ಕರ್ನಾಟಕ

karnataka

By

Published : Nov 13, 2020, 7:22 PM IST

ETV Bharat / sitara

ಯುವ ರಣಧೀರ ಕಂಠೀರವನನ್ನು ಮೆಚ್ಚಿದ ಮೆಗಾಸ್ಟಾರ್​​​

ತೆಲುಗು ಚಿತ್ರರಂಗದ ಮೆಗಾ ಫ್ಯಾಮಿಲಿಯ ಮೆಗಾ ಸ್ಟಾರ್ ಚಿರಂಜೀವಿ, ಯುವ ರಾಜ್​​ಕುಮಾರ್ ಚಿತ್ರದ ಟೀಸರ್ ನೋಡಿ ಫಿದಾ ಆಗಿದ್ದಾರೆ. ಯುವ ರಾಜ್​ಕುಮಾರ್ ತಾತನ ಹಾಗೆ ಕಾಣುತ್ತಾನೆ. ಯುವ ರಣಧೀರ ಕಂಠೀರವ ಚಿತ್ರದ ಮೇಕಿಂಗ್ ಅದ್ಧೂರಿಯಾಗಿದೆ. ಯುವ ಹೇಳುವ ಕಿಕ್ ಕೊಡುವ ಡೈಲಾಗ್ ಬೊಂಬಾಟ್ ಆಗಿದೆ. ಯುವನಿಗೆ ಚಿತ್ರರಂಗದಲ್ಲಿ ಒಳ್ಳೆ ಭವಿಷ್ಯ ಇದೆ ಅಂತಾ ಮೆಗಾ ಸ್ಟಾರ್ ಚಿರಂಜೀವಿ ಭವಿಷ್ಯ ನುಡಿದಿದ್ದಾರೆ.

chiranjeeevi speak about yuva ranadheera kanteerava
ಯುವ ರಣಧೀರ ಕಂಠೀರವನನ್ನು ಮೆಚ್ಚುದ ಮೆಗಾಸ್ಟಾರ್​​​

ಯುವ ರಣಧೀರ ಕಂಠೀರವ ಕನ್ನಡ ಚಿತ್ರರಂಗ ಅಲ್ಲದೆ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್ ಸೌಂಡ್ ಮಾಡ್ತಿರೋ ಸಿನಿಮಾ. ಡಾ. ರಾಜ್​ಕುಮಾರ್ ಮೊಮ್ಮಗ ಹಾಗೂ ರಾಘವೇಂದ್ರ ರಾಜ್​ಕುಮಾರ್ ಕಿರಿಯ ಪುತ್ರ ಯುವ ರಾಜ್​ಕುಮಾರ್ ಈ ಸಿನಿಮಾ ಮ‌ೂಲಕ ಕನ್ನಡ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡ್ತಾ ಇದ್ದಾರೆ.

ಕೆಲ‌ ದಿನಗಳ ಹಿಂದೆ ಯುವ ರಾಜ್​ಕುಮಾರ್ ನಟನೆಯ ಯುವ ರಣಧೀರ ಕಂಠೀರವ ಸಿನಿಮಾ ಫಸ್ಟ್ ಲುಕ್​ಅ​ನ್ನ ಅಭಿಮಾನಿಗಳ ಸಮ್ಮುಖದಲ್ಲಿ ಅನಾವರಣ ಮಾಡಲಾಯಿತು. ಈ ಅದ್ಧೂರಿ ಟೀಸರ್ ಯೂಟ್ಯೂಬ್​​ನಲ್ಲಿ ಲಕ್ಷಗಟ್ಟಲೆ ವೀಕ್ಷಣೆ ಆಗಿದೆ. ಈ ಟೀಸರ್​​ ನೋಡಿ ಈಗಾಗಲೇ ತೆಲುಗು ಚಿತ್ರರಂಗದ ಸ್ಟಾರ್ ನಿರ್ದೇಶಕರಾದ ವಿ.ವಿ.ವಿನಾಯಕ್, ಮೆಹರ್ ರಮೇಶ್ ಹಾಗೂ ಸುಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯುವ ರಣಧೀರ ಕಂಠೀರವನನ್ನು ಮೆಚ್ಚಿದ ಮೆಗಾಸ್ಟಾರ್​​​

ಇದೀಗ ತೆಲುಗು ಚಿತ್ರರಂಗದ ಮೆಗಾ ಫ್ಯಾಮಿಲಿಯ ಮೆಗಾ ಸ್ಟಾರ್ ಚಿರಂಜೀವಿ, ಯುವ ರಾಜ್​​ಕುಮಾರ್ ಚಿತ್ರದ ಟೀಸರ್ ನೋಡಿ ಫಿದಾ ಆಗಿದ್ದಾರೆ. ಯುವ ರಾಜ್​ಕುಮಾರ್ ತಾತನ ಹಾಗೆ ಕಾಣುತ್ತಾನೆ. ಯುವ ರಣಧೀರ ಕಂಠೀರವ ಚಿತ್ರದ ಮೇಕಿಂಗ್ ಅದ್ಧೂರಿಯಾಗಿದೆ. ಯುವ ಹೇಳುವ ಕಿಕ್ ಕೊಡುವ ಡೈಲಾಗ್ ಬೊಂಬಾಟ್ ಆಗಿದೆ. ಯುವನಿಗೆ ಚಿತ್ರರಂಗದಲ್ಲಿ ಒಳ್ಳೆ ಭವಿಷ್ಯ ಇದೆ ಅಂತಾ ಮೆಗಾ ಸ್ಟಾರ್ ಚಿರಂಜೀವಿ ಭವಿಷ್ಯ ನುಡಿದಿದ್ದಾರೆ.

ಇನ್ನು ಈ ಚಿತ್ರಕ್ಕಾಗಿ ಯುವ ರಾಜ್​​ಕುಮಾರ್ ಮಾಡಿರುವ ತಯಾರಿ ನಿಜಕ್ಕೂ ಮೆಚ್ಚುವಂತಹದ್ದು. ರಾಜ್‌ಕುಮಾರ್ ಮೊಮ್ಮಗ ಎಂಬ ಕಾರಣದಿಂದ ಯುವಗೂ ದೊಡ್ಡ ಜವಾಬ್ದಾರಿ ಇದೆ. ಈ ಸಿನಿಮಾ ಚಿತ್ರರಂಗದಲ್ಲಿ ದೊಡ್ಡ ಮೈಲಿಗಲ್ಲು ಸೃಷ್ಟಿ ಮಾಡುತ್ತೆ ಎಂಬ ನಂಬಿಕೆ ನನಗೆ ಇದೆ ಅಂತಾ ಮೆಗಾ ಸ್ಟಾರ್ ಚಿರಂಜೀವಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ನಾನು ಯುವ ರಣಧೀರ ಕಂಠೀರವ ಸಿನಿಮಾ ನೋಡಲು ಕಾಯುತ್ತಿದ್ದೇನೆ ಅಂತಾ ಚಿರಂಜೀವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

For All Latest Updates

ABOUT THE AUTHOR

...view details