ಕರ್ನಾಟಕ

karnataka

ETV Bharat / sitara

ಜುಲೈ 24 ರಂದು ಹಾಸ್ಯ ಚಕ್ರವರ್ತಿ ನರಸಿಂಹರಾಜು ಹುಟ್ಟುಹಬ್ಬಕ್ಕೆ ವಿಶೇಷ ಕಾರ್ಯಕ್ರಮ

ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ಕಲಾವಿದ ದಿವಂಗತ ನರಸಿಂಹರಾಜು ಅವರು ಇಂದು ನಮ್ಮೊಂದಿಗೆ ಇದ್ದಿದ್ದರೆ ಜುಲೈ 24 ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಈ ದಿನದಂದು ಅವರ ಕುಟುಂಬ ಒಂದು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

By

Published : Jul 22, 2020, 5:09 PM IST

Katte platform
ನರಸಿಂಹರಾಜು

ಜುಲೈ 24 ರಂದು ಹಾಸ್ಯ ಚಕ್ರವರ್ತಿ, ದಿವಂಗತ ನರಸಿಂಹರಾಜು ಅವರ 98ನೇ ವರ್ಷದ ಹುಟ್ಟುಹಬ್ಬ. ಕನ್ನಡ ಚಿತ್ರರಂಗ ಕಂಡ ಅದ್ಭುತ ಹಾಸ್ಯ ಕಲಾವಿದನ ಜನ್ಮದಿನಕ್ಕೆ ನರಸಿಂಹರಾಜು ಕುಟುಂಬ ಒಂದು ವಿನೂತನ ಕಾರ್ಯ ಮಾಡಲು ಮುಂದಾಗಿದೆ.

ನರಸಿಂಹರಾಜು ಮಗಳು ಸುಧಾ ನರಸಿಂಹರಾಜು, ಮೊಮ್ಮಕ್ಕಳಾದ ನಿರ್ದೇಶಕ ಕಂ ಸಂಗೀತ ನಿರ್ದೇಶಕ ಎಸ್​​​.ಡಿ. ಅರವಿಂದ್ ಹಾಗೂ ಮತ್ತೊಬ್ಬ ಮೊಮ್ಮಗ ಅವಿನಾಶ್ ದಿವಾಕರ್ ಒಂದು ವಿನೂತನ ವೆಬ್ ಸೈಟ್ ಜೊತೆಗೆ ಒಟಿಟಿ ಮನರಂಜನಾ ತಾಣವನ್ನು ಸ್ಥಾಪನೆ ಮಾಡುತ್ತಿದ್ದಾರೆ. ಈ ವೆಬ್ ಸೈಟ್ ಹೆಸರು 'ಕಟ್ಟೆ'. ಇದಕ್ಕೆ ಕಥೆ-ಕಲ್ಚರ್​​​-ಕರ್ನಾಟಕ ಎಂಬ ಅಡಿ ಬರಹವಿದೆ. ಜುಲೈ 24 ರಂದು ಸಂಜೆ 5 ಗಂಟೆಗೆ ಈ 'ಕಟ್ಟೆ' ಉದ್ಘಾಟನೆ ಆಗಲಿದೆ.

ಆಹ್ವಾನ ಪತ್ರಿಕೆ

ಹಿರಿಯ ನಟ ಶಿವರಾಮಣ್ಣ, ನಿರ್ದೇಶಕ ಎನ್​​​​.ಎಸ್​​. ಶಂಕರ್, ರಾಷ್ಟ್ರಪ್ರಶಸ್ತಿ ವಿಜೇತ ಲೇಖಕ ಡಾ ಕೆ. ಪುಟ್ಸ್ವಾಮಿ, ಸುಧಾ ನರಸಿಂಹರಾಜು, ಎಸ್​​.ಡಿ.ಅರವಿಂದ್, ಅವಿನಾಶ್​​​​​​ ದಿವಾಕರ್ ಹಾಗೂ ಇನ್ನಿತರ ಪ್ರಮುಖರು ಆ ದಿನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ಧಾರೆ.

ಇದರ ಜೊತೆಗೆ 'ಕಟ್ಟೆ' ಒಟಿಟಿ ಪ್ಲಾಟ್​​​ಫ್ಲಾರ್ಮ್​ನಲ್ಲಿ ವಿವಿಧ ಮನರಂಜನೆ ನೀಡಲು ಉದ್ದೇಶಿಸಲಾಗಿದೆ. ಇದರ ವ್ಯಾಪ್ತಿ ಬಗ್ಗೆ ಎಸ್​​.ಡಿ.ಅರವಿಂದ್ ಜುಲೈ 24 ರಂದು ತಿಳಿಸಿಕೊಡಲಿದ್ದಾರೆ. ಅವಿನಾಶ್ ದಿವಾಕರ್ ಕೂಡಾ ಜನಪ್ರಿಯ ನಟ. ಕನ್ನಡ ಚಿತ್ರರಂಗದಲ್ಲಿ ಮೊಟ್ಟ ಮೊದಲ ಮೊಬೈಲ್ ಸ್ಟುಡಿಯೋ ಸ್ಥಾಪಕರು ಕೂಡಾ. ಅವಿನಾಶ್ 'ಜುಗಾರಿ' ಸಿನಿಮಾದಿಂದ ನಾಯಕ ನಟ ಆದವರು.

ABOUT THE AUTHOR

...view details