ಕರ್ನಾಟಕ

karnataka

ರಿಷಭ್​​​​​​ ಶೆಟ್ಟಿಗೆ ಆಲ್​​​ ದಿ ಬೆಸ್ಟ್​​ ಹೇಳಿದ 'ಬಡವ ರಾಸ್ಕಲ್'​​​

By

Published : Nov 4, 2019, 2:05 PM IST

ಏನೋ ಬಡವ ರಾಸ್ಕಲ್​​ ನಿಂಗೆ ಕನ್ನಡ ಬರಲ್ವಾ ಅನ್ನೋ ಸಾಂಗ್​ ಕೇಳಿರುವ ಡಾಲಿ ಧನಂಜಯ್​​ ನಿರ್ದೇಶಕ ರಿಷಭ್​​ ಶೆಟ್ಟಿ ಮತ್ತು 9 ಸುಳ್ಳುಗಳು ಚಿತ್ರ ತಂಡಕ್ಕೆ ಆಲ್​ ದಿ ಬೆಸ್ಟ್​​ ಹೇಳಿದ್ದಾರೆ.

ರಿಷಬ್​ ಶೆಟ್ಟಿ ಮತ್ತು ಡಾಲಿ ಧನಂಜಯ್​​

ಕನ್ನಡದಲ್ಲಿ '9 ಸುಳ್ಳುಗಳು' ಎಂಬ ಸಿನಿಮಾ ಬರುತ್ತಿದ್ದು, ಸಖತ್​ ಸುದ್ದಿಯಲ್ಲಿದೆ. ಈ ಸಿನಿಮಾ ಹವಾ ಎಬ್ಬಿಸಲು ಕಾರಣ ಅಂದ್ರೆ ನವೆಂಬರ್​​ 1 ಕನ್ನಡ ರಾಜ್ಯೋತ್ಸವದಂದು ಬಿಡುಗಡೆಯಾದ 'ಎನೋ ಬಡವ ರಾಸ್ಕಲ್​ ನಿಂಗ್​ ಕನ್ನಡ ಬರಲ್ವಾ' ಅನ್ನೋ ಹಾಡು.

ಹೌದು, ಈ ಹಾಡಿಗೆ ವಿಕ್ರಮ್​​ ವಸಿಷ್ಠ ಲಿರಿಕ್​ ಬರೆದಿದ್ದು, ಕಿರಿಕ್​ ನಿರ್ದೇಶಕ ರಿಷಭ್​​​ ಶೆಟ್ಟಿ ಧ್ವನಿ ನೀಡಿದ್ದಾರೆ. ಈ ಸಿನಿಮಾಕ್ಕೆ ಮಂಜುನಾಥ್​​​ ಮುನಿಯಪ್ಪ ಆಕ್ಷನ್​​ ಕಟ್​​ ಹೇಳಿದ್ದಾರೆ.

ಈ ಹಾಡು ಹಿಟ್​​ ಆಗಿದ್ದೇನೋ ನಿಜ. ಆದ್ರೆ ಈ ಸಾಂಗ್​ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಸ್ವಲ್ಪ ಅಸಮಾಧಾನದ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಕಾರಣ ಡಾಲಿ ಧನಂಜಯ್​​ ಈಗಾಗಲೇ 'ಬಡವ ರಾಸ್ಕಲ್'​ ಅಂತ ಟೈಟಲ್​ ಇರುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದ್ರಿಂದ ಈಗಾಗಲೇ ಈ ಟೈಟಲ್​ ಮೇಲೆ ಸಿನಿಮಾ ನಿರ್ಮಾಣವಾಗುತ್ತಿದ್ದು, ಮತ್ತೆ ಇದೇ ಟೈಟಲ್​ ಬಳಸಿಕೊಂಡು ಹಾಡು ಮಾಡುವುದು ಎಷ್ಟು ಸರಿ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ.

ಡಾಲಿ ಅಭಿಮಾನಿಯ ಟ್ವೀಟ್​​

ಆದ್ರೆ ಈ ಬಗ್ಗೆ ಖುಷಿಯಿಂದಲೇ ಟ್ವೀಟ್​ ಮಾಡಿರುವ ಡಾಲಿ ಧನಂಜಯ್​​​, ನಮ್ಮ ‘ಬಡವ ರಾಸ್ಕಲ್’ ಸಿನಿಮಾಗೂ, ನಿರ್ದೇಶಕ @shetty_rishab ಅವರು ಅತ್ಯದ್ಭುತವಾಗಿ ಹಾಡಿರುವ ಈ ಹಾಡಿಗೂ ಯಾವುದೇ ಸಂಬಂಧವಿಲ್ಲ. ಯಾವ ಸಿನಿಮಾ ಹಾಡು ಅಂತ ನನಗೂ ಗೊತ್ತಿಲ್ಲ. All the very best to the team. Anyways, thanks for promoting my film ಎಂದು ಬರೆದುಕೊಂಡಿದ್ದಾರೆ.

ಒಟ್ಟಾರೆ ಸಿನಿಮಾದ ನಾಯಕನಿಗೆ ಈ ಹಾಡಿನ ಬಗ್ಗೆ ಬೇಸರ ಇಲ್ಲದಿದ್ರೂ ಡಾಲಿ ಧನಂಜಯ್​ ಅಭಿಮಾನಿಗಳು ಈ ಹಾಡಿನ ಬಗ್ಗೆ ಅಸಮಾಧಾನ ಹೊರ ಹಾಕಿರೋದು ಸುಳ್ಳಲ್ಲ.

ABOUT THE AUTHOR

...view details