ಬಿಗ್ ಬಾಸ್ ಮಾಜಿ ಸ್ಪರ್ಧಿಗಳಿಂದ ಕಿಚ್ಚನ ಮಗಳಿಗೆ ಬರ್ತ್ ಡೇ ಶುಭಾಶಯ ಕೋರಿಕೆ - ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿ ಕಿಶನ್ ಬಿಳಗಲಿ
ಅಕ್ಕ ಧಾರಾವಾಹಿ ಖ್ಯಾತಿಯ ಅನುಪಮಾ ಗೌಡ ಅವರು ಕೂಡಾ ಮುದ್ದು ಕುವರಿ ಸಾನ್ವಿಗೆ ಶುಭಾಶಯ ಹೇಳಿದ್ದಾರೆ. ಹ್ಯಾಪಿ ಬರ್ತ್ ಡೇ ಸಾನು! ಹೋಪ್ ಯುವರ್ ಸ್ಪೆಷಲ್ ಡೇ ವಿಲ್ ಬ್ರಿಂಗ್ ಯು ಎ ಲಾಟ್ ಆಫ್ ಹ್ಯಾಪಿನೆಸ್, ಲವ್ ಆ್ಯಂಡ್ ಫನ್ ಎಂದು ಮುದ್ದಾಗಿ ವಿಶ್ ಮಾಡಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮುದ್ದಿನ ಮಗಳು ಸಾನ್ವಿಗೆ ನಿನ್ನೆ 16 ವರ್ಷ ತುಂಬಿದೆ. ಮಗಳಿಗಾಗಿ ಕಿಚ್ಚ ಪ್ರೀತಿಯಿಂದ ಹಾಡು ಬರೆದಿದ್ದು ವೈರಲ್ ಆಗಿತ್ತು. ಅಂದ ಹಾಗೇ ಇವರ ಮಗಳ ಹುಟ್ಟುಹಬ್ಬಕ್ಕೆ ಸಾಕಷ್ಟು ಕಿರುತೆರೆ ತಾರೆಯರು ಕೂಡಾ ವಿಶ್ ಮಾಡಿದ್ದಾರೆ. ಅದರಲ್ಲೂ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ನ ಸ್ಪರ್ಧಿಗಳಾಗಿ ಭಾಗವಹಿಸಿದ್ದ ಕಿರುತೆರೆ ಕಲಾವಿದರು ಮುದ್ದು ಹುಡುಗಿ ಸಾನ್ವಿಗೆ ಸಂತಸದಿಂದ ವಿಶ್ ಮಾಡಿದ್ದಾರೆ.
ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿ ಕಿಶನ್ ಬಿಳಗಲಿ, ಸಾನ್ವಿಯೊಂದಿಗಿನ ಗ್ರೂಪ್ ಫೋಟೋವೊಂದನ್ನು ಇನ್ ಸ್ಟಾಗ್ರಾಂನಲ್ಲಿ ಹಾಕುವ ಮೂಲಕ ಬರ್ತ್ ಡೇ ವಿಶ್ ಹೇಳಿದ್ದು, ಸ್ವೀಟೆಸ್ಟ್ ಸೋಲ್ ಎಂದು ಬರೆದುಕೊಂಡಿದ್ದಾರೆ.