ಕರ್ನಾಟಕ

karnataka

ETV Bharat / sitara

ಧ್ರುವಾಗೆ ಪೊಗರೆಚ್ಚಿಸೋಕೆ ಬಂದ್ರು ಅಂತಾರಾಷ್ಟ್ರೀಯ ಮಟ್ಟದ ಬಾಡಿ ಬಿಲ್ಡರ್​​​​... ಯಾರಿವರು? - ಧ್ರುವಾಗೆ ಪೊಗರೆಚ್ಚಿಸೋಕೆ ಬಂದ್ರು ಕಾಯ್​​ ಗ್ರೀನ್​​​

ಪೊಗರು ಸಿನಿಮಾ ಕ್ಲೈಮ್ಯಾಕ್ಸ್​​​ ಶೂಟಿಂಗ್​​ ಹೈದರಾಬಾದ್​​ನ ರಾಮೋಜಿ ಫಿಲ್ಮ್​​​ ಸಿಟಿಯಲ್ಲಿ ನಡೆಯುತ್ತಿದ್ದು, ಧ್ರುವ ಸರ್ಜಾಗೆ ಫೈಟಿಂಗ್​ ಟ್ರೈನಿಂಗ್​​ ​​ ಕೊಡಲು ಅಂತಾರಾಷ್ಟ್ರೀಯ ​​ ಬಾಡಿ ಬಿಲ್ಡರ್​​​ಗಳು ಆಗಮಿಸಿದ್ದಾರೆ. ಈ ಹಿಂದೆ ಫೈಟಿಂಗ್​​​ ಕಲಿಸೋಕೆ ಮಾರ್ಗನ್​ ಆಸ್ಟೆ ಎಂಟ್ರಿ ಕೊಟ್ಟಿದ್ದು, ಇದೀಗ ಅಮೆರಿಕಾದ ಕಾಯ್​​ ಗ್ರೀನ್​​, ಸೌತ್​​ ಆಫ್ರಿಕಾದ ಜಾನ್​ ಲುಕ್​​​ ಹಾಗೂ ಜೋನ್​​​ ಲಿಂಡರ್​​ ಆಗಮಿಸಿದ್ದಾರೆ.

ಧ್ರುವಾಗೆ ಪೊಗರೆಚ್ಚಿಸೋಕೆ ಬಂದ್ರು ಕಾಯ್​​ ಗ್ರೀನ್​​​

By

Published : Sep 4, 2019, 8:12 PM IST

ಅದ್ದೂರಿಯಾಗಿ ಭರ್ಜರಿ ಮೂಲಕ ಸ್ಯಾಂಡಲ್​ ವುಡ್​​ಗೆ ಎಂಟ್ರಿಕೊಟ್ಟಿದ್ದ ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಇದೀಗ ತಮ್ಮ ಪೊಗರು ತೋರುತ್ತಿದ್ದರೆ.

ಹೌದು ಸದ್ಯ ಕನ್ನಡದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ನಂದ ಕಿಶೋರ್​​​ ನಿರ್ದೇಶನದ ಪೊಗರು ಸಿನಿಮಾ ಕೂಡ ಒಂದಾಗಿದೆ. ಈ ಸಿನಿಮಾವು ಫುಲ್​​ ಕಮರ್ಶಿಯಲ್​ ಅಂಡ್​​ ಮಾಸ್​​ ಆಗಿದ್ದು, ಸಿನಿಮಾದಲ್ಲಿ ಫೈಟಿಂಗ್​ ಸೀನ್​​​ ಭರ್ಜರಿಯಾಗಿಯೇ ಇದೆಯಂತೆ.

ಸಿನಿಮಾ ಕ್ಲೈಮ್ಯಾಕ್ಸ್​​​ ಶೂಟಿಂಗ್​​ ಹೈದರಾಬಾದ್​​ನ ರಾಮೋಜಿ ಫಿಲ್ಮ್​​​ ಸಿಟಿಯಲ್ಲಿ ನಡೆಯುತ್ತಿದ್ದು, ಧ್ರುವ ಸರ್ಜಾಗೆ ಫೈಟಿಂಗ್​ ಟ್ರೈನಿಂಗ್​​ ಕೊಡಲು ಅಂತಾರಾಷ್ಟ್ರೀಯ ​​ ಬಾಡಿ ಬಿಲ್ಡರ್​​​ಗಳು ಆಗಮಿಸಿದ್ದಾರೆ. ಈ ಹಿಂದೆ ಫೈಟಿಂಗ್​​​ ಕಲಿಸೋಕೆ ಮಾರ್ಗನ್​ ಆಸ್ಟೆ ಎಂಟ್ರಿ ಕೊಟ್ಟಿದ್ದು, ಇದೀಗ ಅಮೆರಿಕಾದ ಕಾಯ್​​ ಗ್ರೀನ್​​, ಸೌತ್​​ ಆಫ್ರಿಕಾದ ಜಾನ್​ ಲುಕ್​​​ ಹಾಗೂ ಜೋನ್​​​ ಲಿಂಡರ್​​ ಆಗಮಿಸಿದ್ದಾರೆ.

ಇನ್ನು ಸಿನಿಮಾದಲ್ಲಿ ಡಾಲಿ ಧನಂಜಯ್​, ತೆಲುಗಿನ ಸ್ಟಾರ್​​ ನಟ ಜಗಪತಿ ಬಾಬು ಸೇರಿದಂತೆ ದೊಡ್ಡ ದೊಡ್ಡ ನಟರ ತಾರಾಗಣವೇ ಇದ್ದು ಕ್ಲೈಮ್ಯಾಕ್ಸ್​​​ ತುಂಬಾ ಕ್ಯೂರಿಯಾಸಿಟಿ ಹುಟ್ಟಿಸಿದೆ.

ABOUT THE AUTHOR

...view details