ಕರ್ನಾಟಕ

karnataka

ETV Bharat / sitara

'ಚಂಬಲ್'​ ಡಿ.ಕೆ ರವಿ ಬಯೋಪಿಕ್​ ಅಲ್ಲವೇ ಅಲ್ಲ...! ಮತ್ತಿನ್ನೇನು? - DK Ravi]

ದಾವಣಗೆರೆ: 'ಚಂಬಲ್' ಚಿತ್ರ ದಕ್ಷ ಅಧಿಕಾರಿ ದಿವಂಗತ ಡಿ.ಕೆ ರವಿ ಬಯೋಪಿಕ್​ ಎಂಬ ಸುದ್ದಿಯನ್ನು ನಟ ನೀನಾಸಂ ಸತೀಶ್​ ಅಲ್ಲಗಳೆದಿದ್ದಾರೆ.

ಚಂಬಲ್ ಚಿತ್ರದ ಬಗ್ಗೆ ಸತೀಶ್ ಮಾತು

By

Published : Feb 11, 2019, 6:35 PM IST

ನಗರದಲ್ಲಿಂದು ಸಿನಿಮಾ ಪ್ರಮೋಷನ್​​ಗೆ ಹಾಜರಾಗಿದ್ದ ಸತೀಶ್​​, ಚಿತ್ರದ ಕುರಿತು ಕೇಳಿ ಬಂದಿದ್ದ ಅಂತೆ -ಕಂತೆಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ರು. ಚಂಬಲ್​ ಕಾಲ್ಪನಿಕ ಚಿತ್ರವಾಗಿದ್ದು, ಐಎಎಸ್ ಅಧಿಕಾರಿ ಡಿ.‌ಕೆ. ರವಿ ನಿಗೂಢ ಸಾವಿನ ಬಗ್ಗೆ, ಬೇರೆಯವರಿಗೆ ಸಂಬಂಧಿಸಿದ ವಿಷಯಗಳಾಗಲೀ ಈ ಸಿನಿಮಾದಲ್ಲಿಲ್ಲ. ಐಎಎಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದೇನೆ. ಹಾಗೆಂದ ಮಾತ್ರಕ್ಕೆ ಇದು ಡಿ.‌ಕೆ. ರವಿ ಅವರಿಗೆ ಸಂಬಂಧಿಸಿದ ಸಿನಿಮಾವಲ್ಲ. ಇದೊಂದು ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಸಿನಿಮಾ ಎಂದು ಸತೀಶ್ ಸ್ಪಷ್ಟಪಡಿಸಿದ್ದಾರೆ.

ಚಂಬಲ್ ಚಿತ್ರದ ಬಗ್ಗೆ ಸತೀಶ್ ಮಾತು

ಹತ್ತು ಕೋಟಿ ರೂಪಾಯಿ ಆಫರ್​ ಮಾಡಿ ಚಂಬಲ್ ಸಿನಿಮಾ ಖರೀದಿಗೆ ನೆಟ್ವಫಿಕ್ಸ್ ಮುಂದಾಗಿತ್ತು.‌ ಆದ್ರೆ ನಾವು ಕೊಟ್ಟಿಲ್ಲ.‌ ಕಾರಣ ಈ ಸಿನಿಮಾ ಜನರಿಗೆ ತಲುಪುವಂತಾಗಬೇಕು.‌ ಈ ನಿಟ್ಟಿನಲ್ಲಿ ಸುಮಾರು 200 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಚಂಬಲ್​​ನಲ್ಲಿ ಪೂಲನ್​ ದೇವಿ ದರೋಡೆ ಮಾಡುವಂತೆ ಇಲ್ಲಿಯೂ ದರೋಡೆ ಕೋರರಿದ್ದಾರೆ.‌ ಚಂಬಲ್​​ಗೆ ಹೋಗಿ ಸಿನಿಮಾ ಶೂಟಿಂಗ್ ಮಾಡಿಲ್ಲ.‌ ಚಂಬಲ್ ಅಂತಾ ಆಕರ್ಷಕ ಶೀರ್ಷಿಕೆ ಇಡಲಾಗಿದೆ‌. ಈ ಸಿನಿಮಾದಲ್ಲಿ ನನ್ನದು ಸವಾಲಿನ ಪಾತ್ರ. ನಿರ್ದೇಶಕ ಜೇಕಬ್ ವರ್ಗೀಸ್ ನನ್ನನ್ನು ಬೇರೆಯದೇ ರೀತಿಯಲ್ಲಿ ತೋರಿಸಿದ್ದಾರೆ‌ ಎಂದು ಸತೀಶ್​ ಹೇಳಿದ್ರು.

ಇನ್ನು ಚಂಬಲ್​ ಚಿತ್ರದಲ್ಲಿ ನೀನಾಸಂ ಸತೀಶ್​​ಗೆ ಸೋನುಗೌಡ ನಾಯಕಿ. ಸವಾರಿ, ಸವಾರಿ-೨, ಪೃಥ್ವಿಯಂಥ ವಿಭಿನ್ನ ಚಿತ್ರಗಳನ್ನು ನಿರ್ದೇಶಿಸಿದ್ದ ಜೇಕಬ್ ವರ್ಗೀಸ್ ನಿರ್ದೇಶನದ ಈ ಚಿತ್ರದಲ್ಲಿ ರೋಜರ್ ನಾರಾಯಣ್, ಕಿಶೋರ್, ಗಿರಿಜಾ ಲೋಕೇಶ್, ಅಚ್ಯುತ್ ಕುಮಾರ್ ಸೇರಿದಂತೆ ಇತರರ ತಾರಾಗಣವಿದೆ. ಗೋದ್ರಾ ನಿರ್ದೇಶಕ ನಂದೀಶ್ ಚಿತ್ರಕಥೆ ಬರೆದಿದ್ದು, ಶರತ್ ಚಕ್ರವರ್ತಿ ಸಂಭಾಷಣೆ ಬರೆದಿದ್ದಾರೆ. ಈ ಚಿತ್ರಕ್ಕೆ ಲೂಸಿಯಾ ಖ್ಯಾತಿಯ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ಮಾಡಿದ್ದು, ನಾಲ್ಕು ಹಾಡುಗಳಿವೆ. ಇದೇ 22 ರಂದು ಚಿತ್ರ ಬಿಡುಗಡೆಯಾಗುತ್ತಿದೆ.

ABOUT THE AUTHOR

...view details