ಕರ್ನಾಟಕ

karnataka

ETV Bharat / sitara

'83' ರ ಫಸ್ಟ್​ ಲುಕ್​​ ಔಟ್​... ಇನ್ನಾದರೂ ತಣಿಯಲಿದೆಯೇ ಡಿಪ್ಸ್​ ಅಭಿಮಾನಿಗಳ ಮನ!!

ಕಬೀರ್​ ಖಾನ್​​ ಅವರ '83' ಸಿನಿಮಾದ ತಮ್ಮ ಫಸ್ಟ್​ ಲುಕ್​​ಅನ್ನು ದೀಪಿಕಾ ಪಡುಕೋಣೆ ಬಿಡುಗಡೆ ಮಾಡಿದ್ದು, ಪತಿ ರಣವೀರ್​ ಸಿಂಗ್​ ಅವರೊಟ್ಟಿಗಿರುವ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೆ ಡಿಪ್ಸ್​ ಈ ಚಿತ್ರದಲ್ಲಿ ಕಪಿಲ್​ ಪತ್ನಿ ರೋಮಿ ದೇವ್​ ಅವರ ಪಾತ್ರಕ್ಕೆ ಜೀವ ತುಂಬಲಿದ್ದಾರೆ.

By

Published : Feb 19, 2020, 12:17 PM IST

deepika-padukone
'83' ರ ಫಸ್ಟ್​ ಲುಕ್​​ ಹಂಚಿಕೊಂಡ ದೀಪಿಕಾ

ಕಬೀರ್​ ಖಾನ್​​ ಅವರ '83' ಸಿನಿಮಾದ ತಮ್ಮ ಫಸ್ಟ್​ ಲುಕ್​​ಅನ್ನು ದೀಪಿಕಾ ಪಡುಕೋಣೆ ಬಿಡುಗಡೆ ಮಾಡಿದ್ದು, ಪತಿ ರಣವೀರ್​ ಸಿಂಗ್​ ಅವರೊಟ್ಟಿಗಿರುವ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೆ ಡಿಪ್ಸ್​ ಈ ಚಿತ್ರದಲ್ಲಿ ಕಪಿಲ್​ ಪತ್ನಿ ರೋಮಿ ದೇವ್​ ಅವರ ಪಾತ್ರಕ್ಕೆ ಜೀವ ತುಂಬಲಿದ್ದಾರೆ.

ದೀಪಿಕಾ ಅವರ ಪಾತ್ರ ಹೇಗಿರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಖುದ್ದು ಡಿಪ್ಸ್​ ಅವರೇ ಈ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ಕ್ರೀಡಾ ಇತಿಹಾಸದ ಅತ್ಯಂತ ಅಪ್ರತಿಮ ಕ್ಷಣಗಳಲ್ಲಿ ಒಂದನ್ನು ಸೆರೆಹಿಡಿಯುವ ಚಲನಚಿತ್ರದಲ್ಲಿ ಸಣ್ಣ ಪಾತ್ರವನ್ನು ವಹಿಸುವುದು ಒಂದು ಸಂಪೂರ್ಣ ಗೌರವವಾಗಿದೆ! 83 ಚಿತ್ರವು ಪತಿಯ ಕನಸನ್ನು ತನ್ನ ಮುಂದಿಡುವ ಪ್ರತಿಯೊಬ್ಬ ಮಹಿಳೆಗೆ ಅರ್ಪಣೆ ಎಂದು ಟ್ವೀಟ್​ ಮಾಡಿದ್ದಾರೆ.

ಈ ಚಿತ್ರವು 1983 ರಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತದ ಮೊದಲ ವಿಜಯದ ಕಥೆಯನ್ನು ಹೇಳುತ್ತದೆ. ಆಗ ದುರ್ಬಲ ಕಪಿಲ್ ಅವರ ತಂಡವು ಫೈನಲ್‌ನಲ್ಲಿ ಪ್ರಬಲ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿರುವುದು ಚಿತ್ರದ ಕಥೆಯಾಗಿದೆ. ಚಿತ್ರವು ಏಪ್ರಿಲ್ 10, 2020 ರಂದು ಬಿಡುಗಡೆಯಾಗಲಿದೆ.

ABOUT THE AUTHOR

...view details