ಸ್ಯಾಂಡಲ್ವುಡ್ನಲ್ಲಿ 'ಡಿಕೆ ಬೋಸ್' ಟೈಟಲ್ನ ಚಿತ್ರ ಸೈಲೆಂಟಾಗಿ ಸೆಟ್ಟೇರಿ ಶೂಟಿಂಗ್ ಮುಗಿಸಿ ಈಗ ರಿಲೀಸ್ಗೆ ರೆಡಿಯಾಗಿದೆ. ಇದೇ ತಿಂಗಳು 15 ರಂದು ರಾಜ್ಯಾದ್ಯಂತ ಈ ಚಿತ್ರ ಬಿಡುಗಡೆಯಾಗಲಿದೆ.
ಬ್ರೇಕ್ ಫ್ರೀ ಸಿನಿಮಾಸ್ ಲಾಂಛನದಲ್ಲಿ ಸಂತೋಷ್ ಮಹಾಂತೇಶ್ ಹಾಗೂ ನರಸಿಂಹಮೂರ್ತಿ ಈ ಚಿತ್ರ ನಿರ್ಮಿಸಿದ್ದಾರೆ. ತುಳು ಚಿತ್ರದ ನಟ ಪೃಥ್ವಿ ಅಂಬಾರ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ.ಇವರಿಗೆ ನಾಯಕಿಯಾಗಿ ನಿಶಾ ನಿಜಗುಣ ಸ್ಕ್ರೀನ್ ಶೇರ್ ಮಾಡಿದ್ದಾರೆ.
ಕಾಮಿಡಿ ಜಾನರ್ನ ಡಿಕೆ ಬೋಸ್ ಚಿತ್ರಕ್ಕೆ ಸಂದೀಪ್ ಮಹಾಂತೇಶ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ಉಜ್ಜಿರೆ ಹುಡುಕಿಕೊಂಡು ಇಬ್ಬರು ಕಳ್ಳರು ಮಂಗಳೂರಿಗೆ ಬರುತ್ತಾರೆ. ಇಲ್ಲಿ ಬಂದ ಮೇಲೆ ನಡೆಯುವ ಘಟನೆಗಳಿಗೆ ಕಾಮಿಡಿ ಟಚ್ ನೀಡಲಾಗಿದೆ.
ಇದೇ ತಿಂಗಳು 15 ರಂದು ರಾಜ್ಯಾದ್ಯಂತ ಈ ಚಿತ್ರ ಬಿಡುಗಡೆಯಾಗಲಿದೆ. ಇನ್ನು ಚಿತ್ರಕ್ಕೆ ಮಂಗಳೂರು ಸುತ್ತಮುತ್ತ 21 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು ಡೋಲ್ವಿನ್ ಸಂಗೀತ ಸಂಯೋಜಿಸಿದ್ದಾರೆ .ಗುರುಕಿರಣ್ ಹಾಗೂ ಸಂಚಿತ್ ಹೆಗೆಡೆ ತಲಾ ಒಂದೊಂದು ಹಾಡು ಹೇಳಿದ್ದಾರೆ. ಉದಯ ಬಲ್ಲಾಳ್ ಅವರ ಛಾಯಾಗ್ರಹಣ,ಸುರೇಶ್ ಸಂಕಲನ ಚಿತ್ರಕ್ಕಿದೆ. ಚಿತ್ರದಲ್ಲಿ ಭೋಜರಾಜ್, ಶೋಭ್ ರಾಜ್,ರಘು ಪಾಂಡವೇಶ್ವರ್ ಮುಂತಾದವರು ನಟಿಸಿದ್ದಾರೆ.