ಲಾಸ್ ಏಂಜಲೀಸ್: ಕೋವಿಡ್ 19ನಿಂದ ತೊಂದರೆಗೊಳಗಾದವರಿಗೆ ನೆರವಾಗಲು ಪಾಪ್ ಸಂಗೀತಗಾರರಾದ ಬಿಲ್ಲಿ ಎಲಿಶ್, ಅರಿಯಾನ್ ಗ್ರಾಂಡ್, ಜಸ್ಟಿನ್ ಬೈಬರ್, ದಿ ವೀಕೆಂಡ್ ಹಾಗೂ ದಿ ರೋಲಿಂಗ್ ಸ್ಟೋನ್ಸ್ ಬ್ಯಾಂಡ್ ತಂಡದವರು ತಮ್ಮದೇ ಸಿಗ್ನೇಚರ್ವುಳ್ಳ ಬಟ್ಟೆಯಿಂದ ತಯಾರಿಸಿದ ಮುಖದ ಮಾಸ್ಕ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.
ವಿಶ್ವದಾದ್ಯಂತ ತಾಂಡವವಾಡುತ್ತಿರುವ ಕೊರೊನಾ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಪಾಪ್ ಸಿಂಗರ್ಗಳು ಈ ನಿರ್ಧಾರ ಮಾಡಿದ್ದು, ಪ್ರತಿಯೊಂದು ಮಾಸ್ಕ್ನ ಬೆಲೆ 15 ಅಮೆರಿಕನ್ ಡಾಲರ್ ಆಗಿದೆ.
ಅರಿಯಾನ್ ಗ್ರ್ಯಾಂಡ್ ಅವರ ಮುಖವಾಡವ ಕಣ್ಣೀರಿನ ಡ್ರಾಫ್ ಸೂಚಿಸುವ ಚಿತ್ರ, ಎಲಿಶ್ ಬಿಡುಗಡೆ ಮಾಡಿರುವ ಮಾಸ್ಕ್ನಲ್ಲಿ ಹಸಿರು ಬಣ್ಣದಲ್ಲಿ ಅವರ ಬ್ಲೋಶ್ ಲೋಗೊ ಹಾಗೂ ರೋಲಿಂಗ್ ಸ್ಟೋನ್ಸ್ ಮಾಸ್ಕ್ನಲ್ಲಿ ಅದರ ಸಾಂಪ್ರದಾಯಿಕ ನಾಲಿಗೆ ಮತ್ತು ತುಟಿಗಳ ಲೋಗೋವನ್ನು ಒಳಗೊಂಡಿದೆ.
ಇನ್ನು, ಜಸ್ಟಿನ್ ಬೈಬರ್ ಮಾಸ್ಕ್ ಅವರ ಗ್ರಾಫಿಟಿ ಸ್ಟೈಲ್ನ ಅಕ್ಷರಗಳನ್ನು ಹೊಂದಿದೆ. ವೀಕೆಂಡ್ರ್ ಮಾಸ್ಕ್ನ ಮುಂಭಾಗದಲ್ಲಿ XO ಬರೆದಿದ್ದು, ಇದನ್ನು ಹೃದಯಾಕಾರದಲ್ಲಿ ಅಲಂಕರಿಸಲಾಗಿದೆ.
ಏತನ್ಮಧ್ಯೆ ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ಜವಾಬ್ದಾರಿ ತೆಗೆದುಕೊಳ್ಳಿ ಎಂದು ಎಲಿಶ್ ತಮ್ಮ ಇನ್ಸ್ಟಾಗ್ರಾಮ್ ಮೂಲಕ kರೆ ನೀಡಿದ್ದಾರೆ.