ಕರ್ನಾಟಕ

karnataka

‘ದೇವಕಿ‘ ಸಿನಿಮಾದಲ್ಲಿ ಬಂಗಾಳಿ ಸಂಭಾಷಣೆ: ಮುಂದಿನ ತಿಂಗಳು ಚಿತ್ರ ತೆರೆಗೆ

By

Published : May 24, 2019, 9:59 AM IST

ಪ್ರಿಯಾಂಕ ಉಪೇಂದ್ರ, ಐಶ್ವರ್ಯ ಉಪೇಂದ್ರ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ದೇವಕಿ‘ ಸಿನಿಮಾ ಬಹುತೇಕ ಪಶ್ಚಿಮ ಬಂಗಾಳದಲ್ಲಿ ಚಿತ್ರೀಕರಣವಾಗಿದ್ದು, ಚಿತ್ರದ ನೈಜತೆಗೆ ನಿರ್ದೇಶಕ ಲೋಹಿತ್ ಬಂಗಾಳಿ ಭಾಷೆಯನ್ನು ಸಿನಿಮಾದಲ್ಲಿ ಅಳವಡಿಸಿಕೊಂಡಿದ್ದಾರೆ.

‘ದೇವಕಿ‘

ನೈಜ ಘಟನೆಗಳ ಆಧಾರಿತ ಪ್ರಿಯಾಂಕ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ದೇವಕಿ’ ಸಿನಿಮಾವನ್ನು ಬಹುತೇಕ ಮುಂದಿನ ತಿಂಗಳು ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ.

'ದೇವಕಿ' ಚಿತ್ರದಲ್ಲಿ ಐಶ್ವರ್ಯ ಉಪೇಂದ್ರ

ಇನ್ನು ಈ ಸಿನಿಮಾದಲ್ಲಿ ಉಪೇಂದ್ರ - ಪ್ರಿಯಾಂಕ ಪುತ್ರಿ ಐಶ್ವರ್ಯ ನಟಿಸುವ ಮೂಲಕ ಸ್ಯಾಂಡಲ್​​ವುಡ್​​​ಗೆ ಕಾಲಿಟ್ಟಿದ್ದಾರೆ. ಈ ಸಿನಿಮಾವನ್ನು ಸುಮಾರು ಒಂದು ತಿಂಗಳ ಕಾಲ ಪಶ್ಚಿಮ ಬಂಗಾಳದ ಹೌರಾ ಬ್ರಿಡ್ಜ್ ಸುತ್ತ ಮುತ್ತ ಚಿತ್ರೀಕರಿಸಲಾಗಿದೆ. ಚಿತ್ರದ ಮತ್ತಷ್ಟು ನೈಜತೆಗಾಗಿ ನಿರ್ದೇಶಕ ಲೋಹಿತ್ ಬಂಗಾಳಿ, ಇಂಗ್ಲಿಷ್​​ ಹಾಗೂ ಹಿಂದಿ ಭಾಷೆಗಳನ್ನು ಅಲ್ಲಲ್ಲಿ ಸೇರಿಸಿದ್ದಾರೆ. ಕನ್ನಡ ಸಿನಿಮಾಗಳು ಡಬ್ ಆಗಿ ಪರಭಾಷೆಗೆ ಲಗ್ಗೆ ಇಡುತ್ತಿರುವ ಈ ಸಮಯದಲ್ಲಿ ಪರಭಾಷೆಗಳ ಸಂಭಾಷಣೆಗಳು ಕನ್ನಡ ಸಿನಿಮಾದಲ್ಲಿ ಕಂಡು ಬರುವುದು ಕೂಡಾ ವಿರಳ. ಚಿತ್ರಕಥೆ ಆಯಾ ಪ್ರಾಂತ್ಯಕ್ಕೆ ಸಂಬಂಧಿಸಿದಂತೆ ಇದ್ದರೆ ಅಲ್ಲಿಯ ನೇಟಿವಿಟಿಗೆ ತಕ್ಕಂತೆ ಸಂಭಾಷಣೆ ಬರೆಯುವುದು ನಿರ್ದೇಶಕರ ಇಚ್ಛಾಶಕ್ತಿ.

ಐಶ್ವರ್ಯ ಉಪೇಂದ್ರ, ಪ್ರಿಯಾಂಕ ಉಪೇಂದ್ರ

ಬಂಗಾಳಿ ಭಾಷೆ ಬಲ್ಲ 10 ವ್ಯಕ್ತಿಗಳನ್ನು ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ನಿರ್ದೇಶಕರು ಕೆಲವು ಸಂಭಾಷಣೆಯನ್ನು ಅವರಿಂದ ಡಬ್ ಮಾಡಿಸಿಕೊಂಡಿದ್ದಾರೆ. ನಿರ್ದೇಶಕ ಲೋಹಿತ್ ಪ್ರಕಾರ ಚಿತ್ರದಲ್ಲಿ 20 ರಷ್ಟು ಭಾಗ ಬಂಗಾಳಿ ಭಾಷೆಗೆ ಸೀಮಿತವಾಗಿದೆ. ಈ ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ ಎನ್​​​​​ಜಿಒಗಳಿಗೆ ಪಾಠ ಹೇಳಿಕೊಡುವ ಶಿಕ್ಷಕಿ. ಹೆಚ್ಚಿನ ಹೊತ್ತು ರಾತ್ರಿ ವೇಳೆ ಸಿನಿಮಾ ಚಿತ್ರೀಕರಣ ಆಗಿದೆ. ತಾಯಿ ತನ್ನ ಕಳೆದುಹೋದ ಮಗಳನ್ನು ಹುಡುಕಾಡುವುದು ಚಿತ್ರದ ಒನ್​​​​​​​​​ಲೈನ್ ಸ್ಟೋರಿ. ಕಿಶೋರ್​​​​​​​​​​​​​​​​​​​​​​​​ ಖಡಕ್ ಪೊಲೀಸ್ ಅಧಿಕಾರಿ ಆಗಿ ಅಭಿನಯಿಸಿದ್ದಾರೆ. ಹೆಚ್​​​​.ಸಿ. ವೇಣು ಚಿತ್ರದ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ನೋಬಿಲ್ ಪೌಲ್​​​​​​​​​​​​​​​​​ ಸಂಗೀತವಿದೆ. ರವೀಶ್ ಮತ್ತು ಅಕ್ಷಯ್ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.

ಪ್ರಿಯಾಂಕ ಉಪೇಂದ್ರ

TAGGED:

ABOUT THE AUTHOR

...view details