ಕರ್ನಾಟಕ

karnataka

ETV Bharat / sitara

ಸುಳ್ಳು ಸುದ್ದಿ ಹರಿಬಿಟ್ಟ ಮಾಧ್ಯಮಕ್ಕೆ 'ಕಿಲಾಡಿ' ಜಗಳದಿಂದಲೇ ಟಾಂಗ್​​ ಕೊಟ್ಟ ಅಕ್ಷಯ್​​!

ನಟ ಅಕ್ಷಯ್​ ಕುಮಾರ್​ ಮತ್ತು ನಿರ್ದೇಶಕ ರೋಹಿತ್​​ ಶೆಟ್ಟಿ ಜೊತೆ ದೊಡ್ಡ ಜಗಳವಾಗಿದೆ ಅಂತ ವೆಬ್​ ಸೈಟ್​ ಒಂದು ಸುದ್ದಿಯನ್ನು ಹರಿಬಿಟ್ಟಿತ್ತು. ಈ ಸುದ್ದಿಗೆ ಕಿಲಾಡಿ ಅಕ್ಷಯ್​ ಸಕ್ಕತ್ತಾಗಿಯೇ ಟಾಂಗ್​​ ಕೊಟ್ಟಿದ್ದಾರೆ. ಸುಳ್ಳು ಸುದ್ದಿಗೆ ಟಾಂಗ್​ ಕೊಡಲು ಅಕ್ಷಯ್​ ಮತ್ತು ಶೆಟ್ರು ಸೇರಿಕೊಂಡು ಒಂದು ನಾಟಕೀಯ ಜಗಳವನ್ನು ಹಾಡಿದ್ದಾರೆ.

By

Published : Nov 12, 2019, 8:56 PM IST

ಅಕ್ಷಯ್​​ ಮತ್ತು ರೋಹಿತ್​ ಶೆಟ್ಟಿ

ಬಾಲಿವುಡ್​​ ಅಂಗಳದಲ್ಲಿ ಗಾಸಿಪ್​​ ಸುದ್ದಿಗಳಿಗೆ ಬರವೇ ಇಲ್ಲ ಬಿಡಿ. ಆ ನಟ ಈ ನಟನನ್ನು ಬೈದ್ರು. ಈ ನಟ ಆ ನಿರ್ದೇಶಕನ ಮೇಲೆ ಹರಿಹಾಯ್ದರು ಅಂತ ಹಲವಾರು ವದಂತಿಗಳು ಬರ್ತಾನೆ ಇರ್ತಾವೆ. ಈ ಪಟ್ಟಿಗೆ ಹೊಸದೊಂದು ಸುಳ್ಳು ಸುದ್ದಿ ಸೇರ್ಪಡೆಯಾಗಿದೆ. ಆ ಸುಳ್ಳು ಸುದ್ದಿ ಏನಪ್ಪ ಅಂದ್ರೆ, ನಟ ಅಕ್ಷಯ್​ ಕುಮಾರ್​ ಮತ್ತು ನಿರ್ದೇಶಕ ರೋಹಿತ್​​ ಶೆಟ್ಟಿ ಜೊತೆ ದೊಡ್ಡ ಜಗಳವಾಗಿದೆ ಅಂತ ವೆಬ್​ ಸೈಟ್​ ಒಂದು ಸುದ್ದಿಯನ್ನು ಹರಿಬಿಟ್ಟಿತ್ತು.

ಆದ್ರೆ ಈ ಸುದ್ದಿಗೆ ಕಿಲಾಡಿ ಅಕ್ಷಯ್​ ಸಕ್ಕತ್ತಾಗಿಯೇ ಟಾಂಗ್​​ ಕೊಟ್ಟಿದ್ದಾರೆ. ನಿಜವಾಗಿ ಅಕ್ಷಯ್​ ಮತ್ತು ನಿರ್ದೇಶಕ ರೋಹಿತ್​ ಶೆಟ್ಟಿ ನಡುವೆ ಜಗಳವೇ ಆಗಿಲ್ಲ. ಆದ್ರೆ ಆ ಸುಳ್ಳು ಸುದ್ದಿಗೆ ಟಾಂಗ್​ ಕೊಡಲು ಅಕ್ಷಯ್​ ಮತ್ತು ಶೆಟ್ರು ಸೇರಿಕೊಂಡು ಒಂದು ನಾಟಕೀಯ ಜಗಳವನ್ನು ಹಾಡಿದ್ದಾರೆ.

ಈ ನಾಟಕದ ಜಗಳಕ್ಕೆ ಕತ್ರಿನಾ ಕೈಫ್​​​ ಆಕ್ಷನ್​​​ ಕಟ್​ ಹೇಳಿದ್ದಾರೆ. ಹೌದು ಈ ಬಗ್ಗೆ ಅಕ್ಷಯ್​​ ಕುಮಾರ್​ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ವಿಡಿಯೋ ಒಂದನ್ನು ಹಾಕಿದ್ದಾರೆ. ಆ ವಿಡಿಯೋದಲ್ಲಿ ಮೊದಲಿಗೆ ಕತ್ರಿನಾ ಕೈಫ್​ ಕಾಣಿಸಿಕೊಂಡು ಸುಳ್ಳು ಸುದ್ದು ಹರಿಬಿಟ್ಟ ವೆಬ್​ ಸೈಟ್​​ ಸುದ್ದಿಯನ್ನು ತೋರಿಸಿ ಈಗ ಲೈವ್​ ನೋಡಿ ಎಂದು ಹೇಳುತ್ತಾರೆ. ಆಮೇಲೆ ಅಕ್ಷಯ್​ ಮತ್ತು ರೋಹಿತ್​ ಶೆಟ್ಟಿ ಜಗಳವಾಡುತ್ತಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್​​ ಸುದ್ದಿಯಾಗಿದೆ.

ಒಟ್ಟಾರೆ ಸುಳ್ಳು ಸುದ್ದಿ ಹರಿಬಿಡುವ ಮಾಧ್ಯಮಗಳಿಗೆ ಕಿಲಾಡಿತನದಿಂದಲೇ ನಟ ಅಕ್ಷಯ್​ ಉತ್ತರ ಕೊಟ್ಟಿದ್ದಾರೆ.

ABOUT THE AUTHOR

...view details