ಕರ್ನಾಟಕ

karnataka

ETV Bharat / sitara

ಇಂದು 'ತಲೈವ' ಹುಟ್ಟುಹಬ್ಬ: ಹ್ಯಾಪಿ ಬರ್ತ್​​ ಡೇ 'ಕಬಾಲಿ'

ಸೂಪರ್​ ಸ್ಟಾರ್​​ ರಜನಿಕಾಂತ್ ಇಂದು 70ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇವರ ಹುಟ್ಟುಹಬ್ಬ ನಿಮಿತ್ತ ತಮಿಳುನಾಡಿನ ರಜಿನಿ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ.

By

Published : Dec 12, 2019, 9:44 AM IST

Updated : Dec 12, 2019, 3:01 PM IST

happy birth day rajanikanth
ಹ್ಯಾಪಿ ಬರ್ತ್​​ ಡೆ 'ಕಬಾಲಿ'

ದೇಶದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಬಹುಭಾಷಾ ನಟ, ಸ್ಟೈಲ್ ಕಿಂಗ್, ತಮಿಳು ಸೂಪರ್​​​ ಸ್ಟಾರ್​​​ ರಜನಿಕಾಂತ್ ಇಂದು 70ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇವರ ಹುಟ್ಟುಹಬ್ಬ ನಿಮಿತ್ತ ತಮಿಳುನಾಡಿನ ರಜಿನಿ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ.

ಸೂಪರ್​​ ಸ್ಟಾರ್​​ ರಜನಿ ಕಾಂತ್​​​ 1950ರಲ್ಲಿ ಕರ್ನಾಟದಲ್ಲಿ ಜನಿಸಿ, ಕೆಲವು ದಿನಗಳ ಕಾಲ ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಇವರು ಶಿವಾಜಿ ರಾವ್ ಗಾಯಕ್ವಾಡ್ ಅಲಿಯಾಸ್ ರಜನಿಕಾಂತ್ ಅಂತ ಮೊದಲು ಹೆಸರು ಮಾಡಿ, ನಂತ್ರ ಎಂಟ್ರಿ ಕೊಟ್ಟಿದ್ದು ತಮಿಳು ಚಿತ್ರರಂಗಕ್ಕೆ.

1975ರಲ್ಲಿ ಕೆ.ಬಾಲಚಂದರ್ ನಿರ್ದೇಶನದ ಅಪೂರ್ವ ರಾಗಂಗಳ್ ಚಿತ್ರದ ಮೂಲಕ ಬಣ್ಣದ ಬದುಕನ್ನು ಆರಂಭಿಸಿದರು. ಇನ್ನು ರಜಿನಿ ಚಿತ್ರರಂಗದಲ್ಲಿ ತಮ್ಮದೇ ಸ್ಟೈಲ್, ಗೆಟಪ್, ಡೈಲಾಗ್ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ಇವರು ಕೇವಲ ತಮಿಳು ಮಾತ್ರವಲ್ಲದೆ, ಕನ್ನಡ, ತೆಲುಗು, ಮಲಯಾಳಂ, ಹಿಂದಿ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನು ಇವರು ನಟಿಸಿರುವ ಇತ್ತೀಚಿನ ಸಿನಿಮಾಗಳಾದ 2.0, ಪೆಟ್ಟ ಸಿನಿಮಾಗಳು ಬಾಕ್ಸ್​​ ಆಫೀಸ್​​ ಕೊಳ್ಳೆ ಹೊಡೆದಿದ್ದವು. ಇದೀಗ ದರ್ಬಾರ್​​​ ಸಿನಿಮಾ ಪ್ರಮೋಷನ್​​ನಲ್ಲಿ ಬ್ಯುಸಿ ಇರುವ ತಲೈವ, ಮತ್ತೊಂದು ಹೊಸ ಸಿನಿಮಾದ ಮುಹೂರ್ತವನ್ನೂ ಮುಗಿಸಿದ್ದಾರೆ.

Last Updated : Dec 12, 2019, 3:01 PM IST

ABOUT THE AUTHOR

...view details