ಕೇವಲ ಟೀಸರ್‌ನಿಂದಲೇ ವಿಶ್ವದಾಖಲೆ ನಿರ್ಮಿಸಿರುವ 'ಕೆಜಿಎಫ್ ಚಾಪ್ಟರ್-2' ಚಿತ್ರ ತಂಡದ ಕಡೆಯಿಂದ ಅಭಿಮಾನಿಗಳಿಗೆ ಸಿಹಿ ಸುದ್ದಿ ಹೊರ ಬಿದ್ದಿದೆ. ಈ ಬಗ್ಗೆ ಹೊಸ ಅಪ್ಡೇಟ್ ನೀಡಿದ್ದು, ಚಿತ್ರದ ಬಿಡುಗಡೆ ದಿನಾಂಕ ಘೋಷಿಸಿದೆ.
ಟೀಸರ್ನಿಂದ ಚಿತ್ರರಂಗದ ಹಲವು ದಾಖಲೆ ಧೂಳೀಪಟ ಮಾಡಿರುವ ಈ ಚಿತ್ರ ಯಾವಾಗ ರಿಲೀಸ್ ಆಗುತ್ತದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಈ ಬಗ್ಗೆ ಟ್ವೀಟ್ ಮಾಡಿರುವ ಚಿತ್ರ ತಂಡ, 2022ರ ಏಪ್ರಿಲ್ 14ರಂದು ಕೆಜಿಎಫ್-2 ರಿಲೀಸ್ ಆಗಲಿದೆ ಎಂದು ತಿಳಿಸಿದೆ.
ಚಿತ್ರದ ನಾಯಕ ರಾಕಿಂಗ್ ಸ್ಟಾರ್ ಯಶ್ ಹಾಗೂ ಹೊಂಬಾಳೆ ಫಿಲಂಸ್ ಕಡೆಯಿಂದ ಟ್ವೀಟ್ ಮಾಡಿ ಅಧಿಕೃತವಾಗಿ ಚಿತ್ರ ಬಿಡುಗಡೆಯ ದಿನಾಂಕ ಘೋಷಿಸಲಾಗಿದೆ. ಇತ್ತೀಚೆಗೆ ಕೆಜಿಎಫ್-2 ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನು ಪಡೆದುಕೊಳ್ಳುವಲ್ಲಿ ಜೀ ವಾಹಿನಿ ಯಶಸ್ವಿಯಾಗಿತ್ತು. ಚಿತ್ರದ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸ್ಯಾಟ್ಲೈಟ್ ಹಕ್ಕುಗಳನ್ನು ವಾಹಿನಿ ಪಡೆದಿದೆ.
ಈಗಾಗಲೇ ಕೆಜಿಎಫ್ ಚಾಪ್ಟರ್ 2 ಚಿತ್ರದ ಎಲ್ಲಾ ಭಾಷೆಯ ಆಡಿಯೋ ರೈಟ್ಸ್ 7 ಕೋಟಿ ರೂ.ಗೆ ಸೇಲ್ ಆಗಿದೆ. ಚಿತ್ರದ ಡಿಜಿಟಲ್ ರೈಟ್ಸ್ ಅನ್ನು ಅಮೆಜಾನ್ ಪ್ರೈಮ್ 50 ಕೋಟಿ ರೂಪಾಯಿ ಕೊಟ್ಟು ಖರೀದಿಸಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: KGF Chapter2: ಜೀ ವಾಹಿನಿಗೆ ಸ್ಯಾಟಲೈಟ್ ಹಕ್ಕು ಮಾರಾಟ, ಹೊಸ ದಾಖಲೆ?