ಕರ್ನಾಟಕ

karnataka

ETV Bharat / sitara

ಮತ್ತೆ ಒಂದಾಗಲಿದ್ದಾರಂತೆ ಅಪ್ಪು- ಆನಂದ್​​ರಾಮ್​: ‘ಯುವರತ್ನ’ ಬಳಿಕ ಹೊಸ ಚಿತ್ರ ಘೋಷಣೆ?​ - puneeth rajkumar and anand ram

ಪುನೀತ್ ರಾಜಕುಮಾರ್ ಅಭಿನಯದಲ್ಲಿ ಸಂತೋಷ್ ಆನಂದರಾಮ್, `ರಾಜ್‍ಕುಮಾರ' ಚಿತ್ರ ಮಾಡಿದ್ದರು. ಈಗ`ಯುವರತ್ನ' ಚಿತ್ರದಲ್ಲಿ ಇಬ್ಬರೂ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಎರಡು ಚಿತ್ರಗಳನ್ನು ಯಶಸ್ವಿಯಾಗಿ ಮುಗಿಸಿರುವ ಪುನೀತ್​ ಮತ್ತು ಆನಂದ ರಾಮ್​, ಇದೀಗ ಮೂರನೆಯ ಚಿತ್ರಕ್ಕೆ ಜೊತೆಯಾಗಲಿದ್ದಾರೆ ಎನ್ನಲಾಗ್ತಿದೆ.

puneeth rajkumar and anand ram
ಪುನೀತ್ ರಾಜ್​ಕುಮಾರ್ ಮತ್ತು ಆನಂದ್ ರಾಮ್​

By

Published : Dec 2, 2020, 11:25 AM IST

Updated : Dec 2, 2020, 11:43 AM IST

ಬೆಂಗಳೂರು: ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ' ಚಿತ್ರದ ಚಿತ್ರೀಕರಣ ಮುಗಿದಿದೆ. `ಜೇಮ್ಸ್' ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಅನಂತರ ಪುನೀತ್ ಯಾವ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಪ್ರಶ್ನೆ ಹಲವು ದಿನದಿಂದ ಗಾಂಧಿನಗರ ಗಲ್ಲಿಯಲ್ಲಿ ಹರಿದಾಡಿತ್ತು. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಪುನೀತ್ ಅಭಿಮಾನಿಗಳು ಖುಷ್ ಆಗಿದ್ದಾರೆ.

ಅಂದಹಾಗೆ, ಪುನೀತ್ ರಾಜಕುಮಾರ್ `ಜೇಮ್ಸ್' ಚಿತ್ರದ ನಂತರ ಸಂತೋಷ್ ಆನಂದರಾಮ್ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಚಿತ್ರವನ್ನು ಹೊಂಬಾಳೆ ಪ್ರೊಡಕ್ಷನ್ಸ್​ನಡಿ ವಿಜಯ ಕಿರಂಗದೂರು ನಿರ್ಮಾಣ ಮಾಡಲಿದ್ದಾರಂತೆ. ಹಾಗೇನಾದರೂ ಆದರೆ ಸಂತೋಷ್ ಆನಂದರಾಮ್ ನಿರ್ದೇಶನದಲ್ಲಿ ಅಪ್ಪು ಮೂರನೇ ಸಿನಿಮಾ ಮಾಡಿದಂತಾಗುತ್ತದೆ.

ಈ ಹಿಂದೆ, ಪುನೀತ್ ರಾಜಕುಮಾರ್ ಅಭಿನಯದಲ್ಲಿ ಸಂತೋಷ್ ಆನಂದರಾಮ್, `ರಾಜ್‍ಕುಮಾರ' ಚಿತ್ರ ಮಾಡಿದ್ದರು. ಈಗ`ಯುವರತ್ನ' ಚಿತ್ರದಲ್ಲಿ ಇಬ್ಬರೂ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಎರಡು ಚಿತ್ರಗಳನ್ನು ಯಶಸ್ವಿಯಾಗಿ ಮುಗಿಸಿರುವ ಅವರಿಬ್ಬರೂ, ಇದೀಗ ಮೂರನೆಯ ಚಿತ್ರಕ್ಕೆ ಜೊತೆಯಾಗಲಿದ್ದಾರೆ ಎನ್ನಲಾಗ್ತಿದೆ.

ಹೊಂಬಾಳೆ ಫಿಲಂಸ್ ಜೊತೆಗೆ ಪುನೀತ್ ಅವರ ನಾಲ್ಕನೆಯ ಚಿತ್ರ ಇದಾಗಲಿದೆ. ವಿಜಯ್‍ ಕಿರಂಗದೂರು ಒಡೆತನದ ಈ ಸಂಸ್ಥೆಯ ಮೊದಲ ಚಿತ್ರವೇ ಪುನೀತ್ ಅವರ `ನಿನ್ನಿಂದಲೇ' ಆಗಿತ್ತು. ಜಯಂತ್ ಪರಾಂಜೆ ನಿರ್ದೇಶನದ ಈ ಚಿತ್ರ ಅಷ್ಟೇನೂ ಯಶಸ್ವಿಯಾಗಿರಲಿಲ್ಲ. ಆ ನಂತರ ಹೊಂಬಾಳೆ ಫಿಲಂಸ್‍ಗಾಗಿ ಪುನೀತ್, `ರಾಜ್‍ಕುಮಾರ' ಮತ್ತು `ಯುವರತ್ನ' ಚಿತ್ರಗಳಲ್ಲಿ ನಟಿಸಿದ್ದಾರೆ. ‘ಯುವರತ್ನ' ಚಿತ್ರವು ಪುನೀತ್ ಮತ್ತು ಹೊಂಬಾಳೆ ಫಿಲಂಸ್‍ನ ಹ್ಯಾಟ್ರಿಕ್ ಚಿತ್ರವಾಗಿದ್ದು, ಈಗ ಪವರ್​ ಸ್ಟಾರ್​ ಅಭಿನಯದಲ್ಲಿ ನಾಲ್ಕನೇ ಚಿತ್ರವನ್ನು ನಿರ್ಮಿಸುವುದಕ್ಕೆ ಹೊಂಬಾಳೆ ತಯಾರಾಗಿದೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ.

ಸದ್ಯಕ್ಕೆ ಈ ಚಿತ್ರವು ಮಾತುಕತೆಯ ಹಂತದಲ್ಲಿದ್ದು,`ಯುವರತ್ನ' ಬಿಡುಗಡೆಯಾದ ನಂತರ ಈ ಚಿತ್ರಕ್ಕೊಂದು ವೇಗ ಸಿಗುವ ಸಾಧ್ಯತೆ ಹೆಚ್ಚಿದೆ. `ಯುವರತ್ನ' ಚಿತ್ರವು ಮುಂದಿನ ವರ್ಷ ಯುಗಾದಿ ಹಬ್ಬದ ವೇಳೆ ಬಿಡುಗಡೆಯಾಗುವ ಸಾಧ್ಯತೆ ಇದೆ.

Last Updated : Dec 2, 2020, 11:43 AM IST

ABOUT THE AUTHOR

...view details