ಕರ್ನಾಟಕ

karnataka

ತೆಲುಗು ಸ್ಟಾರ್ ಬಾಲಕೃಷ್ಣ ಜೊತೆಯಾದ 'ಹೆಬ್ಬುಲಿ' ಚಿತ್ರದ ನಾಯಕಿ

ತಮಿಳು ನಟಿ ಅಮಲಾ ಪೌಲ್ ಇದೀಗ ತೆಲುಗು ಸ್ಟಾರ್ ನಂದಮೂರಿ ಬಾಲಕೃಷ್ಣ ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಬೋಯಪಟ್ಟಿ ಶ್ರೀನು ನಿರ್ದೇಶನದ 'ಎನ್​​​​​​ಬಿಕೆ 106' ಚಿತ್ರದಲ್ಲಿ ಅಮಲಾ ನಟಿಸುತ್ತಿದ್ದು ಸಿನಿಮಾ ಶೂಟಿಂಗ್ ಶೀಘ್ರದಲ್ಲೇ ಆರಂಭವಾಗಲಿದೆ.

By

Published : Jul 6, 2020, 12:32 PM IST

Published : Jul 6, 2020, 12:32 PM IST

Amala Paul acting with Nandamuri Balakrishna
ಬಾಲಕೃಷ್ಣ ಜೊತೆಯಾದ ಅಮಲಾ ಪೌಲ್

ಚಿತ್ರರಂಗದಲ್ಲಿ ನಾಯಕನ ವಯಸ್ಸು ಎಷ್ಟೇ ಆದರೂ 20-35 ಒಳಗಿನ ನಾಯಕಿಯರೇ ಜೊತೆಯಾಗುತ್ತಾರೆ. ಇದಕ್ಕೆ ಎಷ್ಟೋ ಉದಾಹರಣೆಗಳಿವೆ. ನಾಯಕನಿಗಿರುವ ಡಿಮ್ಯಾಂಡ್ ಅಂತಾದ್ದು. ಸಿನಿಮಾಗಳಲ್ಲಿ ನಾಯಕಿ ಇರದಿದ್ದರೂ ನಾಯಕ ಬಹಳ ಮುಖ್ಯ ಎನ್ನಬಹುದು.

ನಂದಮೂರಿ ಬಾಲಕೃಷ್ಣ

ವರನಟ ಡಾ. ರಾಜ್​​ಕುಮಾರ್ ಅವರಿಗೆ ನಾಯಕಿಯಾಗಿ ಅಭಿನಯಿಸಿದ್ದ ಪಂಡರೀಬಾಯಿ ಅವರು ನಂತರ ಕೆಲವೊಂದು ಸಿನಿಮಾಗಳಲ್ಲಿ ರಾಜಣ್ಣನಿಗೆ ತಾಯಿಯಾಗಿ ನಟಿಸಿದ್ದರು. 16 ವರ್ಷದ ಶ್ರೀದೇವಿ 56 ವರ್ಷದ ಎನ್​ಟಿಆರ್​​ ಅವರಿಗೆ 'ವೇಟೆಗಾಡು' ಚಿತ್ರಕ್ಕೆ ಜೊತೆಯಾಗಿದ್ದರು. ಇದೀಗ ಕಿಚ್ಚನ ಜೊತೆ 'ಹೆಬ್ಬುಲಿ' ಸಿನಿಮಾದಲ್ಲಿ ನಟಿಸಿದ್ದ ಅಮಲಾ ಪೌಲ್​, ನಂದಮೂರಿ ಬಾಲಕೃಷ್ಣ ಅವರಿಗೆ ಜೊತೆಯಾಗಿದ್ದಾರೆ. ಅಮಲಾ ಪೌಲ್ ಅವರಿಗೆ ಈಗ 30 ವರ್ಷ ವಯಸ್ಸಾದರೆ ಬಾಲಕೃಷ್ಣ ಅವರಿಗೆ 60. ಇಬ್ಬರಿಗೂ 30 ವರ್ಷಗಳ ವಯಸ್ಸಿನ ವ್ಯತ್ಯಾಸವಿದೆ.

ಬಾಲಕೃಷ್ಣ ಜೊತೆಯಾದ ಅಮಲಾ ಪೌಲ್

ಕೆಲವು ದಿನಗಳ ಹಿಂದೆ ಅಮಲಾ ಪೌಲ್ ನಾಯಕಿ ಪ್ರಧಾನ ಚಿತ್ರ 'ಆಡೈ' ನಿಂದ ಬಹಳ ಸುದ್ದಿಯಲ್ಲಿದ್ದರು. ಅವರ 'ಅಧೋ ಅಂದ ಪಾರವೈ ಪೊಲ', 'ಕಡವರ್' ಸಿನಿಮಾಗಳು ಕೂಡಾ ಹೆಸರು ಮಾಡಿದ್ದವು. ಈಗ ನಂದಮೂರಿ ಬಾಲಕೃಷ್ಣ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ಬೋಯಪಟ್ಟಿ ಶ್ರೀನು ನಿರ್ದೇಶನದ 'ಎನ್​​​​​​ಬಿಕೆ 106' ಚಿತ್ರದಲ್ಲಿ ಅಮಲಾ ಪೌಲ್ ಬಾಲಣ್ಣನಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಕೊರೊನಾ ಲಾಕ್​​ಡೌನ್​ ಮುನ್ನವೇ ಆರಂಭವಾದ ಸಿನಿಮಾ ಕೆಲವೇ ದಿನಗಳಲ್ಲಿ ಮತ್ತೆ ಆರಂಭವಾಗಲಿದೆ.

ಅಮಲಾ ಪೌಲ್

ABOUT THE AUTHOR

...view details