ಕರ್ನಾಟಕ

karnataka

ETV Bharat / sitara

'ಕನಕಪುರ ಬಂಡೆ' ಟೈಟಲ್​​​​​ಗೆ ಡಿಮ್ಯಾಂಡ್....ತೆರೆ ಮೇಲೆ ಬರುತ್ತಾ ಡಿಕೆಶಿ ಕಥೆಯಾಧಾರಿತ ಸಿನಿಮಾ? - ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣ

ನಿರ್ದೇಶಕ ನಾಗೇಶ್ ಫಿಲ್ಮ್ ಚೇಂಬರ್​​​​​​​​ ಅಧ್ಯಕ್ಷ ಡಿ.ಆರ್. ಜೈರಾಜ್ ಅವರನ್ನು ಭೇಟಿ ಮಾಡಿ 'ಕನಕಪುರ ಬಂಡೆ' ಟೈಟಲ್​​​ಗೆ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆಯನ್ನು ಗಮನಿಸಿದರೆ ಶಾಸಕ ಡಿ.ಕೆ.ಶಿವಕುಮಾರ್ ಅವರನ್ನು ಕುರಿತಾದ ಸಿನಿಮಾ ತಯಾರಾಗುತ್ತಿರಬಹುದಾ ಎಂಬ ಅನುಮಾನ ಕಾಡುತ್ತಿದೆ.

ಡಿಕೆಶಿ

By

Published : Sep 18, 2019, 5:49 PM IST

ರಾಜ್ಯದಲ್ಲಿ ಯಾವುದಾದರೂ ಪ್ರಮುಖ ಘಟನೆಗಳು, ವಿವಾದಾತ್ಮಕ ವಿಷಯಗಳು ಸಂಭವಿಸಿದ ಸಂದರ್ಭದಲ್ಲಿ ಹಾಗೂ ಗಣ್ಯವ್ಯಕ್ತಿಗಳ ಜೀವನಚರಿತ್ರೆಯನ್ನು ಚಿತ್ರ ನಿರ್ಮಾಪಕರು ತೆರೆ ಮೇಲೆ ತರಲು ಯತ್ನಿಸುವುದು ಸಾಮಾನ್ಯ. ಇಂತಹ ಸಾಕಷ್ಟು ಉದಾಹರಣೆಗಳು ಇವೆ.

ಟೈಟಲ್​​​ಗೆ ಮನವಿ ಮಾಡುತ್ತಿರುವ ನಿರ್ದೇಶಕ ನಾಗೇಶ್

ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣ, ಮರ್ಯಾದಾ ಹತ್ಯೆ ಪ್ರಕರಣಗಳು ಜರುಗಿದಾಗ ಆ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ತಯಾರಿಸಿದ ಕಥೆಗಳು ಸಿನಿಮಾ ರೂಪದಲ್ಲಿ ಬಂದಿವೆ. ಇದೀಗ ರಾಜ್ಯದಲ್ಲಿ ಹೆಚ್ಚು ಚರ್ಚೆಯಲ್ಲಿರುವ ವಿಷಯ ಎಂದರೆ ರಾಜಕಾರಣಿ ಡಿ.ಕೆ. ಶಿವಕುಮಾರ್. ಈ ಘಟನೆಗೆ ಸಂಬಂಧಿಸಿದಂತೆ ಚಿತ್ರ ತಯಾರಕರು ಸಿನಿಮಾ ಮಾಡಲು ರೆಡಿಯಾಗಿದ್ದಾರಾ ಎಂಬ ಅನುಮಾನ ಕಾಡುತ್ತಿದೆ. ನಿರ್ದೇಶಕ ನಾಗೇಶ್,​​​​​​ ಫಿಲ್ಮ್​​​​​​​​​​​​ ಚೇಂಬರ್​​​​​​​​​​​​​​​​​​​​​​​​​ನಲ್ಲಿ 'ಕನಕಪುರ ಬಂಡೆ' ಎಂಬ ಟೈಟಲ್​​​ಗೆ ಬೇಡಿಕೆ ಇಟ್ಟಿದ್ದಾರೆ. ಸದ್ಯಕ್ಕೆ 'ಕನಕಪುರ ಬಂಡೆ' ಎಂದು ಕರೆಯುತ್ತಿರುವುದು ಶಾಸಕ ಡಿ.ಕೆ. ಶಿವಕುಮಾರ್ ಅವರಿಗೆ. ಇವೆಲ್ಲವನ್ನೂ ಗಮನಿಸಿದರೆ, ಇಡಿ ವಶದಲ್ಲಿ ತನಿಖೆಗೆ ಒಳಪಟ್ಟಿರುವ ರಾಜಕಾರಣಿ ಡಿ.ಕೆ. ಶಿವಕುಮಾರ್ ಕಥೆ ಸಿನಿಮಾ ರೂಪದಲ್ಲಿ ತೆರೆ ಮೇಲೆ ಬರುತ್ತಿರಬಹುದಾ ಎಂಬ ಅನುಮಾನ ಶುರುವಾಗಿದೆ.

ನಿರ್ದೇಶಕ ನಾಗೇಶ್ ಮನವಿ ಪತ್ರ

ಒಂದು ವೇಳೆ ಟೈಟಲ್ ನೀಡಿದ್ದರೆ ಕೋರ್ಟ್ ಮೊರೆ ಹೋಗಲು ರೆಡಿ ಎಂದು ನಿರ್ದೇಶಕ ನಾಗೇಶ್ ಹೇಳಿದ್ದಾರೆ. ಈ ಟೈಟಲ್​​​​​ಗಳೊಂದಿಗೆ 'ಕನಕಪುರ ಕೆಂಪೇಗೌಡ' 'ಕನಕಪುರ ಬೆಳಗಾವಿ ಎಕ್ಸ್​​​​ಪ್ರೆಸ್​​​​​' ಎಂಬ ಟೈಟಲ್​​​​​​​​ಗೂ ನಿರ್ದೇಶಕ ನಾಗೇಶ್ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಫಿಲ್ಮ್ ಚೇಂಬರ್ ಈ ಟೈಟಲ್​​ಗಳಿಗೆ ಅನುಮತಿ ನೀಡಿದರೆ ಸಿನಿಮಾದಲ್ಲಿ ಏನೆಲ್ಲಾ ಇರಲಿದೆ ಎಂಬುದನ್ನು ಸಿನಿಮಾ ತಯಾರಾಗಿ ಬಿಡುಗಡೆಯಾಗುವವರೆಗೂ ಕಾದು ನೋಡಬೇಕು.

ABOUT THE AUTHOR

...view details