ಕರ್ನಾಟಕ

karnataka

ETV Bharat / sitara

Video : ಅಭಿಮಾನಿಯ ಬೆನ್ನ ಮೇಲೆ ಅರಳಿದ ಡಿ ಬಾಸ್​​ ದರ್ಶನ್​​​!

ಇಲ್ಲೊಬ್ಬ ದರ್ಶನ್​ ಅಭಿಮಾನಿ ತನ್ನ ಬೆನ್ನ ತುಂಬೆಲ್ಲ ದರ್ಶನ್​ ಫೋಟೋವನ್ನು ಟ್ಯಾಟೂ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾರೆ. ಈ ರೀತಿ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿಯನ್ನು ಲೋಕಿ ಎಂದು ಹೇಳಲಾಗಿದೆ. ಹುಟ್ಟು ಹಬ್ಬದ ಪ್ರಯುಕ್ತ ಈ ರೀತಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ ಎನ್ನಲಾಗಿದೆ.

By

Published : Feb 12, 2020, 1:43 PM IST

darsgna tattoo in fans back
Video : ಅಭಿಮಾನಿಯ ಬೆನ್ನ ಮೇಲೆ ಅರಳಿದ ಡಿ ಬಾಸ್​​ ದರ್ಶನ್​​​!

ಡಿ ಬಾಸ್​​ ದರ್ಶನ್​ ಹುಟ್ಟು ಹಬ್ಬಕ್ಕೆ ಕೇವಲ ಇನ್ನು ನಾಲ್ಕು ದಿನಗಳು(16 February ) ಮಾತ್ರ ಬಾಕಿ ಇದ್ದು, ಅಭಿಮಾನಿಗಳು ತಮ್ಮ ನೆಚ್ಚಿನ 'ಒಡೆಯ'ನ ಮೇಲೆ ಅಭಿಮಾನವನ್ನು ಮೆರೆಯುತ್ತಿದ್ದಾರೆ.

ಕೆಲವರು ದರ್ಶನ್​​ ಹುಟ್ಟಿದ ದಿನದಂದು ರಕ್ತದಾನ ಶಿಬಿರವನ್ನು ಆಯೋಜಿಸಿದ್ರೆ ಇನ್ನು ಕೆಲವರು ಆ ದಿನ ಬಡವರಿಗೆ ದವಸ ಧಾನ್ಯಗಳನ್ನು ಹಂಚಲು ಮುಂದಾಗಿದ್ದಾರೆ.

ಆದ್ರೆ ಇಲ್ಲೊಬ್ಬ ದರ್ಶನ್​ ಅಭಿಮಾನಿ ತನ್ನ ಬೆನ್ನ ತುಂಬೆಲ್ಲ ದರ್ಶನ್​ ಫೋಟೋವನ್ನು ಟ್ಯಾಟೂ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾರೆ. ಈ ರೀತಿ ಹಾಕಿಸಿಕೊಂಡ ಅಭಿಮಾನಿಯನ್ನು ಲೋಕಿ ಎಂದು ಹೇಳಲಾಗಿದೆ. ಹುಟ್ಟು ಹಬ್ಬದ ಪ್ರಯುಕ್ತ ಈ ರೀತಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ ಎನ್ನಲಾಗಿದೆ.

ಈ ಹಿಂದೆ ದರ್ಶನ್​ ನನ್ನ ಹುಟ್ಟು ಹಬ್ಬಕ್ಕೆ ವ್ಯರ್ಥ ಹಣವನ್ನು ಖರ್ಚು ಮಾಡದೆ ಅಸಹಾಯಕರಿಗೆ ಸಹಾಯ ಮಾಡಿ ಎಂದು ಮನೆ ಮುಂದೆ ಬೋರ್ಡ್​​ ಹಾಕಿದ್ದರು.

ABOUT THE AUTHOR

...view details