ಪುನೀತ್ ರಾಜ್ಕುಮಾರ್ ಮಾಲೀಕತ್ವದ ಪಿಆರ್ಕೆ ಬ್ಯಾನರ್ ಅಡಿ ನಿರ್ಮಾಣವಾದ 'ಫ್ರೆಂಚ್ ಬಿರ್ಯಾನಿ' ಸಿನಿಮಾ ಶೀಘ್ರದಲ್ಲೇ ಒಟಿಟಿಯಲ್ಲಿ ಪ್ರಸಾರವಾಗಲಿದೆ. ಇಂದು ಚಿತ್ರತಂಡ ಟ್ರೇಲರ್ ಬಿಡುಗಡೆ ಮಾಡಿದೆ.
ಬೊಂಬಾಟ್ ಕಾಮಿಡಿ ಹಾಗೂ ಥ್ರಿಲ್ಲರ್ ಕಥಾ ಹಂದರ ಹೊಂದಿರುವ 'ಫ್ರೆಂಚ್ ಬಿರಿಯಾನಿ' ಚಿತ್ರದಲ್ಲಿ 'ಹಂಬಲ್ ಪೊಲಿಟಿಷಿಯನ್ ನೊಗರಾಜ್' ಖ್ಯಾತಿಯ ದಾನಿಷ್ ಸೇಠ್ ಮುಸ್ಲಿಂ ಆಟೋ ಚಾಲಕನಾಗಿ ನಟಿಸಿದ್ದಾರೆ. ಇವರೊಂದಿಗೆ ಪಿಟೋಬಾಶ್ ತ್ರಿಪಾಠಿ, ದಿಶಾ ಮದನ್, ಸಾಲ್ ಯೂಸುಫ್ , ಮೈಕಲ್ ಮಧು ಕೂಡಾ ಅಭಿನಯಿಸಿದ್ದಾರೆ.
ಮುಸ್ಲಿಂ ಯುವಕನ ಪಾತ್ರದಲ್ಲಿ ದಾನಿಷ್ ಸೇಠ್ ಪಂಚಿಂಗ್ ಡೈಲಾಗ್ ಹೊಡೆಯುವ ಮೂಲಕ ಕಚಗುಳಿ ಇಟ್ಟಿದ್ದಾರೆ. 'ಹ್ಯಾಪಿ ನ್ಯೂ ಇಯರ್' ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದ, ಪನ್ನಾಗಾಭರಣ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಪಿಆರ್ಕೆ ಬ್ಯಾನರ್ ಅಡಿ ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ಗುರುದತ್ ಎ ತಲ್ವಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
'ಲಾ' ಸಿನಿಮಾ ಪ್ರಸಾರ ಆದ ಒಂದು ವಾರದ ನಂತರ 'ಫ್ರೆಂಚ್ ಬಿರ್ಯಾನಿ' ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗುತ್ತಿದೆ. ಸುಮಾರು 200 ದೇಶಗಳಲ್ಲಿ ಈ ಸಿನಿಮಾ ವೀಕ್ಷಿಸಲು ದೊರೆಯುತ್ತಿದೆ. ಫ್ರೆಂಚ್ ಬಿರ್ಯಾನಿ ಟ್ರೇಲರ್ ಕುತೂಹಲ ಹುಟ್ಟಿಸಿದ್ದು ದಾನಿಷ್ ಸೇಠ್ ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.