ಸಿನಿಮಾ ಕಥೆ ಮಾಸ್ ಇರಲಿ, ಕ್ಲಾಸ್ ಇರಲಿ, ಐತಿಹಾಸಿಕ, ಜಾನಪದ ಏನೇ ಇರಲಿ. ಆ ಪಾತ್ರದಲ್ಲಿ ಮುಳುಗುತ್ತಾರೆ ನಟ ನಂದಮೂರಿ ಬಾಲಕೃಷ್ಣ. ಬಹುತೇಕ ಸಿನಿಮಾಗಳಲ್ಲಿ ಹೊಸ ಹೊಸ ಲುಕ್ನಲ್ಲಿ ಬಾಲಕೃಷ್ಣ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸುತ್ತಾರೆ. ಇದೀಗ ಅವರ ಮತ್ತೊಂದು ಲುಕ್ ನೆಟ್ಟಿಗರಿಗೆ ಶಾಕ್ ನೀಡಿದೆ.
ಬಾಲಯ್ಯ ಹೊಸ ಲುಕ್ ನೋಡಿ ನೆಟ್ಟಿಗರು ಶಾಕ್... ಯಾವ ಚಿತ್ರಕ್ಕಾಗಿ ಈ ಬದಲಾವಣೆ?
ಕೆ.ಎಸ್. ರವಿಕುಮಾರ್ ನಿರ್ದೇಶನದ ಹೊಸ ಚಿತ್ರದ ಬಾಲಕೃಷ್ಣ ಫಸ್ಟ್ ಲುಕ್ ರಿವೀಲ್ ಆಗಿದೆ. ಬಾಲಕೃಷ್ಣ ಅವರ ಈ ಲುಕ್ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಈ ಫೋಟೋದಲ್ಲಿ ಬಾಲಕೃಷ್ಣ ಬಹಳ ಯಂಗ್ ಆಗಿ ಕಾಣುತ್ತಿದ್ದು, ಇವರು ನಿಜಕ್ಕೂ ಬಾಲಕೃಷ್ಣ ಅವರೇನಾ ಎಂದು ಆಶ್ಚರ್ಯ ಪಡುವಂತಿದೆ.
ಲೈಟ್ ಆಗಿ ಗಡ್ಡ ಬಿಟ್ಟು, ನೀಲಿ ಸೂಟ್, ಸನ್ ಗ್ಲಾಸ್ ಹಾಕ್ಕೊಂಡು ಬಾಲಕೃಷ್ಣ ನಡೆದು ಬರುತ್ತಿರುವ ಈ ಫೋಟೋ ವೈರಲ್ ಆಗಿದೆ. ಅಲ್ಲದೆ ಇದು ನಿಜಕ್ಕೂ ಬಾಲಯ್ಯ ಅವರೇನಾ ಅನ್ನುವ ಮಟ್ಟಿಗೆ ಈ ಫೋಟೋದಲ್ಲಿ ಬಹಳ ಯಂಗ್ ಹಾಗೂ ಸ್ಟೈಲ್ ಆಗಿ ಕಾಣುತ್ತಿದ್ದಾರೆ. ಅಂದಹಾಗೆ ಹೊಸ ಸಿನಿಮಾಗಾಗಿ ಬಾಲಕೃಷ್ಣ ಈ ರೀತಿ ಬದಲಾಗಿದ್ದಾರೆ. ಕೆ.ಎಸ್.ರವಿಕುಮಾರ್ ನಿರ್ದೇಶಿಸುತ್ತಿರುವ ಈ ಸಿನಿಮಾ ಶೂಟಿಂಗ್ ಸದ್ಯಕ್ಕೆ ಥಾಯ್ಲೆಂಡ್ನಲ್ಲಿ ನಡೆಯುತ್ತಿದೆ. ಇದು ಬಾಲಕೃಷ್ಣ ನಾಯಕನಾಗಿ ಅಭಿನಯಿಸುತ್ತಿರುವ 105ನೇ ಸಿನಿಮಾ. ಸೋನಾಲ್ ಚೌಹಾಣ್ ಹಾಗೂ ವೇದಿಕ ಇಬ್ಬರೂ ಬಾಲಕೃಷ್ಣ ಜೊತೆ ನಾಯಕಿಯರಾಗಿ ನಟಿಸುತ್ತಿದ್ದಾರೆ. ಚಿತ್ರತಂಡ ನಿನ್ನೆ ಬಾಲಕೃಷ್ಣ ಅವರ ಫಸ್ಟ್ ಲುಕ್ ರಿವೀಲ್ ಮಾಡಿದೆ. ಪ್ರಕಾಶ್ ರಾಜ್, ಭೂಮಿಕ, ಜಯಸುಧಾ, ಸಯೋಜಿ ಸಿಂಧೆ, ನಾಗಿನೀಡು, ಸಪ್ತಗಿರಿ ಹಾಗೂ ಇನ್ನಿತರರು ತಾರಾಗಣದಲ್ಲಿದ್ದಾರೆ.