ಕರ್ನಾಟಕ

karnataka

ETV Bharat / sitara

ಹಿಂದಿಗೆ ರೀಮೇಕ್ ಆಗುತ್ತಂತೆ 'ಅರುಂಧತಿ'...ಅನುಷ್ಕಾ ಶೆಟ್ಟಿ ಮಾಡಿದ್ದ ಪಾತ್ರ ಮಾಡ್ತಿರೋ ನಟಿ ಯಾರು...?

2009 ರಲ್ಲಿ ಬಿಡುಗಡೆಯಾಗಿದ್ದ ತೆಲುಗಿನ ಬ್ಲಾಕ್ ಬಸ್ಟರ್ ಸಿನಿಮಾ ಅರುಂಧತಿ ಇದೀಗ ಹಿಂದಿಗೆ ರೀಮೇಕ್ ಆಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ತೆಲುಗಿನಲ್ಲಿ ಅನುಷ್ಕಾ ಶೆಟ್ಟಿ ಮಾಡಿದ್ದ ಪಾತ್ರವನ್ನು ಹಿಂದಿಯಲ್ಲ ಯಾವ ನಟಿ ಮಾಡಬಹುದು ಎಂಬ ಕುತೂಹಲ ಎಲ್ಲರಲ್ಲೂ ಕಾಡುತ್ತಿದೆ.

By

Published : Sep 21, 2019, 11:54 PM IST

ಅರುಂಧತಿ

ಅನುಷ್ಕಾ ಶೆಟ್ಟಿ ಹೆಸರು ಕೇಳಿದೊಡನೆ ನಮ್ಮ ಕಣ್ಣ ಮುಂದೆ ಬರುವುದು 'ಅರುಂಧತಿ' ಸಿನಿಮಾ. ಈ ಸಿನಿಮಾ ಆಕೆಗೆ ಹೆಸರು ತಂದುಕೊಟ್ಟಿದ್ದಲ್ಲದೆ ತೆಲುಗು ಪ್ರೇಕ್ಷಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿದೆ. ಈ ಸಿನಿಮಾ ಈಗ ಹಿಂದಿಗೆ ರೀಮೇಕ್​​​​​ ಆಗುತ್ತಿದೆ ಎನ್ನಲಾಗಿದೆ.

ಕರೀನಾ ಕಪೂರ್

ಕೋಡಿ ರಾಮಕೃಷ್ಣ ನಿರ್ದೇಶನದ ಈ ಸಿನಿಮಾವನ್ನು ಎಂ. ಶ್ಯಾಮ್​ಪ್ರಸಾದ್ ರೆಡ್ಡಿ ನಿರ್ಮಿಸಿದ್ದರು. ಸಿನಿಮಾ ಹಕ್ಕನ್ನು ಈಗಾಗಲೇ ಬಾಲಿವುಡ್​​​​ನ ಪ್ರಮುಖ ನಿರ್ಮಾಣ ಸಂಸ್ಥೆಯೊಂದು ಕೊಂಡುಕೊಂಡಿದೆ ಎನ್ನಲಾಗಿದೆ. ಈಗಾಗಲೇ ಚಿತ್ರಕ್ಕೆ ಸಂಬಂಧಿಸಿದ ಸ್ಕ್ರಿಪ್ಟ್​ ಕೆಲಸ ನಡೆಯುತ್ತಿದ್ದು ತೆಲುಗಿನಲ್ಲಿ ಅನುಷ್ಕಾ ಶೆಟ್ಟಿ ಮಾಡಿದ್ದ ಪಾತ್ರಕ್ಕೆ ಹಿಂದಿಯಲ್ಲಿ ಕರೀನಾ ಕಪೂರ್ ಅಥವಾ ಅನುಷ್ಕಾ ಶರ್ಮ ಯಾರಾದರನ್ನು ಕರೆ ತರಲಿದ್ದಾರೆ ಎನ್ನಲಾಗುತ್ತಿದೆ. 2009 ರಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು. ಸುಮಾರು 10 ವರ್ಷಗಳ ನಂತರ ಸಿನಿಮಾ ರೀಮೇಕ್ ಆಗುತ್ತಿದೆ. ಕರೀನಾ ಕಪೂರ್ ಹಾಗೂ ಅನುಷ್ಕಾ ಶರ್ಮ ಇಬ್ಬರೂ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಇರುವುದರಿಂದ ಇವರಿಬ್ಬರಲ್ಲಿ ಯಾರು ಅರುಂಧತಿ ಆಗಲಿದ್ದಾರೆ ಎನ್ನುವುದು ಇನ್ನೂ ತಿಳಿದುಬಂದಿಲ್ಲ. ಶೀಘ್ರದಲ್ಲೇ ಸಿನಿಮಾಗೆ ಸಂಬಂಧಿಸಿದ ವಿವರಗಳನ್ನು ಪ್ರಕಟಿಸುವುದಾಗಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಒಂದು ವೇಳೆ ನಿಜಕ್ಕೂ 'ಅರುಂಧತಿ' ಹಿಂದಿಗೆ ರೀಮೇಕ್ ಆಗುತ್ತಿದೆ ಎಂದಾದಲ್ಲಿ ಪ್ರೇಕ್ಷಕರ ಕುತೂಹಲ ಮತ್ತಷ್ಟು ಇಮ್ಮಡಿಯಾಗುವುದರಲ್ಲಿ ಅನುಮಾನವೇ ಇಲ್ಲ.

ಅನುಷ್ಕಾ ಶರ್ಮ

ABOUT THE AUTHOR

...view details