ಕರ್ನಾಟಕ

karnataka

ETV Bharat / sitara

ರಾಷ್ಟ್ರ ಪ್ರಶಸ್ತಿ ವಿಜೇತರನ್ನು ಸನ್ಮಾನಿಸಿದ ಕ್ರೇಜಿ ಸ್ಟಾರ್​​​ ರವಿಚಂದ್ರನ್​​ - Director Nagatihalli chandrashekar

2019ನೇ ಸಾಲಿನಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತರಿಗೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ  'ಇಂಡಿಯಾ ವರ್ಸಸ್ ಇಂಗ್ಲೆಂಡ್' ಚಿತ್ರತಂಡ ಸನ್ಮಾನಿಸಿದೆ.

'India vs England' film honored with National Award Winners

By

Published : Aug 17, 2019, 9:04 AM IST

ಕನ್ನಡ ಚಿತ್ರರಂಗ 2019ನೇ ಸಾಲಿನಲ್ಲಿ 13 ರಾಷ್ಟ್ರ ಪ್ರಶಸ್ತಿಗಳನ್ನು ಬಾಚಿಕೊಂಡು ಹೊಸ ಇತಿಹಾಸ ಸೃಷ್ಟಿಸಿದೆ. ಪ್ರಶಸ್ತಿ ವಿಜೇತರನ್ನುನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ'ಇಂಡಿಯಾ ವರ್ಸಸ್ ಇಂಗ್ಲೆಂಡ್' ಚಿತ್ರತಂಡ ಸನ್ಮಾನಿಸಿ ಗೌರವಿಸಿದೆ.

'ಇಂಡಿಯಾ ವರ್ಸಸ್ ಇಂಗ್ಲೆಂಡ್' ಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದ ಸಂದರ್ಭದಲ್ಲಿ ನಟ-ನಿರ್ದೇಶಕ ಕ್ರೇಜಿ ಸ್ಟಾರ್​ ರವಿಚಂದ್ರನ್, ರಾಷ್ಟ್ರ ಪ್ರಶಸ್ತಿ ವಿಜೇತರಾದ ನಿರ್ದೇಶಕ ರಿಷಭ್​ ಶೆಟ್ಟಿ, ಒಂದಲ್ಲ ಎರಡಲ್ಲ ಚಿತ್ರದ ನಿರ್ದೇಶಕ ಸತ್ಯ ಪ್ರಕಾಶ್, ಕೆಜಿಎಫ್ ಚಿತ್ರತಂಡ ಮತ್ತು ಬಾಲನಟ ಮಾಸ್ಟರ್ ರೋಹಿತ್​ ಅವರನ್ನು ಸನ್ಮಾನಿಸಿದರು.

ರಾಷ್ಟ್ರ ಪ್ರಶಸ್ತಿ ವಿಜೇತರಿಗೆ ಸನ್ಮಾನ

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊದಲು: 11 ರಾಷ್ಟ್ರೀಯ ಪ್ರಶಸ್ತಿಗಳ ಗರಿ

ಈ ಬಾರಿ ಸ್ಯಾಂಡಲ್​ವುಡ್​ಗೆ ಒಟ್ಟು 13 ರಾಷ್ಟ್ರ ಪ್ರಶಸ್ತಿಗಳು ಒಲಿದುಬಂದಿವೆ. ಇದರಿಂದ ಬೇರೆ ಚಿತ್ರರಂಗಗಳು ಸ್ಯಾಂಡಲ್​ವುಡ್​​ನತ್ತ ಬೆರಗುಗಣ್ಣಿನಿಂದ ನೋಡುವಂತೆ ಮಾಡಿರುವ ಪ್ರಶಸ್ತಿ ವಿಜೇತರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ABOUT THE AUTHOR

...view details