ಕರ್ನಾಟಕ

karnataka

ETV Bharat / sitara

ಹಿಂದೂ- ಕ್ರೈಸ್ತ ಸಂಪ್ರದಾಯದಂತೆ ಚಿರು-ಮೇಘನಾ ಮಗನ ನಾಮಕರಣ.. ಹೆಸರೇನು ಅಂತೀರಾ..

ನಾಮಕರಣ ಯಾವಾಗ ಎಂಬ ಪ್ರಶ್ನೆ ಹಲವು ದಿನಗಳಿಂದ ಕೇಳಿ ಬರುತ್ತಿತ್ತು. ಅದಕ್ಕೆ ಉತ್ತರ ನನಗೂ ಗೊತ್ತಿರಲಿಲ್ಲ. 11 ತಿಂಗಳ ಬಳಿಕ ಹೆಸರು ನಿರ್ಧರಿಸಿದ್ವಿ. ರಾಯನ್​ ಎಂಬ ಹೆಸರು ನನ್ನ ಮನಸ್ಸಿನಲ್ಲಿ ಮೊದಲಿನಿಂದಲೂ ಇತ್ತು. ಚಿರು ನಮ್ಮ ಪಾಲಿಗೆ ರಾಜ. ಅವರಿಗೆ ಹುಟ್ಟಿದ ಈ ಮಗು ಯುವರಾಜ. ನಮ್ಮ ಎಲ್ಲರ ಜೀವನದಲ್ಲಿ ಕತ್ತಲೆ ತುಂಬಿತ್ತು. ಆದರೆ, ನಮಗೆ ಬೆಳಕು ತಂದವನೇ ನನ್ನ ಮಗ..

By

Published : Sep 3, 2021, 7:54 PM IST

Updated : Sep 3, 2021, 9:23 PM IST

Naming ceremony of the son of Chiru and Meghana son
ಹಿಂದೂ- ಕ್ರೈಸ್ತ ಸಂಪ್ರದಾಯದಂತೆ ಚಿರು ಮತ್ತು ಮೇಘನಾ ಮಗನ ನಾಮಕರಣ!

ಬೆಂಗಳೂರು : ದಿವಂಗತ ನಟ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್​ ಅವರ ಮುದ್ದಿನ ಮಗನಿಗೆ ಇಂದು ನಾಮಕರಣ ಮಾಡಲಾಯಿತು. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಾಮಕರಣ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮದಲ್ಲಿ ಸರ್ಜಾ ಫ್ಯಾಮಿಲಿ ಹಾಗೂ ಮೇಘನಾ ರಾಜ್​ ಕುಟುಂಬ ವರ್ಗ ಭಾಗಿಯಾಗಿತ್ತು.

'ರಾಯನ್ ರಾಜ್ ಸರ್ಜಾ' ಎಂದು ನಾಮಕರಣ

ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಮಗನಿಗೆ ರಾಯನ್ ರಾಜ್ ಸರ್ಜಾ ಎಂದು ಹೆಸರಿಡಲಾಗಿದೆ. ಹಿಂದೂ ಮತ್ತು ಕ್ರೈಸ್ತ ಸಂಪ್ರದಾಯದಂತೆ ಪುತ್ರನ ನಾಮಕರಣ ನಡೆಯಿತು.

ಹಿಂದೂ- ಕ್ರೈಸ್ತ ಸಂಪ್ರದಾಯದಂತೆ ಚಿರು-ಮೇಘನಾ ಮಗನ ನಾಮಕರಣ

ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಮದುವೆಯಾದ ಕೋರಮಂಗಲದ ಸೇಂಟ್ ಮಾರ್ಕ್ಸ್ ಚರ್ಚ್‌ನಲ್ಲಿಯೇ, ಕ್ರಿಶ್ಚಿಯನ್ ಶೈಲಿಯಲ್ಲಿ ನಾಮಕರಣ ನೆರವೇರಿದೆ. ಈ ಕಾರ್ಯಕ್ರಮಕ್ಕೆ ಕುಟುಂಬದವರು ಮತ್ತು ಆಪ್ತರು ಮಾತ್ರ ಆಗಮಿಸಿದ್ದರು.

ಧ್ರುವ ಸರ್ಜಾ, ಅವರ ಪತ್ನಿ ಪ್ರೇರಣಾ, ಪ್ರಮೀಳಾ ಜೋಷಾಯ್​, ಸುಂದರ್ ರಾಜ್​, ಪ್ರಜ್ವಲ್​ ದೇವರಾಜ್​ ಮತ್ತು ಅವರ ಪತ್ನಿ ರಾಗಿಣಿ ಸೇರಿದಂತೆ ಸರ್ಜಾ ಕುಟುಂಬದವರು ಹಾಗೂ ಮೇಘನಾ ರಾಜ್ ಕುಟುಂಬಸ್ಥರು ಉಪಸ್ಥಿತರಿದ್ದರು.

ಮೇಘನಾ ರಾಜ್ ಮಾತನಾಡಿ, 'ನಾಮಕರಣ ಯಾವಾಗ ಎಂಬ ಪ್ರಶ್ನೆ ಹಲವು ದಿನಗಳಿಂದ ಕೇಳಿ ಬರುತ್ತಿತ್ತು. ಅದಕ್ಕೆ ಉತ್ತರ ನನಗೂ ಗೊತ್ತಿರಲಿಲ್ಲ. 11 ತಿಂಗಳ ಬಳಿಕ ಹೆಸರು ನಿರ್ಧರಿಸಿದ್ವಿ. ರಾಯನ್​ ಎಂಬ ಹೆಸರು ನನ್ನ ಮನಸ್ಸಿನಲ್ಲಿ ಮೊದಲಿನಿಂದಲೂ ಇತ್ತು.

ಚಿರು ನಮ್ಮ ಪಾಲಿಗೆ ರಾಜ. ಅವರಿಗೆ ಹುಟ್ಟಿದ ಈ ಮಗು ಯುವರಾಜ. ನಮ್ಮ ಎಲ್ಲರ ಜೀವನದಲ್ಲಿ ಕತ್ತಲೆ ತುಂಬಿತ್ತು. ಆದರೆ, ನಮಗೆ ಬೆಳಕು ತಂದವನೇ ನನ್ನ ಮಗ' ಎಂದು ಮೇಘನಾ ರಾಜ್​ ಹೇಳಿದರು.

Last Updated : Sep 3, 2021, 9:23 PM IST

ABOUT THE AUTHOR

...view details