ಬೆಂಗಳೂರು: ನಟಿ ಸಂಜನಾ ಗಲ್ರಾನಿ ಆಪ್ತ ರಾಹುಲ್ನನ್ನ ಖೆಡ್ಡಾಕ್ಕೆ ಕೆಡವಿದ ಸಿಸಿಬಿ ಸದ್ಯ ಸಂಜಾನಾ ಗಲ್ರಾನಿಗೆ ಕೂಡ ನೋಟಿಸ್ ನೀಡಲು ತಯಾರಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ನಟಿ ಸಂಜನಾ ಗಲ್ರಾನಿಗೆ ಸಿಸಿಬಿಯಿಂದ ನೋಟಿಸ್ ನೀಡುವ ಸಾಧ್ಯತೆ - ಸಂಜನಾ ಗಲ್ರಾನಿಗೆ ನೋಟಿಸ್ ನೀಡಲು ಸಿಸಿಬಿ ನಿರ್ಧಾರ
ಡ್ರಗ್ಸ್ ಜಾಲದಲ್ಲಿ ನಟಿಮಣಿಯರು ಸಿಲುಕಿರುವ ಕಾರಣ ಸದ್ಯ ಸಿಸಿಬಿ ಪೊಲೀಸರು ಡ್ರಗ್ಸ್ ನಂಟಿನಲ್ಲಿ ಭಾಗಿಯಾದವರ ಬೆನ್ನತ್ತಿದ್ದಾರೆ.
ನಿನ್ನೆ ರಾಹುಲ್ನನ್ನ ಸಿಸಿಬಿ ಅಧಿಕಾರಿಗಳು ಕೊರ್ಟ್ಗೆ ಹಾಜರುಪಡಿಸಿ 5 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ. ಈತ ಹಲವಾರು ಪಾರ್ಟಿ ಆಯೋಜಕನಾಗಿದ್ದ. ಹಾಗೆಯೇ ಸಂಜನಾ ಗಲ್ರಾನಿ ಜೊತೆ ಪಾರ್ಟಿ, ವಿದೇಶ ಪ್ರಯಾಣ ಹೀಗೆ ಹಲವು ಕಡೆ ಸುತ್ತಾಡಿದ್ದಾನೆ. ಅಷ್ಟು ಮಾತ್ರವಲ್ಲದೆ ಸಂಜನಾ ಮನೆಯಲ್ಲಿ ಹಲವಾರು ಬರ್ತಡೇ ಪಾರ್ಟಿ, ಸಂಜಾನ ಜೊತೆ ಟಿಕ್ ಟಾಕ್ನಲ್ಲಿ ಕುಣಿದಾಟ ಹೀಗೆ ಹಲವಾರು ರೀತಿಯಲ್ಲಿ ನಂಟು ಹೊಂದಿದ್ದ ಎನ್ನಲಾಗಿದೆ.
ನಿನ್ನೆ ಸಿಸಿಬಿ, ರಾಹುಲ್ನನ್ನ ಸಂಜನಾ ಮನೆಗೆ ಕರೆದೊಯ್ದು ಸ್ಥಳ ಮಹಜರು ನಡೆಸಿದೆ. ನಟಿ ಸಂಜನಾ ಜೊತೆ ನಿಕಟ ಸಂಬಂಧ ಇರುವ ಕಾರಣ ಸಿಸಿಬಿ ಪೊಲೀಸರು ಸಂಜನಾಗೆ ನೋಟಿಸ್ ನೀಡಲು ತಯಾರಿ ನಡೆಸಿದ್ದು, ಇಂದು ಬಹುತೇಕವಾಗಿ ನೋಟಿಸ್ ಕೊಟ್ಟು ವಿಚಾರಣೆಗೆ ಬರುವಂತೆ ತಿಳಿಸುವ ಸಾಧ್ಯತೆ ಇದೆ.