ಕರ್ನಾಟಕ

karnataka

ETV Bharat / sitara

ಅಭಿಮಾನಿಗಳಿಗೆ ತಮ್ಮ ಮೇಕಪ್ ಮ್ಯಾನ್ ಪರಿಚಯ ಮಾಡಿಕೊಟ್ಟ ಕಿಚ್ಚ... ಇವರಿಬ್ಬರ ನಂಟು ಎಂದಿನಿಂದ?

1996 ಜನವರಿ 31 ರಂದು ನನ್ನ ಸಿನಿಮಾದಲ್ಲಿ ಮೇಕಪ್ ಮ್ಯಾನ್ ಆಗಿದ್ದ ಗುರುಮೂರ್ತಿಯವರೇ ಅಂದಿನಿಂದ ಇಂದಿನ ಸಿನಿಮಾಗಳವರೆಗೂ ನನಗೆ ಮೇಕಪ್ ಮ್ಯಾನ್​ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಸುದೀಪ್ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.

By

Published : Nov 20, 2019, 7:56 PM IST

Updated : Nov 20, 2019, 11:21 PM IST

ಮೇಕಪ್ ಮ್ಯಾನ್ ಪರಿಚಯ ಮಾಡಿಕೊಟ್ಟ ಕಿಚ್ಚ

ಕನ್ನಡ ಚಿತ್ರರಂಗ ಅಲ್ಲದೆ ಟಾಲಿವುಡ್, ಕಾಲಿವುಡ್​, ಬಾಲಿವುಡ್​​​​ನಲ್ಲೂ ಮುದ್ರೆ ಒತ್ತಿರುವ ಕಿಚ್ಚ ಸುದೀಪ್, ಸದ್ಯಕ್ಕೆ ಕನ್ನಡದಲ್ಲಿ ಕೋಟಿಗೊಬ್ಬ-3 ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಜೊತೆಗೆ ಹಿಂದಿಯಲ್ಲಿ ಸಲ್ಮಾನ್ ಖಾನ್ ಜೊತೆ ಅಭಿನಯಿಸಿರುವ ದಬಾಂಗ್​​-3 ಕೂಡಾ ಬಿಡುಗಡೆಯಾಗಬೇಕಿದೆ.

ಅಭಿಮಾನಿಗಳಿಗೆ, ಸಹನಟರಿಗೆ ಯಾವಾಗಲೂ ಗೌರವ ನೀಡುವ ಕಿಚ್ಚ, ಇದೀಗ ತಮ್ಮ ಮೇಕಪ್ ಮ್ಯಾನ್ ಬಗ್ಗೆ ಅಚ್ಚರಿಯ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ಸುದೀಪ್​​, 'ತಾಯವ್ವ' ಎಂಬ ಸಿನಿಮಾದಿಂದ ಪುಟ್ಟ ಪಾತ್ರದ ಮೂಲಕ ಕರಿಯರ್ ಆರಂಭಿಸಿ ಈಗ ಬಹುಭಾಷಾ ನಟನಾಗಿ ಬೇಡಿಕೆ ಹೆಚ್ಚಿಸಿಕೊಂಡಿರುವುದು ಇತಿಹಾಸ. 'ಸ್ಪರ್ಶ' ಸಿನಿಮಾ ಮೂಲಕ ನಾಯಕನಾಗಿ ಗುರುತಿಸಿಕೊಂಡ ಸುದೀಪ್, ಸದ್ಯ ತೆರೆ ಹಿಂದಿರುವ ವ್ಯಕ್ತಿಯ ಅಪರೂಪದ ವಿಡಿಯೋವೊಂದನ್ನು ಶೇರ್ ಮಾಡುವ ಮೂಲಕ ಖುಷಿ ಹಂಚಿಕೊಂಡಿದ್ದಾರೆ.

ಯಾವುದೇ ನಟ ತೆರೆಮೇಲೆ ಸುಂದರವಾಗಿ ಕಾಣಬೇಕು ಎಂದರೆ ಅದರ ಹಿಂದೆ ಸಾಕಷ್ಟು ತಂತ್ರಜ್ಞರ, ಕಲಾವಿದರ ಶ್ರಮ ಇದ್ದೇ ಇರುತ್ತದೆ. ಆದರೂ ಅವರು ತೆರೆಮರೆಯಲ್ಲೇ ಇರುತ್ತಾರೆ. ಸುದೀಪ್ ತಮ್ಮ ಸಿನಿಮಾದ ಆರಂಭದ ದಿನಗಳಲ್ಲಿ ಮೇಕಪ್ ಮ್ಯಾನ್ ಆಗಿದ್ದ ಗುರುಮೂರ್ತಿ ಅವರನ್ನು ಪುಟ್ಟ ವಿಡಿಯೋದ ಮೂಲಕ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.

1996 ಜನವರಿ 31 ರಂದು ನನ್ನ ಸಿನಿಮಾದಲ್ಲಿ ಮೇಕಪ್ ಮ್ಯಾನ್ ಆಗಿದ್ದ ಗುರುಮೂರ್ತಿಯವರೇ ಅಂದಿನಿಂದ ಇಂದಿನ ಸಿನಿಮಾಗಳವರೆಗೂ ನನಗೆ ಮೇಕಪ್ ಮ್ಯಾನ್​ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಸುದೀಪ್ ಆ ದಿನಗಳನ್ನು ಮೆಲುಕು ಹಾಕಿದ್ದಾರೆ. ಮೊದಲು ಬಣ್ಣ ಹಚ್ಚಿದ ಶೂಟಿಂಗ್ ಲೋಕೇಶನ್ ಹಾಗೂ ಮೇಕಪ್ ಮ್ಯಾನ್ ಗುರುಮೂರ್ತಿ ಅವರ ವಿಡಿಯೋ ಮಾಡಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Last Updated : Nov 20, 2019, 11:21 PM IST

ABOUT THE AUTHOR

...view details