ಕರ್ನಾಟಕ

karnataka

By

Published : Dec 22, 2019, 5:26 PM IST

ETV Bharat / sitara

ನಾಗಿಣಿ-2 ಧಾರಾವಾಹಿಯಲ್ಲಿ ನಾಗರಾಜನಾದ ಜಯರಾಮ್​ ಕಾರ್ತಿಕ್​​​..

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ನಾಗಿಣಿ- 2' ಧಾರಾವಾಹಿಯಲ್ಲಿ ನಾಗರಾಜನಾಗಿ ಜಯರಾಂ ಕಾರ್ತಿಕ್ ಕಾಣಿಸಿಕೊಳ್ಳಲಿದ್ದಾರೆ.

JK acting in nagaini 2 serial as nagaraja
ನಾಗಿಣಿ-2 ಧಾರಾವಾಹಿ

ಕಿರುತೆರೆಯ ಸೂಪರ್ ಸ್ಟಾರ್ ಜೆಕೆ ಎಂದೇ ಹೆಸರಾಗಿರುವ ಜಯರಾಂ ಕಾರ್ತಿಕ್ ಅಭಿನಯಕ್ಕೆ ಮನಸೋಲದವರಿಲ್ಲ. ಜೆಕೆ ಅಲಿಯಾಸ್ ಜಯರಾಂ ಕಾರ್ತಿಕ್ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ನಾಗಿಣಿ 2 ಧಾರಾವಾಹಿಯಲ್ಲಿ ನಾಗರಾಜನಾಗಿ ಜಯರಾಂ ಕಾರ್ತಿಕ್ ಕಾಣಿಸಿಕೊಳ್ಳಲಿದ್ದಾರೆ.

ಜಯರಾಂ ಕಾರ್ತಿಕ್ ಅಭಿನಯಿಸಿರುವ ಈ ಧಾರಾವಾಹಿಯ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ತಮ್ಮ ಪ್ರೀತಿಯ ನಟನನ್ನು ಮತ್ತೊಮ್ಮೆ ಕಿರುತೆರೆಯಲ್ಲಿ ನೋಡಲು ವೀಕ್ಷಕರು ಕಾತರರಾಗಿದ್ದಾರೆ. ಈ ಮೊದಲು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಶ್ವಿನಿ ನಕ್ಷತ್ರ ಧಾರಾವಾಹಿಯಲ್ಲಿ ನಾಯಕನಾಗಿ ಜೆಕೆ ಕಾಣಿಸಿಕೊಂಡಿದ್ರು.

ನಾಗರಾಜನಾದ ಜಯರಾಮ್​ ಕಾರ್ತಿಕ್​​​

ಅಶ್ವಿನಿ ನಕ್ಷತ್ರದಲ್ಲಿ ನಟಿಸುವ ಮೂಲಕ ಮೊದಲ ಬಾರಿ ಬಣ್ಣದ ಲೋಕದಲ್ಲಿ ಕಾಣಿಸಿಕೊಂಡಿದ್ದ ಜಯರಾಂ ಅವರನ್ನು ವೀಕ್ಷಕರು ಪ್ರೀತಿಯಿಂದ ಒಪ್ಪಿಕೊಂಡಿದ್ದರು. ಮಾತ್ರವಲ್ಲ ಇಡೀ ಧಾರಾವಾಹಿಯಲ್ಲಿ ಅವರು ಹೇಳುತ್ತಿದ್ದ ಹೆಂಡ್ತಿ ಡೈಲಾಗ್ ಅಂತೂ ವೀಕ್ಷಕರನ್ನು ಸೆಳೆದುಬಿಟ್ಟಿತ್ತು.

ಇದರ ಜೊತೆಗೆ ಹಿಂದಿಯ ಸ್ಟಾರ್ ಪ್ಲಸ್​​ನಲ್ಲಿ ಪ್ರಸಾರವಾಗುತ್ತಿದ್ದ ಸಿಯಾ ಕೇ ರಾಮ್ ಧಾರಾವಾಹಿಯಲ್ಲಿ ರಾವಣನಾಗಿ ಮಿಂಚಿದ್ದ ಜಯರಾಂ ನಂತರ ಬಿಗ್ ಬಾಸ್ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು.

ABOUT THE AUTHOR

...view details