ಕರ್ನಾಟಕ

karnataka

ETV Bharat / sitara

ಇನ್​ಸ್ಟಾಗ್ರಾಂನಲ್ಲಿ ವಿಶೇಷ ಪೋಟೋ ಶೇರ್ ಮಾಡಿದ ಕಂಗನಾ... ಇಷ್ಟಕ್ಕೂ ಆ ಲೆಜೆಂಡರಿ ಯಾರು!?

ಕಂಗನಾ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿರುವ ಫೋಟೋದಲ್ಲಿ ಸಾಂಪ್ರದಾಯಿಕವಾಗಿ ಡ್ರೆಸ್​ ಮಾಡಿಕೊಂಡಿದ್ದಾರೆ. ಅವರ ಹಿಂಭಾಗದಲ್ಲಿ ಮರಿಯಾ ಶರ್ಮಾ ನಿಂತಿದ್ದಾರೆ. ಶರ್ಮಾ ಬಗ್ಗೆ ಬರೆದಿರುವ ನಟಿ, ನಿಮ್ಮ ಐದು ದಶಕಗಳ ಸಿನಿ ಜರ್ನಿಗೆ ಶುಭಾಶಯ ಎಂದು ಹೇಳಿದ್ದಾರೆ.

By

Published : Jan 30, 2020, 9:21 PM IST

Kangana shares adorable pic, showers best wishes to her hairstylist
ಕಂಗನಾ ಜೊತೆ ಇರುವ ಆ ಲೆಜೆಂಡರಿ ಯಾರು ಗೊತ್ತಾ?

ಕಂಗನಾ ರಣಾವತ್​ ಸದ್ಯ ತಲೈವಿ ಸಿನಿಮಾದಲ್ಲಿ ಪುಲ್​​ ಬ್ಯುಸಿಯಾಗಿದ್ದಾರೆ. ಈ ನಡುವೆ ಬಾಲಿವುಡ್​ ಸಿನಿಮಾ ಇಂಡಸ್ಟ್ರಿಯಲ್ಲಿ ಬರೋಬ್ಬರಿ ಐದು ದಶಕಗಳ ಕಾಲ ಕೇಶ ವಿನ್ಯಾಸಕಿಯಾಗಿ ಕೆಲಸ ಮಾಡಿರುವ ಮರಿಯಾ ಶರ್ಮಾ ಅವರ ಬಗ್ಗೆ ಇನ್​ಸ್ಟಾಗ್ರಾಂ​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿರುವ ಫೋಟೋದಲ್ಲಿ ಕಂಗನಾ ಸಾಂಪ್ರದಾಯಿಕವಾಗಿ ಡ್ರೆಸ್​ ಮಾಡಿಕೊಂಡಿದ್ದಾರೆ. ಕಂಗನಾ ಹಿಂಭಾಗದಲ್ಲಿ ಮರಿಯಾ ಶರ್ಮಾ ನಿಂತಿದ್ದಾರೆ. ಇವರ ಬಗ್ಗೆ ಬರೆದಿರುವ ಕಂಗನಾ, ನಿಮ್ಮ ಐದು ದಶಕಗಳ ಸಿನಿ ಜರ್ನಿಗೆ ಶುಭಾಶಯ. ಈ ಲೆಜೆಂಡರಿ ಕೇಶ ವಿನ್ಯಾಸಕಿ ಮರಿಯಾ, ಹೇಮ ಮಾಲಿನಿ, ಶರ್ಮಿಳಾ, ಹೆಲನ್​​, ಮನಿಷಾರಂತಹ ದೊಡ್ಡ ದೊಡ್ಡ ಸ್ಟಾರ್​ಗಳಿಗೆ ಹೇರ್​ಸ್ಟೈಲ್​ ಮಾಡಿದ್ದಾರೆ.

ಕಂಗನಾ ಸಧ್ಯ ತಲೈವಿ ಸಿನಿಮಾಕ್ಕಾಗಿ ಕೆಲಸ ಮಾಡುತ್ತಿದ್ದು, ತಲೈವಿ ಸೆಟ್​​ನಲ್ಲಿ ಇವರ ಸಿನಿಮಾ ಜರ್ನಿ 50 ವರ್ಷಗಳನ್ನು ಪೂರೈಸಿದೆ. ತಮ್ಮ ಬಣ್ಣದ ಲೋಕದ ಹಾದಿಯನ್ನು 'ಓಹ್​​ ಲಮ್​ಹೆ', 'ಒನ್ಸ್​ ಅಪಾನ್​ ಎ ಟೈ ಇನ್​ ಮುಂಬೈ' ಸಿನಿಮಾ ಮೂಲಕ ಶುರು ಮಾಡಿದ್ದಾರೆ.

ಕಂಗನಾ ಲೀಡ್​ ರೋಲ್​​ನಲ್ಲಿ ಅಭಿನಯಿಸುತ್ತಿರುವ ಕಂಗನಾ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿಯಾ ಬಯೋಪಿಕ್​ ಆಗಿದೆ. ಈ ಚಿತ್ರದಲ್ಲಿಯೂ ಕೂಡ ಮಿರಿಯಾ ತಮ್ಮ ಕೇಶ ವಿನ್ಯಾಸದ ಕೈ ಚಳಕ ತೋರಿಸಿದ್ದಾರೆ.

ABOUT THE AUTHOR

...view details