ಕರ್ನಾಟಕ

karnataka

ETV Bharat / sitara

'ಪೊಗರು' ಚಿತ್ರಕ್ಕೆ ತೂಕ ಹೆಚ್ಚಿಸಿಕೊಳ್ಳಲು ಮತ್ತೆ ಜಿಮ್​​ನಲ್ಲಿ ಧ್ರುವಾ ಸರ್ಜಾ ವರ್ಕೌಟ್

ಧ್ರುವಾ ಸರ್ಜಾ ಅಭಿನಯದ 'ಪೊಗರು' ಸಿನಿಮಾ ಬಹುತೇಕ ಶೂಟಿಂಗ್ ಮುಗಿಸಿದ್ದು, ಸಿನಿಮಾಗಾಗಿ ತೂಕ ಹೆಚ್ಚಿಸಿಕೊಳ್ಳಲು ಧ್ರುವಾ ಮತ್ತೆ ಜಿಮ್​​ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ನಂದಕಿಶೋರ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.

By

Published : Jun 12, 2019, 4:55 PM IST

ಧ್ರುವಾಸರ್ಜಾ

ನಂದಕಿಶೋರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಧ್ರುವಾ ಸರ್ಜಾ ಅಭಿನಯದ 'ಪೊಗರು' ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಶೇ. 75ರಷ್ಟು ಭಾಗ ಚಿತ್ರೀಕರಣ ಪೂರ್ಣಗೊಂಡಿದೆ. ಬೆಂಗಳೂರು, ಹೈದರಾಬಾದ್​ನ​ ರಾಮೋಜಿ ಫಿಲ್ಮ್​​​ ಸಿಟಿ​ ವಿಶೇಷ ಸೆಟ್​​ ಹಾಗೂ ಇನ್ನಿತರ ಸ್ಥಳಗಳಲ್ಲಿ ಶೂಟಿಂಗ್ ಜರುಗಿದೆ.

ಜಿಮ್​​ನಲ್ಲಿ ಧ್ರುವಾ ಸರ್ಜಾ ವರ್ಕೌಟ್

ಇನ್ನು ಚಿತ್ರದಲ್ಲಿ ಧ್ರುವಾ ಎರಡು ಶೇಡ್​​ಗಳಲ್ಲಿ ಅಭಿನಯಿಸಿದ್ದಾರೆ. ಶಾಲಾ ವಿದ್ಯಾರ್ಥಿ ಪಾತ್ರ ಮಾಡಲು ಈ ಮುನ್ನ ಧ್ರುವಾ 26 ಕೆಜಿ ತೂಕ ಇಳಿಸಿಕೊಂಡಿದ್ದರು. ಧ್ರುವಾ ತಮ್ಮ ಕ್ಯಾರೆಕ್ಟರ್​​​ಗಾಗಿ ಹೇಗೆ ಬೇಕಾದರೂ ಬಾಡಿ ಬಿಲ್ಡ್ ಮಾಡುತ್ತಾರೆ. ಇದೀಗ ತೂಕವನ್ನು ಹೆಚ್ಚಿಸಿಕೊಳ್ಳಲು ಮತ್ತೆ ಜಿಮ್​​ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ಉದ್ದವಾದ ಕೂದಲು ಬಿಟ್ಟು, ಹೀಗೆ ಮುಖ ಮುಚ್ಚಿಕೊಂಡು ಬೈಸಿಪ್​​​ಗಾಗಿ ವರ್ಕ್ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬಿ.ಕೆ. ಗಂಗಾಧರ್ ಬಂಡವಾಳ ಹೂಡಿರುವ ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ, ಮಯೂರಿ, ಡಾಲಿ ಧನಂಜಯ್​, ಜಗಪತಿ ಬಾಬು, ರವಿಶಂಕರ್, ದೀಪಕ್ ಶೆಟ್ಟಿ, ಸಾಧುಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್ ಹಾಗೂ ಇನ್ನಿತರರು ನಟಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details