ಕರ್ನಾಟಕ

karnataka

ETV Bharat / sitara

ಸಿನಿಮಾ ಯಶಸ್ಸಿಗಾಗಿ ದೇವರ ಮೊರೆ ಹೋದ 'ಏಕ್ ಲವ್ ಯಾ' ಚಿತ್ರತಂಡ - ಏಕ್ ಲವ್ ಯಾ ಸಿನಿಮಾ ಲೇಟೆಸ್ಟ್​​ ಅಪ್ಡೇಟ್​​

ಸಿನಿಮಾದ ಪ್ರಮೋಷನ್ ಕೆಲಸಗಳನ್ನು ನಿರ್ದೇಶಕ ಪ್ರೇಮ್ ಶುರುಮಾಡಿದ್ದು, ಇದೀಗ ಬೆಂಗಳೂರಿನ ಪ್ರಸಿದ್ದ ದೇವಾಲಯ ಬಂಡಿಮಹಾಕಾಳಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ

Ek Love Ya movie team visits temple
ಬಂಡಿಮಹಾಕಾಳಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಏಕ್ ಲವ್ ಯಾ ಚಿತ್ರ ತಂಡ

By

Published : Feb 9, 2022, 9:59 AM IST

ಜೋಗಿ ಪ್ರೇಮ್‌ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ 'ಏಕ್‌ ಲವ್ ಯಾ'. ಪ್ರೇಮ್ ಪತ್ನಿ ರಕ್ಷಿತಾ ಪ್ರೇಮ್ ಸಹೋದರ ರಾಣಾ ಈ ಸಿನಿಮಾ ಮೂಲಕ ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ಈಗಾಗಲೇ ಹಾಡುಗಳಿಂದ ದೊಡ್ಡಮಟ್ಟದ ಹೈಪ್ ಸೃಷ್ಟಿಸಿರುವ ಏಕ್ ಲವ್ ಯಾ ಸಿನಿಮಾ ಫೆ. 24ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ರಾಣಾ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದು, ನಾಯಕಿಯರಾಗಿ ರಚಿತಾ ರಾಮ್‌ ಮತ್ತು ರೀಷ್ಮಾ ನಾಣಯ್ಯ ನಟಿಸಿದ್ದಾರೆ.


ಸಿನಿಮಾದ ಪ್ರಮೋಷನ್ ಕೆಲಸಗಳನ್ನು ನಿರ್ದೇಶಕ ಪ್ರೇಮ್ ಶುರುಮಾಡಿದ್ದು, ಇದೀಗ ಬೆಂಗಳೂರಿನ ಪ್ರಸಿದ್ದ ದೇವಾಲಯ ಬಂಡಿಮಹಾಕಾಳಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕ ಪ್ರೇಮ್, ಪತ್ನಿ ರಕ್ಷಿತಾ ಪ್ರೇಮ್, ನಾಯಕಿ ರೀಷ್ಮಾ ನಾಣಯ್ಯ ಸೇರಿದಂತೆ ಇತರರು ಇದ್ದರು.

ಚಿತ್ರಕ್ಕೆ ಮಹೇಂದ್ರ ಸಿಂಹ ಅವರ ಛಾಯಾಗ್ರಹಣ ಮತ್ತು ಅರ್ಜುನ್​ ಜನ್ಯ ಸಂಗೀತವಿದೆ. ಇತ್ತೀಚೆಗಷ್ಟೇ ರಿಲೀಸ್ ಆಗಿರುವ 'ಮೀಟ್ ಮಾಡಣ ಇಲ್ಲ, ಡೇಟ್ ಮಾಡಣ' ಹಾಡು ಸಖತ್ ವೈರಲ್ ಆಗಿದೆ. ವಿಜಯ್ ಈಶ್ವರ್ ಬರೆದಿರುವ ಈ ಹಾಡನ್ನು ಐಶ್ವರ್ಯಾ ರಂಗರಾಜನ್ ಹಾಡಿದ್ದಾರೆ.

ಫೆಬ್ರವರಿ 11ರಂದು ಚಿತ್ರದ ಅಫೀಶಿಯಲ್​​ ಟ್ರೈಲರ್ ಬಿಡುಗಡೆ ಮಾಡಲು ನಿರ್ದೇಶಕ ಪ್ರೇಮ್ ಪ್ಲಾನ್ ಮಾಡಿದ್ದಾರೆ. ರಕಿತಾ ಫಿಲ್ಮ್ ಫ್ಯಾಕ್ಟರಿಯಲ್ಲಿ ಈ ಸಿನಿಮಾವನ್ನ ನಿರ್ಮಾಣ ಮಾಡಲಾಗಿದೆ.

ಇದನ್ನೂ ಓದಿ: 'ಏಕ್​ ಲವ್ ಯಾ' ಬಗ್ಗೆ ಮಹತ್ವದ ಮಾಹಿತಿ ನೀಡಿದ್ರು ಪ್ರೇಮ್​

ABOUT THE AUTHOR

...view details