ಕನ್ನಡ ಹಾಗೂ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚುತ್ತಿರುವ ಪ್ರಣೀತಾ ಸುಭಾಷ್ ಮದುವೆ, ಚಿತ್ರರಂಗ ಹಾಗೂ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.
ಉದ್ಯಮಿ ನಿತಿನ್ ರಾಜು ಎಂಬುವರ ಜೊತೆ ಪ್ರಣೀತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರಣೀತಾ ಮದುವೆಗೆ ಅಭಿಮಾನಿಗಳು, ಚಿತ್ರರಂಗದ ಸ್ನೇಹಿತರು ಶುಭಾಶಯ ಹೇಳಿದ್ದಾರೆ. ಆದರೆ, ಪ್ರಣೀತಾ ಯಾರಿಗೂ ಗೊತ್ತಾಗದ ಹಾಗೆ ಗುಟ್ಟಾಗಿ ಮದುವೆ ಆದ ಬಳಿಕ, ಕೆಲವು ಫೋಟೋಗಳು ವೈರಲ್ ಆಗಿವೆ. ಆಗ ಪ್ರಣಿತಾ ಅವರು ಸಾಮಾಜಿಕ ಜಾಲತಾಣದಲ್ಲಿ ಅದಕ್ಕೆ ಉತ್ತರ ನೀಡಿದ್ದಾರೆ.
ಕೊರೊನಾ ಹಾಗೂ ಲಾಕ್ಡೌನ್ ಇರುವುದರಿಂದ ಸಿಂಪಲ್ ಆಗಿ ಮದುವೆ ಆಗಿರುವುದಾಗಿ ಅವರು ಹೇಳಿದ್ದಾರೆ. ಆ ಪೋಸ್ಟ್ಗೆ ಪ್ರತಿಕ್ರಿಯಿಸಿದ ರಮ್ಯಾ ಅವರು ಅಭಿನಂದನೆ ತಿಳಿಸಿದ್ದಾರೆ. ಕಂಗ್ರಾಜುಲೇಷನ್ಸ್ ಪ್ರಣೀತಾ ಅಂತ ರಮ್ಯಾ ವಿಶ್ ಮಾಡಿದ್ದಾರೆ. ರಮ್ಯಾ ಮಾಡಿದ ಕಮೆಂಟ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.
ನಿಮ್ಮ ಮದುವೆ ಯಾವಾಗ ಎಂದು ಸ್ಯಾಂಡಲ್ವುಡ್ ಕ್ವೀನ್ಗೆ ಅಭಿಮಾನಿಗಳು ಪ್ರಶ್ನೆ ಎಸೆದಿದ್ದಾರೆ. ನಿಮಗೆ ವಯಸ್ಸು ಹೆಚ್ಚುತ್ತಿದೆ. ಬೇಗ ಮದುವೆ ಆಗಿ ಎಂದು ಕೆಲವರು ಸಲಹೆ ನೀಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಕೆಲವರು, ಅದು ಅವರ ಜೀವನ, ಅವರ ಆಯ್ಕೆ. ನೀವು ಸುಮ್ಮನಿರಿ ಎಂದು ರಮ್ಯಾ ಪರವಾಗಿ ಕಮೆಂಟ್ ಮಾಡಿದ್ದಾರೆ.
ಯಾರು ಏನೇ ಹೇಳಿದರೂ ರಮ್ಯಾ ಮಾತ್ರ ಮದುವೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.