ಕರ್ನಾಟಕ

karnataka

ETV Bharat / sitara

ರಾಬರ್ಟ್​ ಹವಾ.. ಶಂಕರ​ನಾಗ​ ಚಿತ್ರಮಂದಿರದಲ್ಲಿ 'ಡಿ ಬಾಸ್' ಕಟೌಟ್; ಅಭಿಮಾನಿಗಳ ಹಬ್ಬ

ರಾಬರ್ಟ್​ ಸಿನಿಮಾ ರಿಲೀಸ್​ಗೆ ಮುನ್ನವೇ ಸಖತ್​ ಹವಾ ಕ್ರಿಯೇಟ್ ಮಾಡಿದೆ. ಸಿನಿಮಾ ಬಿಡುಗಡೆಗೆ 4 ದಿನ ಬಾಕಿ ಇರುವಾಗಲೇ ದಾಸನ ಅಭಿಮಾನಿಗಳು​ ಶಂಕರ ನಾಗ​ ಚಿತ್ರಮಂದಿರದಲ್ಲಿ ದರ್ಶನ್​ ಕಟೌಟ್ ನಿಲ್ಲಿಸಿ ಸಂಭ್ರಮಿಸಿದ್ದಾರೆ.

By

Published : Mar 7, 2021, 8:30 PM IST

Darshan Cutout at Shankar Nag  Theater
ಶಂಕರ್​ನಾಗ್​ ಚಿತ್ರಮಂದಿರದಲ್ಲಿ ದರ್ಶನ್​ ಕಟೌಟ್

ಬೆಂಗಳೂರು: ರಾಬರ್ಟ್​​ ಸಿನಿಮಾ ಮಾರ್ಚ್​ 11ಕ್ಕೆ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿದೆ. ಇದೇ ಖುಷಿಯಲ್ಲಿ ದರ್ಶನ್ ಅಭಿಮಾನಿಗಳು ಶಂಕರನಾಗ​ ಚಿತ್ರಮಂದಿರದೆದುರು ಕಟೌಟ್ ನಿಲ್ಲಿಸಿ, ಪಟಾಕಿ ಹೊಡೆದು ಸಂಭ್ರಮ ಆಚರಿಸಿದ್ದಾರೆ.

ಬೆಂಗಳೂರಿನ ಹೃದಯಭಾಗ ಎಂ.ಜಿ. ರಸ್ತೆಯ ಶಂಕರ​ನಾಗ​ ಚಿತ್ರಮಂದಿರದಲ್ಲಿ ಇದುವರೆಗೂ ಕೆಲ ಕನ್ನಡ ಚಿತ್ರಗಳು ಬಿಡುಗಡೆಯಾಗಿದ್ದರೂ, ಕನ್ನಡ ಚಿತ್ರಗಳ ಕಟೌಟ್ ನಿಲ್ಲಿಸಲಾಗುತ್ತಿರಲಿಲ್ಲ. ಆದರೆ ರಾಬರ್ಟ್​ ಆರ್ಭಟ ಜೋರಾಗಿದ್ದು, ಚಾಲೆಜಿಂಗ್​ ಸ್ಟಾರ್​ ದರ್ಶನ್ ದೊಡ್ಡ ಕಟೌಟ್ ನಿಲ್ಲಿಸಲಾಗಿದೆ. ಈಗಾಗಲೇ ರಾಬರ್ಟ್ ಹವಾ ಜೋರಾಗಿದ್ದು, ಅಭಿಮಾನಿಗಳು ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಸಾಮಾನ್ಯವಾಗಿ ದರ್ಶನ್ ಚಿತ್ರವು ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿತ್ತು. ಆದರೆ ನರ್ತಕಿಯಲ್ಲಿ ಧ್ರುವ ಸರ್ಜಾರ ಪೊಗರು ಚಿತ್ರ ಪ್ರದರ್ಶನವಾಗುತ್ತಿರುವುದರಿಂದ ಸಂತೋಷ್ ಚಿತ್ರಮಂದಿರದಲ್ಲಿ ರಾಬರ್ಟ್​ ರಿಲೀಸ್​ ಆಗುತ್ತಿದ್ದಾನೆ.

ಈಗಾಗಲೇ ಚಿತ್ರಮಂದಿರಗಳ ಪಟ್ಟಿ ಬಿಡುಗಡೆಯಾಗಿದ್ದು, ಸೋಮವಾರ ಬೆಳಗ್ಗೆ 10 ಗಂಟೆ ನಾಲ್ಕು ನಿಮಿಷದಿಂದ ಎಲ್ಲ ಚಿತ್ರಮಂದಿರಗಳಲ್ಲೂ ನೇರವಾಗಿ ಅಡ್ವಾನ್ಸ್ ಬುಕ್ಕಿಂಗ್ ಆರಂಭವಾಗಲಿದೆ. ರಾಬರ್ಟ್ ಚಿತ್ರವು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಪೈಕಿ ಕರ್ನಾಟಕದಲ್ಲೇ ಮಲ್ಟಿಪ್ಲೆಕ್ಸ್ ಸೇರಿದಂತೆ 500 ಹಾಗೂ ಆಂಧ್ರ, ತೆಲಂಗಾಣಗದಲ್ಲಿ 500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ABOUT THE AUTHOR

...view details