ಕರ್ನಾಟಕ

karnataka

ಈ ಫೋಟೋದಲ್ಲಿರುವ ಖ್ಯಾತ ನಟ ಯಾರು ಗುರುತಿಸಿ...!

ಯೇಸುಕ್ರಿಸ್ತನ ರೂಪದಲ್ಲಿರುವ ಫೋಟೋವೊಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್​​ಲೋಡ್ ಮಾಡಿರುವ ನಟ ಜಗಪತಿ ಬಾಬು ಅಭಿಮಾನಿಗಳ ತಲೆಯಲ್ಲಿ ಹುಳು ಬಿಟ್ಟಿದ್ದಾರೆ. ಈ ಫೋಟೋವನ್ನು ಜಗಪತಿ ಬಾಬು ಏಕೆ ಅಪ್​​ಲೋಡ್ ಮಾಡಿದ್ದಾರೆ ಎಂದು ತಿಳಿಯದೆ ಅಭಿಮಾನಿಗಳು ಉತ್ತರ ಹುಡುಕುವಲ್ಲಿ ಬ್ಯುಸಿಯಾಗಿದ್ದಾರೆ.

By

Published : Jan 25, 2021, 7:55 PM IST

Published : Jan 25, 2021, 7:55 PM IST

Jagapati Babu
ಜಗಪತಿ ಬಾಬು

ಒಂದು ಕಾಲದಲ್ಲಿ ಸಿನಿಮಾಗಳಲ್ಲಿ ನಾಯಕನಾಗಿ ಮಿಂಚಿದ್ದ ನಟ ಜಗಪತಿ ಬಾಬು ಈಗ ಸ್ಟೈಲಿಷ್​ ವಿಲನ್ ಆಗಿ ಘರ್ಜಿಸುತ್ತಿದ್ದಾರೆ. ವಿಲಕ್ಷಣ ಪೋಷಕ ಪಾತ್ರಕ್ಕೆ ಕೇರ್​ ಆಫ್ ಆಗಿ ಬದಲಾಗಿರುವ ಜಗ್ಗೂಭಾಯ್, ಸಾಮಾಜಿಕ ಮಾಧ್ಯಮದಲ್ಲಿ ಕೂಡಾ ಬಹಳ ಆ್ಯಕ್ಟಿವ್ ಇದ್ದಾರೆ. ತಮ್ಮ ಸಿನಿಮಾ ಹಾಗೂ ಇತರ ವಿಚಾರಗಳ ಬಗ್ಗೆ ಜಗಪತಿ ಬಾಬು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ.

ಜಗಪತಿ ಬಾಬು

ಇದನ್ನೂ ಓದಿ:ಸಂಭಾವನೆ ಇಲ್ಲದೆ ಆ ಮಹತ್ಕಾರ್ಯ ಮಾಡಲು ಒಪ್ಪಿಕೊಂಡ ಚಾಲೆಂಜಿಂಗ್ ಸ್ಟಾರ್​​​​​

ಇತ್ತೀಚೆಗೆ ಜಗಪತಿ ಬಾಬು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಫೋಟೋ ಅಭಿಮಾನಿಗಳಿಗೆ ಆಶ್ಚರ್ಯ ಮೂಡಿಸಿದೆ. ಜಗಪತಿ ಬಾಬು ಯೇಸುಕ್ರಿಸ್ತನ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಮುಳ್ಳಿನ ಕಿರೀಟ ತೊಟ್ಟು, ರಕ್ತಸಿಕ್ತ ಕೈ-ಕಾಲುಗಳನ್ನು ಶಿಲುಬೆಗೆ ಕಟ್ಟಿರುವ ಫೋಟೋ ನೋಡಿ ಅಭಿಮಾನಿಗಳು ಕನ್ಫ್ಯೂಸ್ ಆಗುತ್ತಿದ್ದಾರೆ. ಆದರೆ ಜಗಪತಿಬಾಬು ಮಾತ್ರ ಈ ರೀತಿಯ ಫೋಟೋ ಏಕೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದೇನೆ, ಏಸುಕ್ರಿಸ್ತನ ರೂಪ ತಾಳಿರುವ ಕಾರಣ ಏನು ಎಂಬುದನ್ನು ಮಾತ್ರ ರಿವೀಲ್ ಮಾಡಿಲ್ಲ. ಆದರೆ ಅಭಿಮಾನಿಗಳಿಗೆ ಮಾತ್ರ ಇದು ತಲೆ ತಿನ್ನುತ್ತಿದೆ. ಜಗಪತಿ ಬಾಬು ಯಾವುದಾದರೂ ಸಿನಿಮಾದಲ್ಲಿ ಯೇಸುಕ್ರಿಸ್ತನ ಪಾತ್ರದಲ್ಲಿ ನಟಿಸುತ್ತಿದ್ದಾರಾ..? ಸುಮ್ಮನೆ ಈ ರೀತಿ ಮೇಕಪ್ ಮಾಡಿಕೊಂಡಿದ್ದಾರಾ..?ಅಥವಾ ಇತರ ಯಾವ ಕಾರಣ ಇರಬಹುದು ಎಂದು ಯೋಚಿಸುತ್ತಿದ್ದಾರೆ. ಆದರೆ ಇದಕ್ಕೆಲ್ಲಾ ಜಗಪತಿ ಬಾಬು ಏನು ಉತ್ತರ ನೀಡಲಿದ್ದಾರೆ ಎಂದು ತಿಳಿಯಲು ಇನ್ನೂ ಸ್ವಲ್ಪ ದಿನಗಳು ಕಾಯಬೇಕು.

ABOUT THE AUTHOR

...view details