ಕರ್ನಾಟಕ

karnataka

ETV Bharat / sitara

'ಕಾತುವಾಕುಲ ರೆಂಡು ಕಾದಲ್' ಚಿತ್ರದ ಪೋಸ್ಟರ್ ರಿಲೀಸ್​.. ಫೆ.11ರಂದು ಟೀಸರ್ ಬಿಡುಗಡೆ

'ಕಾತುವಾಕುಲ ರೆಂಡು ಕಾದಲ್' ಚಿತ್ರದ ಹೊಸ ಪೋಸ್ಟರ್ ಅನ್ನು ನಿರ್ದೇಶಕ ವಿಘ್ನೇಶ್ ಶಿವನ್ ಅನಾವರಣಗೊಳಿಸಿದ್ದಾರೆ. ಸಿನಿಮಾದ ಟೀಸರ್ ಫೆಬ್ರವರಿ 11 ರಂದು ಬಿಡುಗಡೆಯಾಗಲಿದೆ.

By

Published : Feb 3, 2022, 10:08 AM IST

Kaathuvaakula Rendu Kaadhal poster
ಕಾತುವಾಕುಲ ರೆಂಡು ಕಾದಲ್ ಪೋಸ್ಟರ್​

ಹೈದರಾಬಾದ್: ಸಮಂತಾ, ನಯನತಾರಾ ಮತ್ತು ವಿಜಯ್ ಸೇತುಪತಿ ಅಭಿನಯದ 'ಕಾತುವಾಕುಲ ರೆಂಡು ಕಾದಲ್' (Kaathuvaakula Rendu Kaadhal) ಸಿನಿಮಾದ ಟೀಸರ್ ಫೆಬ್ರವರಿ 11 ರಂದು ಬಿಡುಗಡೆಯಾಗಲಿದೆ.

ಈ ಕುರಿತು ಟ್ವಿಟರ್‌ನಲ್ಲಿ ಚಿತ್ರದ ನಿರ್ದೇಶಕ ವಿಘ್ನೇಶ್ ಶಿವನ್ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಚಿತ್ರದ ಹೊಸ ಪೋಸ್ಟರ್ ಅನ್ನು ಸಹ ಅನಾವರಣಗೊಳಿಸಿದ್ದಾರೆ. 11.2.2022ರಂದು ಥಿಯೇಟರ್‌ಗಳಲ್ಲಿ 'ಕಾತುವಾಕುಲ ರೆಂಡು ಕಾದಲ್'ನ ಟೀಸರ್ ಬಿಡುಗಡೆಯಾಗಲಿದೆ ಎಂದು ಬರೆದುಕೊಂಡಿದ್ದಾರೆ.

ಹೊಸ ಪೋಸ್ಟರ್‌ನಲ್ಲಿ ಚಿತ್ರದ ಕಲಾವಿದರಾದ ಸಮಂತಾ, ವಿಜಯ್ ಮತ್ತು ನಯನತಾರಾ ಕಾಣಿಸಿಕೊಂಡಿದ್ದಾರೆ. ಮೂವರು ಪರಸ್ಪರರಿಗೆ ಹೊಂದಿಕೆಯಾಗುವ ಬಿಳಿ ಬಟ್ಟೆಗಳನ್ನು ಧರಿಸಿರುವುದನ್ನು, ಒಬ್ಬರನ್ನೊಬ್ಬರು ನೋಡುತ್ತಿರುವುದನ್ನು ಪೋಸ್ಟರ್​ನಲ್ಲಿ ಕಾಣಬಹುದಾಗಿದೆ. ಇನ್ನೂ ಈ ಸಿನಿಮಾ ಏಪ್ರಿಲ್​ನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಆದರೆ ಬಿಡುಗಡೆಯ ನಿಖರ ದಿನಾಂಕವನ್ನು ಚಿತ್ರತಂಡ ಇನ್ನೂ ಸ್ಪಷ್ಟಪಡಿಸಿಲ್ಲ.

ಇದನ್ನೂ ಓದಿ:ಪಡ್ಡೆ ಹುಡುಗರ ನಿದ್ದೆಗೆಡಿಸಿದ ನೋರಾ ಫತೇಹಿ ಹಾಟ್​ ಫೋಟೋ​..

ಕಾತುವಾಕುಲ ರೆಂಡು ಕಾದಲ್' ಸಿನಿಮಾವನ್ನು ವಿಘ್ನೇಶ್ ಶಿವನ್ ನಿರ್ದೇಶಿಸಿದ್ದು, ರೌಡಿ ಪಿಕ್ಚರ್ಸ್ ಮತ್ತು ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ನಿರ್ಮಿಸಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details