚಿತ್ರೋತ್ಸವ ಏರ್ಪಡಿಸಲಾಗಿದೆ.

By

Published : Aug 7, 2020, 2:18 PM IST

Published : Aug 7, 2020, 2:18 PM IST

Patriotism movie festival
ದೇಶಭಕ್ತಿ ಸಿನಿಮಾಗಳ ಚಿತ್ರೋತ್ಸವ

ಭಾರತ ಸರ್ಕಾರದ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (ಪಿಐಬಿ) ವತಿಯಿಂದ ಈ ವರ್ಷ ಇದೇ ಮೊದಲ ಬಾರಿಗೆ ವಿಶೇಷವಾಗಿ 15 ದಿನಗಳ ದೇಶಭಕ್ತಿ ಸಿನಿಮಾ ಚಿತ್ರೋತ್ಸವವನ್ನು ಏರ್ಪಡಿಸಲಾಗಿದೆ. ಈ ಚಿತ್ರೋತ್ಸವ ಆಗಸ್ಟ್ 7 - 21 ವರೆಗೆ ನಡೆಯಲಿದೆ.

'ಹಗಲು ವೇಷ'

ಕೊರೊನಾ ಭೀತಿ ಇನ್ನೂ ಕಡಿಮೆಯಾಗದೆ ಕಾರಣ, ಈ ಬಾರಿ ವೀಕ್ಷಕರಿಗೆ ಮನೆಯಲ್ಲೇ ಕುಳಿತು ಸಿನಿಮಾ ನೋಡಲು ನ್ಯಾಷನಲ್ ಫಿಲ್ಮ್ ಡೆವಲಪ್​​​​ಮೆಂಟ್​​ ಕಾರ್ಪೊರೇಷನ್ ಅವಕಾಶ ಮಾಡಿಕೊಡುತ್ತಿದೆ. 15 ದಿನಗಳ ಅವಧಿಯಲ್ಲಿ ಕನ್ನಡ, ಮರಾಠಿ, ತೆಲುಗು, ತಮಿಳು, ಮಲಯಾಳಂ, ಬಂಗಾಳಿ, ಗುಜರಾತಿ ಭಾಷೆಗಳ ಚಿತ್ರಗಳನ್ನು ಆಸಕ್ತರು ವೀಕ್ಷಿಸಬಹುದು. ನಾಷನಲ್ ಫಿಲ್ಮ್ ಆರ್ಕೈವ್ ಆಫ್ ಇಂಡಿಯಾ, ಚಿಲ್ಡ್ರನ್ ಫಿಲ್ಮ್ ಸೊಸೈಟಿ ವಿಭಾಗದಿಂದ ಆಯ್ದ ಸಿನಿಮಾಗಳನ್ನು ಈ ಆನ್​​​​​​​​​​​ಲೈನ್ ವ್ಯವಸ್ಥೆಯಲ್ಲಿ ನೋಡಬಹುದು.

ದೇಶಭಕ್ತಿ ಸಿನಿಮಾಗಳ ಚಿತ್ರೋತ್ಸವ

ಪ್ರೊ. ಬರಗೂರು ರಾಮಚಂದ್ರಪ್ಪ ನಿರ್ದೇಶನದಲ್ಲಿ ಡಾ. ಶಿವರಾಜ್​ಕುಮಾರ್ ನಟಿಸಿರುವ ಕನ್ನಡದ 'ಹಗಲು ವೇಷ' ಸಿನಿಮಾ ಕೂಡಾ ವೀಕ್ಷಣೆಗೆ ಲಭ್ಯವಿದೆ. ಇದರೊಂದಿಗೆ ಸ್ವಾತಂತ್ರ್ಯೋತ್ಸವದ ಅಂಗವಾಗಿ 1982 ರಲ್ಲಿ ತಯಾರಾದ ರಿಚರ್ಡ್ ಅಟೆನ್​​ಬರೋ ನಿರ್ದೇಶನದ 'ಗಾಂಧಿ' ಸಿನಿಮಾ ಕೂಡಾ ಇರಲಿದೆ. ವಿಶೇಷ ಎಂದರೆ ಈ ಆನ್​​ಲೈನ್ ವ್ಯವಸ್ಥೆಯಲ್ಲಿ ದೃಷ್ಠಿದೋಷ, ಶ್ರವಣದೋಷವುಳ್ಳವರು ಕೂಡಾ ಸಿನಿಮಾ ಅನುಭವ ಪಡೆಯಬಹುದು.

'ಹಗಲು ವೇಷ' ಚಿತ್ರದಲ್ಲಿ ತಾರಾ, ಶಿವರಾಜ್​​ಕುಮಾರ್

https://www.cinemasofindia.com/ ಹಾಗೂ https://pib.gov.in/PressReleseDetailm.aspx?PRID=1643832 ವೆಬ್​​​ಸೈಟ್​​​​ಗಳಲ್ಲಿ ದೇಶಭಕ್ತಿ ಸಿನಿಮಾಗಳನ್ನು ಆಸಕ್ತರು ನೋಡಿ ಎಂಜಾಯ್ ಮಾಡಬಹುದು.

ABOUT THE AUTHOR

...view details