ಕರ್ನಾಟಕ

karnataka

ETV Bharat / sitara

ಬರೋಬ್ಬರಿ ಏಳು ವರ್ಷಗಳ ನಂತರ ಬಣ್ಣ ಹಚ್ತಾರಾ 'ಮೋಹಕ ತಾರೆ'?

ನಟಿ ರಮ್ಯಾ ಮತ್ತೆ ನಟನೆಯತ್ತ ಮುಖ ಮಾಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. 2012 ಜೂನ್ ತಿಂಗಳಿನಲ್ಲಿ ‘ದಿಲ್ ಕ ರಾಜ’ ಸಿನಿಮಾ ಕೆಲಸ ಪ್ರಾರಂಭವಾಗಿದ್ದು, ಇದೀಗ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.

By

Published : Oct 26, 2019, 11:28 AM IST

ರಮ್ಯಾ ಮತ್ತು ಪ್ರಜ್ವಲ್​​ ದೇವರಾಜು

ಸ್ಯಾಂಡಲ್​ವುಡ್​​ನ ಮೋಹಕ ತಾರೆ ರಮ್ಯಾ ಸ್ಯಾಂಡಲ್‌ವುಡ್‌ನ ಘಟಾನುಘಟಿಗಳ ಜೊತೆ ಅಭಿನಯಿಸಿ ಸೈ ಎನ್ನಿಸಿಕೊಂಡವರು. ಮಾಜಿ ಸಂಸದೆಯೂ ಆಗಿರುವ ರಮ್ಯಾ ನಟನೆಯಲ್ಲಿ ಬಿಡುಗಡೆಯಾದ ಕೊನೆಯ ಸಿನಿಮಾ ಕೋಡಿ ರಾಮಕೃಷ್ಣ ನಿರ್ದೇಶನದ 'ನಾಗರ ಹಾವು'. ಈ ಸಿನಿಮಾದ ಬಳಿಕ ಇವರ ನಟನೆಯ ಯಾವ ಚಿತ್ರವೂ ತೆರೆ ಕಂಡಿಲ್ಲ.

ಆದ್ರೆ ಇದೀಗ 'ಊರಿಗೊಬ್ಳೆ ಪದ್ಮಾವತಿ' ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ರಮ್ಯಾ ಮತ್ತೆ ನಟನೆಯತ್ತ ಮುಖ ಮಾಡ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. 2012 ಜೂನ್ ತಿಂಗಳಿನಲ್ಲಿ ‘ದಿಲ್ ಕ ರಾಜ’ ಸಿನಿಮಾ ಕೆಲಸ ಶುರುವಾಗಿದ್ದು, ಈ ಚಿತ್ರದಲ್ಲಿ ಪ್ರಜ್ವಲ್​ ದೇವರಾಜ್​​ ಜೊತೆ ರಮ್ಯಾ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಆದ್ರೆ, ರಾಜಕೀಯ ಕೆಲಸಗಳ ಒತ್ತಡದಿಂದ ಈವರೆಗೆ ರಮ್ಯಾ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗದ ಕಾರಣ ದಿಲ್​​ ಕ ರಾಜನನ್ನು ನೋಡಲು ಅಭಿಮಾನಿಗಳಿಗೆ ಸಾಧ್ಯವಾಗಲಿಲ್ಲ.

ದಿಲ್​​ ಕ ರಾಜ ಪೋಸ್ಟರ್​​​

'ದಿಲ್​​​ ಕ ರಾಜ' ಈಗ ರಿಲೀಸ್​ಗೆ ರೆಡಿಯಾಗಿದೆ. ಸಿನಿಮಾ ಕೆಲಸ ಪೂರ್ಣಗೊಳ್ಳಲು ಕೇವಲ 8 ದಿನಗಳ ಶೂಟಿಂಗ್​ ಮಾತ್ರ ಬಾಕಿ ಉಳಿದಿದೆ. ಆದ್ರೆ 7 ವರ್ಷಗಳ ಹಿಂದಿನ ರಮ್ಯಾ ಮತ್ತು ಪ್ರಜ್ವಲ್ ಅವರ​ ದೇಹಸ್ಥಿತಿಗೂ ಈಗಿನದ್ದಕ್ಕೂ ತುಂಬಾ ವ್ಯತ್ಯಾಸವಿದೆ. ಇದರಿಂದ ಸಿನಿಮಾದಲ್ಲಿ ರಮ್ಯಾ ನಟಿಸ್ತಾರಾ? ಇಲ್ವಾ? ಈ ಸಿನಿಮಾ ಬಿಡುಗಡೆಯಾಗುತ್ತಾ ಅನ್ನೋದೇ ಕುತೂಹಲ.

ಚಿತ್ರ ತಂಡ

ಇನ್ನೊಂದು ವಿಶೇಷ ಅಂದ್ರೆ, ನಿರ್ದೇಶಕ ಸೋಮನಾಥ್ ಪಿ ಪಾಟೀಲ್ ಸಿನಿಮಾದ ಟೀಸರ್​ ಬಿಡುಗಡೆ ಮಾಡಿದ್ದಾರೆ. ಇದ್ರಿಂದ ಕುತೂಹಲ ಮತ್ತಷ್ಟು ಹೆಚ್ಚಾಗಿದ್ದು ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

ABOUT THE AUTHOR

...view details