ಕರ್ನಾಟಕ

karnataka

ETV Bharat / sitara

'ಸಿಂಗ'ನ ಶಾನೆ ಟಾಪಾಗೌಳೆ ಹಾಡಿಗೆ ದರ್ಶನ್ ಬೋಲ್ಡ್​ ಆಗಿದ್ರಂತೆ..!

'ಸಿಂಗ' ಚಿತ್ರದ 'ವಾಟ್ ಎ ಬ್ಯೂಟಿಫುಲ್' ವಿಡಿಯೋ ಸಾಂಗನ್ನು ಚಾಲೆಂಜಿಂಗ್ ಸ್ಟಾರ್​ ದರ್ಶನ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಚಿತ್ರದ 'ಶಾನೆ ಟಾಪಾಗೌಳೆ' ಹಾಡು ನನಗೆ ಬಹಳ ಇಷ್ಟ ಎಂದು ಚಿತ್ರದ ಹಾಡುಗಳ ಸಕ್ಸಸ್​ ಮೀಟ್​ನಲ್ಲಿ ದರ್ಶನ್​​​​​ ಹೇಳಿದ್ದಾರೆ.

By

Published : Jul 7, 2019, 1:59 PM IST

'ಸಿಂಗ'

ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಹಾಗೂ ಅದಿತಿ ಪ್ರಭುದೇವ ನಟಿಸಿರುವ 'ಸಿಂಗ' ಸಿನಿಮಾದ 'ಶಾನೆ ಟಾಪಾಗೌಳೆ' ಹಾಡನ್ನು ಯೂಟ್ಯೂಬ್​​​ನಲ್ಲಿ ಬರೋಬ್ಬರಿ 7 ಮಿಲಿಯನ್ ಜನರು ನೋಡುವ ಮೂಲಕ ಹೊಸ ದಾಖಲೆ ಬರೆದಿದೆ.

'ಸಿಂಗ' ಹಾಡುಗಳ ಸಕ್ಸಸ್ ಮೀಟ್

ವಿಶೇಷ ಎಂದರೆ ಈ ಹಾಡಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಕ್ಲೀನ್ ಬೌಲ್ಡ್ ಆಗಿದ್ರಂತೆ. ಇದೀಗ ಚಿತ್ರತಂಡ ಮತ್ತೊಂದು ಸುಂದರವಾದ ಹಾಡನ್ನು ಬಿಡುಗಡೆ ಮಾಡಿದೆ. ಚಿತ್ರತಂಡ ನಿನ್ನೆ ಏರ್ಪಡಿಸಿದ್ದ ಸಿನಿಮಾ ಹಾಡುಗಳ ಸಕ್ಸಸ್​​​​​​ ಪ್ರೆಸ್​​ಮೀಟ್​​​​​ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ವಾಟ್ ಎ ಬ್ಯೂಟಿಫುಲ್ ಹುಡುಗಿ' ವಿಡಿಯೋ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಈ ಹಿಂದೆ ಚಿತ್ರದ ಟೀಸರನ್ನು ಕೂಡಾ ದರ್ಶನ್ ಅವರೇ ಬಿಡುಗಡೆ ಮಾಡಿದ್ದರು. ವಿಶೇಷ ಎಂದರೆ ನವೀನ್ ಸಜ್ಜು ಜೊತೆಗೆ 'ವಾಟ್ ಎ ಬ್ಯೂಟಿಫುಲ್' ಹಾಡನ್ನು ಚಿರಂಜೀವಿ ಪತ್ನಿ ಮೇಘನಾ ರಾಜ್ ಹಾಡಿದ್ದಾರೆ.

'ವಾಟ್ ಎ ಬ್ಯೂಟಿಫುಲ್' ಹಾಡು ಬಿಡುಗಡೆಗೊಳಿಸಿದ ದರ್ಶನ್
ಅದಿತಿ ಪ್ರಭುದೇವ, ಚಿರಂಜೀವಿ ಸರ್ಜಾ

'ಸಿಂಗ' ಮಾಸ್ ಅ್ಯಂಡ್​​ ಕಮರ್ಷಿಯಲ್ ಸಿನಿಮಾ ಆಗಿದ್ದು ವಿಜಯ್ ಕಿರಣ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಉದಯ್​ಸಿಂಗ್ ಮೆಹ್ತಾ ಸಿನಿಮಾವನ್ನು ನಿರ್ಮಿಸಿದ್ದಾರೆ. ಚಿತ್ರದ ಹಾಡುಗಳಿಗೆ ಧರ್ಮವಿಶ್ ಸಂಗೀತ ನೀಡಿದ್ದಾರೆ. ಡಾ.ವಿ. ನಾಗೇಂದ್ರ ಪ್ರಸಾದ್, ಕವಿರಾಜ್ ಮತ್ತು ಚೇತನ್ ಸಾಹಿತ್ಯ ರಚಿಸಿದ್ದಾರೆ. ಚಿರಂಜೀವಿ ಸರ್ಜಾ, ಅದಿತಿ ಪ್ರಭುದೇವ, ತಾರಾ,‌ ಶಿವರಾಜ್ ಕೆ.ಆರ್​​​. ಪೇಟೆ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದು ಸಿನಿಮಾ ಜುಲೈ 19 ರಂದು ಬಿಡುಗಡೆಯಾಗುತ್ತಿದೆ.

For All Latest Updates

TAGGED:

ABOUT THE AUTHOR

...view details