ಕೆನಡಾದ ಗಾಯಕ ಜಸ್ಟೀನ್ ಬೈಬರ್ ಇತ್ತೀಚೆಗೆ ಎರಡನೇ ಬಾರಿ ಮದುವೆಯಾಗಿ ಆ ಸಮಾರಂಭದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಬೈಬರ್ ಮತ್ತು ಮಡದಿ ಬಲ್ಡ್ವಿನ್ ಮೊದಲ ಬಾರಿಗೆ ನ್ಯೂಯಾರ್ಕ್ನ ಕೋರ್ಟ್ ಹೌಸ್ನಲ್ಲಿ ವಿವಾಹವಾಗಿದ್ದರು. ನಂತರ ಕಳೆದ ಸೆಪ್ಟಂಬರ್ 30ರಂದು ಸೌತ್ ಕರೋಲಿನಾದ ಪಲ್ಮೆಟ್ಟೋ ಬ್ಲಫ್ ಎಂಬಲ್ಲಿ ಮತ್ತೆ ಮದುವೆಯಾಗಿದ್ದಾರೆ. ಈ ವಿವಾಹ ಸಮಾರಂಭದ ಕೆಲವು ಫೋಟೋಗಳನ್ನು ಮತ್ತು ಅದ್ಭುತ ಕ್ಷಣಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.