ಕರ್ನಾಟಕ

karnataka

By

Published : Aug 24, 2020, 4:42 PM IST

ETV Bharat / sitara

ತಮ್ಮದೇ ಒಟಿಟಿ ಪ್ಲಾಟ್​​​​​ಫಾರ್ಮ್ ಸ್ಥಾಪಿಸಿದ ನಿರ್ದೇಶಕ ಬಿ.ಆರ್​. ಕೇಶವ್

50ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿ 25 ಸಿನಿಮಾಗಳ ನಿರ್ಮಾಣ ಮಾಡಿರುವ ಬಿ.ಆರ್. ಕೇಶವ್ ಇದೀಗ ಫಿಲ್ಮ್ ​ಶಾಪ್ ಎಂಬ ಒಟಿಟಿ ಪ್ಲಾಟ್​​​​​​ಫಾರ್ಮ್​ ಸ್ಥಾಪನೆ ಮಾಡಿದ್ದಾರೆ.

Film Shopp OTT
ಬಿ.ಆರ್​. ಕೇಶವ್

ಬಹುಮುಖ ಪ್ರತಿಭೆ ಬಿ.ಆರ್​​​. ಕೇಶವ್​​​ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ನಿರ್ಮಾಣದ ಜೊತೆಗೆ ತಮ್ಮದೇ ಆದ ಸ್ಟುಡಿಯೋವೊಂದನ್ನು ನಡೆಸುತ್ತಿದ್ದಾರೆ. ಇದೀಗ ಕೇಶವ್​ ಫಿಲ್ಮ್​ ಶಾಪ್ ಎಂಬ ತಮ್ಮದೇ ಒಟಿಟಿ ಪ್ಲಾಟ್​​​​​​ಫಾರ್ಮ್​ ಸ್ಥಾಪನೆ ಮಾಡಿದ್ದಾರೆ.

ಫಿಲ್ಮ್ ​ಶಾಪ್ ಒಟಿಟಿ ಪ್ಲಾಟ್​​​​​​ಫಾರ್ಮ್

ಇತ್ತೀಚೆಗೆ ಜನರು ಮನರಂಜನೆಗಾಗಿ ಹೆಚ್ಚಾಗಿ ಒಟಿಟಿ ಪ್ಲಾಟ್​​​​​ಫಾರ್ಮ್​ಗಳ ಮೊರೆ ಹೋಗುತ್ತಿದ್ದಾರೆ. ಕೊರೊನಾದಂತ ಕಷ್ಟದ ದಿನಗಳಲ್ಲಿ ಇದು ಸ್ವಲ್ಪ ಮಟ್ಟಿಗೆ ಪ್ರಯೋಜನವಾಗಿದೆ ಎನ್ನಬಹುದು. ಥಿಯೇಟರ್​​​​ಗಳು ಮುಚ್ಚಿರುವ ಕಾರಣ ನಿರ್ಮಾಪಕರು ತಮ್ಮ ಚಿತ್ರಗಳನ್ನು ಒಟಿಟಿ ಮೂಲಕ ಬಿಡುಗಡೆ ಮಾಡಲು ಹೊರಟಿದ್ದಾರೆ. ಈ ಕಾರಣದಿಂದ ಬಿ.ಆರ್​.ಕೇಶವ್ ಇದೀಗ ಒಟಿಟಿ ವೇದಿಕೆಯನ್ನು ಸ್ಥಾಪಿಸಲು ಹೊರಟಿದ್ದಾರೆ. ಕೇಶವ್ ಇದುವರೆಗೂ 54 ಸಿನಿಮಾಗಳ ನಿರ್ದೇಶನ ಸುಮಾರು 25 ಸಿನಿಮಾಗಳ ನಿರ್ಮಾಣ ಮಾಡಿದ್ದಾರೆ.

ಬಿ.ಆರ್​. ಕೇಶವ್

ವರ್ಷಕ್ಕೆ 199 ರೂಪಾಯಿ, ತಿಂಗಳಿಗೆ 79 ಹಾಗೂ ಒಂದು ತಿಂಗಳಿಗೆ 39 ರೂಪಾಯಿ ಹಣ ಪಾವತಿಸಿ ಈ ಫಿಲ್ಮ್​​ಶಾಪ್​​ನಲ್ಲಿ ಚಿತ್ರಗಳನ್ನು ನೋಡಬಹುದಾಗಿದೆ. ಕೇವಲ ಸಿನಿಮಾ ಮಾತ್ರವಲ್ಲದೆ ವೆಬ್​ ಸೀರೀಸ್​, ಕಿರುಚಿತ್ರಗಳು ಸೇರಿದಂತೆ ಇನ್ನಿತರ ಮನರಂಜನಾ ಕಾರ್ಯಕ್ರಮಗಳು ಈ ಪ್ಲಾಟ್​ಫಾರ್ಮ್​ನಲ್ಲಿ ಲಭ್ಯ ಇದೆ. ಗಣೇಶ ಹಬ್ಬದಂದು ಈ ವೇದಿಕೆಗೆ ಚಾಲನೆ ದೊರೆತಿದ್ದು ಚಿತ್ರರಂಗದ ಗಣ್ಯರು ಕೇಶವ್ ಅವರ ಈ ಹೊಸ ಕಾರ್ಯಕ್ಕೆ ಶುಭ ಕೋರಿದ್ದಾರೆ.

ABOUT THE AUTHOR

...view details