ಕರ್ನಾಟಕ

karnataka

ETV Bharat / sitara

'ಪೊಗರು' ಚಿತ್ರಕ್ಕಾಗಿ ಅಣ್ಣಾವ್ರಿಂದ ಏನನ್ನೋ ಕದ್ದಿದ್ದಾರಂತೆ ಧ್ರುವ! - ಧ್ರುವಸರ್ಜಾ

ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಧ್ರುವ ಸರ್ಜಾ ಪೊಗರು ಸಿನಿಮಾಕ್ಕಾಗಿ ಅಣ್ಣಾವ್ರಿಂದ ಒಂದ ಅಂಶವನ್ನು ಕಳ್ಳತನ ಮಾಡಿದ್ದೇನೆ ಎಂದು ಹೇಳಿದ್ರು. ಆದ್ರೆ ಅದೇನು ಎಂಬುದರ ಬಗ್ಗೆ ಮಾತ್ರ ಕ್ಲೂ ಕೊಡಲಿಲ್ಲ.

'ಪೊಗರು' ಚಿತ್ರಕ್ಕಾಗಿ ಅಣ್ಣಾವ್ರಿಂದ ಏನನ್ನೋ ಕದ್ದಿದ್ದಾರಂತೆ ಧ್ರುವ!
'ಪೊಗರು' ಚಿತ್ರಕ್ಕಾಗಿ ಅಣ್ಣಾವ್ರಿಂದ ಏನನ್ನೋ ಕದ್ದಿದ್ದಾರಂತೆ ಧ್ರುವ!

By

Published : Jan 20, 2021, 8:10 PM IST

ಧ್ರುವ ಸರ್ಜಾ ಮತ್ತು ನಂದ ಕಿಶೋರ್​​ ಕಾಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ಪೊಗರು ಸಿನಿಮಾ ಸ್ಯಾಂಡಲ್​ವುಡ್​​ ಸೇರಿದಂತೆ ದಕ್ಷಿಣ ಭಾರದಲ್ಲಿ ದೊಡ್ಡ ಹವಾ ಎಬ್ಬಸಿದೆ.

ಪೊಗರು ಪೋಸ್ಟರ್​​

ಪೊಗರು ಚಿತ್ರವು ಫೆ.19ಕ್ಕೆ ತೆರೆ ಕಾಣುತ್ತಿದ್ದು, ಇಂದು ಸಿನಿಮಾ ಪ್ರಮೋಷನ್​​​ ಹಾಗೂ ಸುದ್ದಿಗೋಷ್ಠಿಯನ್ನು ಚಿತ್ರತಂಡ ಆಯೋಜಿಸಿತ್ತು. ಈ ವೇಳೆ ಧ್ರುವ ಸರ್ಜಾ ಸಿನಿಮಾ ಬಗೆಗಿನ ಇಂಟರೆಸ್ಟಿಂಗ್​ ಮಾಹಿತಿ ಹಂಚಿಕೊಂಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಧ್ರುವ ಸರ್ಜಾ, ಪೊಗರು ಸಿನಿಮಾಕ್ಕಾಗಿ ಅಣ್ಣಾವ್ರಿಂದ ಒಂದ ಅಂಶವನ್ನು ಕಳ್ಳತನ ಮಾಡಿದ್ದೇನೆ ಎಂದು ಹೇಳಿದ್ರು. ಆದ್ರೆ, ಅದೇನು ಎಂಬುದರ ಬಗ್ಗೆ ಮಾತ್ರ ಕ್ಲ್ಯೂ ಕೊಡಲಿಲ್ಲ.

ಪೊಗರು ಪೋಸ್ಟರ್​​

ಸಿನಿಮಾದಲ್ಲಿ ನೀವು ನೋಡಿದ್ರೇ ನಿಮ್ಗೆ ಗೊತ್ತಾಗುತ್ತೆ ಅಂತಾ ಹೇಳಿ ಸುಮ್ಮನಾದ್ರು. ಹಾಗೆ ಮಾತನ್ನು ಮುಂದುವರೆಸಿದ ಧ್ರುವ ಸರ್ಜಾ, ರಾಜ್​ಕುಮಾರ್​​ರಿಂದ ಯೋಗದ ಬಗ್ಗೆ ಸ್ಫೂರ್ತಿ ಪಡೆದು ಸಿನಿಮಾಕ್ಕಾಗಿ ಅಳವಡಿಕೆ ಮಾಡಿಕೊಂಡಿದ್ದೇನೆ ಎಂದರು.

ಇದೇ ವೇಳೆ ಕರಾಟೆ ಕಿಂಗ್​ ಶಂಕರ್​ನಾಗ್​​​ ಬಗ್ಗೆ ಮಾತನಾಡಿದ ಧ್ರುವ, ‘ಶಂಕರ್ ನಾಗ್ ಅವರನ್ನು ನೋಡಿ ನಾನು ಪ್ರಭಾವಿತನಾಗಿದ್ದೆ. ಎಲ್ಲಿಂದಲೋ ಕ್ಯಾಮೆರಾ ತರಿಸಿದ್ರು, ಅಂಡರ್​ ವಾಟರ್​ ಶೂಟ್​ ಮಾಡಿದ್ರು.

ಪೊಗರು ಪೋಸ್ಟರ್​​

ಅದ್ಯಾಕೆ ಒಂದು ಮುತ್ತಿನ ಕಥೆ ಸಿನಿಮಾದ ನಂತರ ಎಲ್ಲವೂ ನಿಂತು ಹೋಯ್ತು ಅಂತಾ ಅಲೋಚನೆ ಮಾಡಿ, ನಮ್ಮ ಡೈರೆಕ್ಟರ್​ ಜೊತೆ ಮಾತಾಡಿ, ಒಂದು ಚೌಕಟ್ಟನ್ನ ಬಿಟ್ಟು ದೊಡ್ಡದಾಗಿ ಯೋಚಿಸೋಕೆ ಪ್ಲಾನ್ ಮಾಡಿದ್ವಿ. ಅದರಂತೆ ವಿದೇಶದಿಂದ ನಟರನ್ನ ಕರೆಸಿದ್ವಿ. ಅದೆಲ್ಲದಕ್ಕೂ ನಮ್ಮ ನಿರ್ಮಾಪಕರು ಸಾಥ್ ನೀಡಿದ್ರು ಅಂತಾ ಧ್ರುವ ಹೇಳಿದ್ದಾರೆ.

ABOUT THE AUTHOR

...view details