ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣದಲ್ಲಿ ಬಂಧಿಯಾಗಿರುವ ನಟಿಮಣಿಯರು ಬಹಳ ಬೇಸರದಿಂದ ಪರಪ್ಪನ ಅಗ್ರಹಾರದಲ್ಲಿ ಸಮಯ ಕಳಿಯುತ್ತಿದ್ದಾರೆ. ಹೈಕೋರ್ಟ್ನಿಂದ ತಮಗೆ ರಿಲೀಫ್ ಸಿಗುತ್ತೆ ಎಂದುಕೊಂಡಿದ್ದವರ ನಿರೀಕ್ಷೆ ಹುಸಿಯಾಗಿದೆ. ಇಬ್ಬರು ನಟಿಯರ ಮೇಲಿನ ಆರೋಪಕ್ಕೆ ಸಾಕಷ್ಟು ಪುರಾವೆಗಳು ಸದ್ಯ ತನಿಖಾಧಿಕಾರಿಗಳ ಕೈಯಲ್ಲಿವೆ ಎಂದು ಹೇಳಲಾಗ್ತಿದೆ.
ಸಂಜನಾಗೆ ಡಿಪ್ರೆಶನ್: ಸದ್ಯ ನಟಿ ಸಂಜನಾ ಗಲ್ರಾನಿ ಪರಪ್ಪನ ಅಗ್ರಹಾರದಲ್ಲಿದ್ದು, ಜಾಮೀನು ಸಿಕ್ಕಿಲ್ಲವೆಂಬ ಬೇಸರ ಅವರಿಗೆ ಕಾಡುತ್ತಿಲ್ಲ. ಬದಲಾಗಿ ಅವರ ತಂದೆ ತಾಯಿಗೆ ಕೊರೊನಾ ಸೋಂಕು ತಗುಲಿದ ಕಾರಣ ಸಂಜನಾಗೆ ಫುಲ್ ಟೆನ್ಶನ್ ಆಗಿದ್ದಾರೆ. ತನ್ನ ಅಪ್ಪ-ಅಮ್ಮನ ಆರೋಗ್ಯದ ಬಗ್ಗೆ ಜೈಲಾಧಿಕಾರಿಗಳ ಬಳಿ ಕೇಳುತ್ತಿದ್ದಾರೆ. ತಂದೆ-ತಾಯಿ ಪರಿಸ್ಥಿತಿ ಹೇಗಿದೆ? ಅವರ ಜೊತೆ ಮಾತಾಡಬೇಕು ಎಂದು ಸಂಜನಾ ಕೇಳಿಕೊಂಡಿದ್ದಾರೆ ಎನ್ನಲಾಗ್ತಿದೆ.